ಆ್ಯಪ್ನಗರ

ತಾಂತ್ರಿಕ ಕಾರಣದಿಂದ ನೆರೆ ಪೀಡಿತ ಪ್ರದೇಶಗಳಲ್ಲಿ ಪಡಿತರ ವಿತರಣೆ ನಿಲ್ಲಬಾರದು

ಅನ್ನಭಾಗ್ಯ ಯೋಜನೆಯಡಿ ತಾಂತ್ರಿಕ ಕಾರಣ ನೆಪವೊಡ್ಡಿ ಅರ್ಹ ಫಲಾನುಭವಿಗಳಿಗೆ ಪಡಿತರ ನಿರಾಕರಿಸಬಾರದೆಂದು ರಾಜ್ಯ ಸರಕಾರ ಸ್ಪಷ್ಟ ಸೂಚನೆ ನೀಡಿದೆ.

Vijaya Karnataka 8 Sep 2019, 5:00 am
ಬೆಂಗಳೂರು : ಅನ್ನಭಾಗ್ಯ ಯೋಜನೆಯಡಿ ತಾಂತ್ರಿಕ ಕಾರಣ ನೆಪವೊಡ್ಡಿ ಅರ್ಹ ಫಲಾನುಭವಿಗಳಿಗೆ ಪಡಿತರ ನಿರಾಕರಿಸಬಾರದೆಂದು ರಾಜ್ಯ ಸರಕಾರ ಸ್ಪಷ್ಟ ಸೂಚನೆ ನೀಡಿದೆ.
Vijaya Karnataka Web pds continued govt
ತಾಂತ್ರಿಕ ಕಾರಣದಿಂದ ನೆರೆ ಪೀಡಿತ ಪ್ರದೇಶಗಳಲ್ಲಿ ಪಡಿತರ ವಿತರಣೆ ನಿಲ್ಲಬಾರದು


ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಇಂಟರ್‌ ನೆಟ್‌ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಬಯೋಮೆಟ್ರಿಕ್‌ ಬಳಕೆಯಲ್ಲಿ ತೊಂದರೆಯಾಗಿ ಅರ್ಹರಿಗೆ ಪಡಿತರ ನಿರಾಕರಿಸಲಾಗುತ್ತಿದೆ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಸರಕಾರ ಈ ಸೂಚನೆ ನೀಡಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ಬಯೋಮೆಟ್ರಿಕ್‌, ಆಧಾರ್‌, ಪಡಿತರ ಕಾರ್ಡ್‌ ಇಲ್ಲವೇ ಬೇರಾವುದೇ ದಾಖಲೆಗಳಿಗೆ ಒತ್ತಾಯ ಮಾಡದೇ ಫಲಾನುಭವಿಗಳಿಗೆ ಹೆಸರು, ವಿಳಾಸ ಹೊಂದಾಣಿಕೆ ಮಾಡಿಕೊಂಡು ಪಡಿತರ ವಿತರಿಸಬೇಕು, ಮುಂದಿನ ಮೂರು ತಿಂಗಳು ಇಲ್ಲವೇ ಜಿಲ್ಲಾಧಿಕಾರಿಗಳ ವಿವೇಚನೆಯಂತೆ ಈ ವ್ಯವಸ್ಥೆ ಮುಂದುವರಿಯಲಿದೆ. ಯಾರಾದರೂ ಪಡಿತರ ಚೀಟಿ ಕಳೆದುಕೊಂಡಿದ್ದರೆ ತಕ್ಷಣ ಗುರುತಿಸಿ ಕೊಡಬೇಕು, ಇದಕ್ಕಾಗಿ ನೆರೆ ಪೀಡಿತ ಪ್ರದೇಶಗಳಲ್ಲಿ ವಿಶೇಷ ಆಂದೋಲನ ಕೈಗೆತ್ತಿಕೊಳ್ಳಬೇಕೆಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ