ಆ್ಯಪ್ನಗರ

ಸುಧಾಕರ್‌ ನೇಮಕಕ್ಕೆ ಆಕ್ಷೇಪ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಕಾಂಗ್ರೆಸ್‌ ಶಾಸಕ ಡಾ.ಸುಧಾಕರ್‌ ನೇಮಕ ನಿಯಮಬದ್ಧವಲ್ಲ ಎಂದು ವಕೀಲ ಎಸ್‌.ಉಮಾಪತಿ ಸರಕಾರಕ್ಕೆ ದೂರು ಸಲ್ಲಿಸಿದ್ದಾರೆ.

Vijaya Karnataka 22 Jun 2019, 5:00 am
ಬೆಂಗಳೂರು : ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಕಾಂಗ್ರೆಸ್‌ ಶಾಸಕ ಡಾ.ಸುಧಾಕರ್‌ ನೇಮಕ ನಿಯಮಬದ್ಧವಲ್ಲ ಎಂದು ವಕೀಲ ಎಸ್‌.ಉಮಾಪತಿ ಸರಕಾರಕ್ಕೆ ದೂರು ಸಲ್ಲಿಸಿದ್ದಾರೆ.
Vijaya Karnataka Web objection file pollution control board
ಸುಧಾಕರ್‌ ನೇಮಕಕ್ಕೆ ಆಕ್ಷೇಪ


ಮಾಲಿನ್ಯ ನಿಯಂತ್ರಣ ಮಂಡಳಿಗೆ ರಾಜಕೀಯ ನೇಮಕ ಸೂಕ್ತವಲ್ಲ. ಸುಧಾಕರ್‌ ಶಾಸಕರಾಗಿದ್ದರಿಂದ ಇದು ರಾಜಕೀಯ ಪ್ರಾತಿನಿಧ್ಯ ಎನಿಸಿಕೊಳ್ಳುತ್ತದೆ. ತಜ್ಞರನ್ನೇ ನೇಮಿಸಬೇಕೆಂಬ ನಿಯಮವನ್ನು ಈ ಮೂಲಕ ಉಲ್ಲಂಘಿಸಲಾಗಿದೆ ಎಂದು ಅರಣ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಕೊಟ್ಟಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ನೇಮಕದ ವೇಳೆ ಸುಪ್ರೀಂಕೋರ್ಟ್‌ ಹಾಗೂ ರಾಷ್ಟ್ರೀಯ ಹಸಿರು ಪೀಠದ ನಿರ್ದೇಶನವನ್ನೂ ಪಾಲಿಸಿಲ್ಲ. ನೇಮಕ ಸಂಬಂಧ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟವಾಗಿರಬೇಕು. ಅರ್ಜಿ ಬಂದ ಬಳಿಕ ಪರಿಣಿತರು ಮತ್ತು ಅರ್ಹರನ್ನು ಪಾರದರ್ಶಕ ನೆಲೆಯಲ್ಲಿ ನೇಮಕ ಮಾಡಬೇಕಿತ್ತು. ಹಾಗಾಗಿ ನಿಯಮಾನುಸಾರ ಹೊಸ ಅಧ್ಯಕ್ಷರನ್ನು ನೇಮಿಸದಿದ್ದರೆ ಹೋರಾಟ ಕೈಗೆತ್ತಿಕೊಳ್ಳಲಾಗುವುದು,'' ಎಂದು ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ