ಆ್ಯಪ್ನಗರ

ಪೈಲ್ವಾನ್‌ ಸಿನಿಮಾ ಪೈರಸಿ ಮಾಡಿದ್ದ ಆರೋಪಿ ಬಂಧನ

'ಪೈಲ್ವಾನ್‌' ಸಿನಿಮಾ ಪೈರಸಿ ಮಾಡಿ ಇಡೀ ಸಿನಿಮಾದ ಲಿಂಕ್‌ ಅನ್ನು ಸಾಮಾಜಿಕ ತಾಣಗಳಲ್ಲಿವಿನಿಮಯ ...

Vijaya Karnataka 21 Sep 2019, 5:00 am
ಬೆಂಗಳೂರು : 'ಪೈಲ್ವಾನ್‌' ಸಿನಿಮಾ ಪೈರಸಿ ಮಾಡಿ ಇಡೀ ಸಿನಿಮಾದ ಲಿಂಕ್‌ ಅನ್ನು ಸಾಮಾಜಿಕ ತಾಣಗಳಲ್ಲಿವಿನಿಮಯ ಮಾಡಿಕೊಂಡಿದ್ದ ಪ್ರಕರಣದಲ್ಲಿಮೊದಲ ಆರೋಪಿಯನ್ನು ಬಂಧಿಸುವಲ್ಲಿಸೈಬರ್‌ಠಾಣೆ ಅಧಿಕಾರಿಗಳು ಯಶಸ್ವಿ ಆಗಿದ್ದಾರೆ.
Vijaya Karnataka Web film


ನೆಲಮಂಗಲದ ನರಸೀಪುರ ನಿವಾಸಿ ರಾಕೇಶ್‌ ಎಲ್‌ ಅಲಿಯಾಸ್‌ ರಾಕೇಶ್‌ ವಿರಾಟ್‌ (19) ಬಂಧಿತ ಆರೋಪಿ. ಈತನಿಂದ ಒಂದು ಮೊಬೈಲ್‌ ವಶಕ್ಕೆ ಪಡೆಯಲಾಗಿದೆ ಎಂದು ಸೈಬರ್‌ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಪ್ಪೊಪ್ಪಿಕೊಂಡ ಆರೋಪಿ

ರಾಕೇಶ್‌ ವಿರಾಟ್‌ (ಯುವ) ಹೆಸರಿನ ಫೇಸ್‌ಬುಕ್‌ ಖಾತೆ ಹೊಂದಿರುವ ಆರೋಪಿ ಸಿನಿಮಾ ಬಿಡುಗಡೆ ಆದ ದಿನವೇ ಇಡೀ ಸಿನಿಮಾದ ಲಿಂಕ್‌ ವಿನಿಮಯ ಮಾಡಿಕೊಂಡಿದ್ದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ತನ್ನ ಬಳಿ ಇರುವ 'ಪೈಲ್ವಾನ್‌' ಸಿನಿಮಾದ ಲಿಂಕ್‌ ಬಗೆಗಿನ ಸ್ಕ್ರೀನ್‌ ಶಾಟ್‌ ತೆಗೆದು ಫೇಸ್‌ಬುಕ್‌ ಗೆ ಅಪ್ಲೋಡ್‌ ಮಾಡಿದ್ದ ಆರೋಪಿ ಯಾರಿಗಾದರೂ ಲಿಂಕ್‌ ಬೇಕಿದ್ದರೆ ತನ್ನ ಇನ್‌ಬಾಕ್ಸ್‌ ಗೆ ಬಂದು ಚಾಟ್‌ ಮಾಡುವಂತೆ ತಿಳಿಸಿದ್ದ. ಅದರಂತೆ ಇಬ್ಬರಿಗೆ ಇನ್‌ ಬಾP್ಸ… ಮೂಲಕವೇ ಲಿಂಕ್‌ ವಿನಿಮಯ ಮಾಡಿದ್ದ ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಸೆ.16 ರಂದು ಸಿನಿಮಾ ಬಿಡುಗಡೆ ಆದ ದಿನವೇ ಇಡೀ ಸಿನಿಮಾದ ಲಿಂಕ್‌ ಹೊರಗೆ ಬಂದಿದ್ದರ ಬಗ್ಗೆ ಆತಂಕಗೊಂಡಿದ್ದ ಸಿನಿಮಾ ನಿರ್ಮಾಪಕರು ನಗರ ಪೊಲೀಸ್‌ ಕಮಿಷನರ್‌ಗೆ ದೂರು ಸಲ್ಲಿಸಿದ್ದರು.

ಲಿಂಕ್‌ ಸಿಕ್ಕಿದ್ದು ಇನ್ನೂ ನಿಗೂಢ

ರಾಕೇಶ್‌ ವಿರಾಟ್‌ ಸಿನಿಮಾದ ಲಿಂಕ್‌ ಅನ್ನು ಫೇಸ್‌ ಬುಕ್‌ ಮೂಲಕ ವಿನಿಮಯ ಮಾಡಿದ್ದು ಗೊತ್ತಾಗಿದೆ. ಆದರೆ ಈತನಿಗೆ ಲಿಂಕ್‌ ಸಿಕ್ಕಿದ್ದು ಹೇಗೆ ಎನ್ನುವ ಬಗ್ಗೆ ತನಿಖೆ ಮುಂದುವರಿದಿದೆ. ಸಿನಿಮಾ ಬಿಡುಗಡೆ ಆದ ದಿನ ಮೊದಲ ಶೋನಲ್ಲೇ ಯಾವುದೋ ಮಾಲ್‌ನಲ್ಲಿಕುಳಿತವರು ಸಿನಿಮಾವನ್ನು ಮೊಬೈಲ್‌ ಅಥವಾ ಕ್ಯಾಮೆರಾದಿಂದ ಚಿತ್ರೀಕರಿಸಿರುವ ಸಾಧ್ಯತೆಗಳಿವೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿಹರಿ ಬಿಟ್ಟಿದ್ದಾರೆ ಎನ್ನುವುದು ಸೈಬರ್‌ಪೊಲೀಸರ ಅನುಮಾನವಾಗಿದೆ. ಈ ಬಗ್ಗೆ ಬಂಧಿತ ಆರೋಪಿಯ ವಿಚಾರಣೆ ತೀವ್ರಗೊಂಡಿದ್ದು ಹೆಚ್ಚಿನ ಮಾಹಿತಿ ಗೊತ್ತಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಮಿಷನರ್‌ಗೆ ಅಭಿನಂದನೆ

ದೂರು ನೀಡಿದ ಎರಡೇ ದಿನದಲ್ಲಿಪೈರಸಿ ಮಾಫಿಯಾದ ಆರೋಪಿಯನ್ನು ಬಂಧಿಸಿರುವುದು ಕನ್ನಡ ಸಿನಿಮಾ ರಂಗದ ಬೆಳವಣಿಗೆಗೆ ಆಶಾದಾಯಕ ಬೆಳವಣಿಗೆ ಆಗಿದೆ ಎಂದು ಪೈಲ್ವಾನ್‌ ಚಿತ್ರತಂಡ ನಗರ ಪೊಲೀಸ್‌ ಕಮಿಷನರ್‌ಭಾಸ್ಕರ್‌ರಾವ್‌ ಹಾಗೂ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ , ಡಿಸಿಪಿ ರವಿಕುಮಾರ್‌ಅವರಿಗೆ ಅಭಿನಂದನೆ ಸಲ್ಲಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ