ಆ್ಯಪ್ನಗರ

ಸ್ಪೀಕರ್‌ ಕೆಆರ್‌ ರಮೇಶ್‌ ಕುಮಾರ್‌ ರಾಜೀನಾಮೆ?

ಈ ಬಾರಿಯ ವಿಧಾನಸಭಾ ಸ್ಪೀಕರ್‌ ಆಗಿರುವ ಕೆ.ಆರ್‌. ರಮೇಶ್ ಕುಮಾರ್ ಅತ್ಯಂತ ಕಠಿಣ ಸಮಯಗಳನ್ನು ಎದುರಿಸಿದ್ದಾರೆ. ಸಾಕಷ್ಟು ಒತ್ತಡದಿಂದಲೇ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇತ್ತು.

Vijaya Karnataka Web 28 Jul 2019, 7:26 pm
ಬೆಂಗಳೂರು: ನೂತನ ಸರಕಾರದಲ್ಲಿ ಸ್ಪೀಕರ್‌ ಆಗಿ ಮುಂದುವರಿಯಲು ಇಷ್ಟವಿಲ್ಲ ಎಂದು ಹೇಳುವ ಮೂಲಕ ಕೆ.ಆರ್‌. ರಮೇಶ್‌ ಕುಮಾರ್‌ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
Vijaya Karnataka Web ರಮೇಶ್‌ ಕುಮಾರ್‌
ರಮೇಶ್‌ ಕುಮಾರ್


ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಕೆಆರ್‌ ರಮೇಶ್‌ ಕುಮಾರ್‌ ಮಾತನಾಡಿದರು.

ನಾಲ್ಕು ದಶಕಗಳ ಸಾರ್ವಜನಿಕದ ಪ್ರಮುಖ ಘಟ್ಟದಲ್ಲಿ ನಾನಿದ್ದೇನೆ. ಬಹುಶಃ ಇದು ಕೊನೆಯ ಘಟ್ಟವೂ ಆಗಬಹುದು. ಅತ್ಯಂತ ಗೌರವ, ಜವಾಬ್ದಾರಿಯುತವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದರು.

ನೂತನ ಸರಕಾರದಲ್ಲಿ ಸ್ಪೀಕರ್‌ ಆಗಿ ಮುಂದುವರಿಯಲು ನನಗೆ ಇಷ್ಟವಿಲ್ಲ. ಸೋಮವಾರ ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಎಲ್ಲವನ್ನೂ ಸ್ಪಷ್ಟಪಡಿಸುತ್ತೇನೆ ಎಂದು ರಮೇಶ್‌ ಕುಮಾರ್‌ ತಿಳಿಸಿದರು.

ಸ್ಪೀಕರ್‌ ಆಗಿ ಈ ಬಾರಿ ನನ್ನ ಮೇಲೆ ಸಾಕಷ್ಟು ಒತ್ತಡ ಇತ್ತು. ನ್ಯಾಯಾಂಗದ ನಿಗಾ ಕೂಡ ನನ್ನ ಮೇಲೆ ಇತ್ತು. ಒಟ್ಟಾರೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದ್ದೇನೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಬಹುಮತ ಸಾಬೀತಿಗೆ ಸೋಮವಾರ ಕಲಾಪ ನಡೆಸಲು ಅವಕಾಶ ಕೋರಿದ್ದರು. ಜತೆಗೆ ಹಣಕಾಸಿನ ಮಸೂದೆ ಕೂಡ ಅಂಗೀಕಾರ ಆಗಬೇಕಾಗಿದೆ. ಈ ಸಂಬಂಧ ಅಧಿವೇಶನದಲ್ಲಿ ಎಲ್ಲ ಸದಸ್ಯರು ಭಾಗವಹಿಸಬೇಕು ಎಂದು ನಮ್ಮ ಕಚೇರಿಯಿಂದ ಸೂಚನಾ ಪತ್ರ ಕಳುಹಿಸಲಾಗಿದೆ ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ