ಆ್ಯಪ್ನಗರ

ದಂಪತಿ ಪಾಕ್‌ಗೆ ಬಿಟ್ಟುಬರಲು ಕರೆದೊಯ್ದ ಪೊಲೀಸರು

ನಗರದಲ್ಲಿ ಅಕ್ರಮವಾಗಿ ನೆಲೆಸಿ ಬಂಧಿತರಾಗಿದ್ದ ಪಾಕಿಸ್ತಾನ ಮೂಲದ ದಂಪತಿಯನ್ನು ಹೈಕೋರ್ಟ್‌ ಆದೇಶದಂತೆ ವಾಪಾಸ್‌ ಪಾಕಿಸ್ತಾನಕ್ಕೆ ಬಿಟ್ಟು ಬರುವ ...

Vijaya Karnataka 11 May 2019, 5:00 am
ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿ ಬಂಧಿತರಾಗಿದ್ದ ಪಾಕಿಸ್ತಾನ ಮೂಲದ ದಂಪತಿಯನ್ನು ಹೈಕೋರ್ಟ್‌ ಆದೇಶದಂತೆ ವಾಪಾಸ್‌ ಪಾಕಿಸ್ತಾನಕ್ಕೆ ಬಿಟ್ಟು ಬರುವ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಶುಕ್ರವಾರ ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು ದಂಪತಿ ಸಮೇತ ವಿಮಾನ ಹತ್ತಿದ್ದಾರೆ.
Vijaya Karnataka Web pakistan couple deportation
ದಂಪತಿ ಪಾಕ್‌ಗೆ ಬಿಟ್ಟುಬರಲು ಕರೆದೊಯ್ದ ಪೊಲೀಸರು


ಕಿರಣ್‌ ಗುಲಾಮ್‌ ಅಲಿ, ಖಾಸಿಫ್‌ ಶಂಶುದ್ದೀನ್‌ ಬಂಧಿತ ದಂಪತಿ. ಕುಮಾರಸ್ವಾಮಿ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದ ದಂಪತಿಯನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಅಕ್ರಮವಾಗಿ ಅವರು ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ವಾಪಾಸ್‌ ಅವರ ಮಾತೃದೇಶಕ್ಕೆ ಬಿಟ್ಟು ಬರಲು ಹೈಕೋರ್ಟ್‌ ಇತ್ತೀಚಿಗೆ ಸೂಚನೆ ನೀಡಿದ್ದಲ್ಲದೆ 2 ವಾರ ಕಾಲ ಹೆಚ್ಚುವರಿ ಅವಧಿಯ ಗಡಿಯನ್ನೂ ನಗರ ಪೊಲೀಸ್‌ ಕಮಿಷನರೇಟ್‌ಗೆ ನೀಡಿತ್ತು.

ದಂಪತಿ ಕರಾಚಿ ಜಿಲ್ಲೆಯ ಚಕ್ರಾಘೋಟ್‌ ಪ್ರದೇಶದವರಾಗಿದ್ದು, ಪರಸ್ಪರ ಪ್ರೀತಿಸಿ ಇವರ ಪ್ರೀತಿಗೆ ಎರಡೂ ಮನೆಯವರಿಂದ ಆಕ್ಷೇಪ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಭಾರತಕ್ಕೆ ಬಂದು ನೆಲೆಸಿದ್ದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದರು. ದಂಪತಿ ಬಂಧಿತರಾದಾಗ ಪತ್ನಿ 7 ತಿಂಗಳ ಗರ್ಭಿಣಿ ಆಗಿದ್ದರು. ಜೈಲಿನಲ್ಲೇ ಮಗುವಿಗೆ ಜನ್ಮ ನೀಡಿದ್ದರು. ಕೇಂದ್ರ ಸರಕಾರ ಕೂಡ ದಂಪತಿ ವಿರುದ್ಧ ಯಾವುದೇ ಪ್ರಕರಣಗಳಿಲ್ಲ ಎಂದು ಮೆಮೋ ಸಲ್ಲಿಸಿತ್ತು. ನ್ಯಾ.ಅರವಿಂದ್‌ ಕುಮಾರ್‌ ಅವರಿದ್ದ ನ್ಯಾಯಪೀಠ ಏ.26ರಂದು,''ದಂಪತಿ ಒಂದು ಕ್ಷಣವೂ ಇಲ್ಲಿರಬಾರದು, ಮೇ 5ರೊಳಗೆ ಗಡಿಪಾರು ಮಾಡಿ ''ಎಂದು ಆದೇಶಿಸಿತ್ತು. ಕೇಂದ್ರ ಸರಕಾರ ನಿಯಮ ಪಾಲನೆ ಹಿನ್ನೆಲೆಯಲ್ಲಿ ಎರಡು ವಾರ ವಿಸ್ತರಣೆ ಮಾಡಿತ್ತು. ಈ ವೇಳೆ ಎಫ್‌ಆರ್‌ ಆರ್‌ ಒ ಮುಖ್ಯಸ್ಥ ಲಾಬೂರಾಮ್‌, ದಂಪತಿಯ ಗಡಿಪಾರಿಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ