ಆ್ಯಪ್ನಗರ

ಶಾಸಕರು ಸಚಿವರು ಸೌಜನ್ಯದಿಂದ ವರ್ತಿಸಬೇಕು, ಜನ ನಮ್ಮ ನಡವಳಿಕೆಯನ್ನು ಗಮನಿಸುತ್ತಾರೆ; ಸಿದ್ದರಾಮಯ್ಯ

ಸಾರ್ವಜನಿಕವಾಗಿ ಗಲಾಟೆ ಮಾಡುವುದು ತಪ್ಪು ಎಂದು ಅಭಿಪ್ರಾಯಪಟ್ಟಿರುವ ಸಿದ್ದರಾಮಯ್ಯ, ಶಾಸಕರ ಜೊತೆ ಸಚಿವರು, ಸಚಿವರ ಜೊತೆ ಶಾಸಕರು ಸೌಜನ್ಯದಿಂದ ವರ್ತನೆ ಮಾಡಬೇಕು ವರ್ತನೆ ಮಾಡಬೇಕು ಎಂದು ಹೇಳಿದ್ದಾರೆ.

Vijaya Karnataka Web 21 Sep 2020, 3:55 pm
ಬೆಂಗಳೂರು: ಕಡೂರು ಶಾಸಕ ಬೆಳ್ಳಿ ಪ್ರಕಾಶ ಹಾಗೂ ಸಚಿವ ನಾರಾಯಣಗೌಡ ನಡುವಿನ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
Vijaya Karnataka Web Siddaramaiah


ಅಧಿವೇಶನ ಮೊಟಕುಗೊಳಿಸಲು ಕಾಂಗ್ರೆಸ್‌ ವಿರೋಧ; ಕನಿಷ್ಠ 15 ದಿನಗಳ ಕಾಲ ಸದನ ನಡೆಸುವಂ

ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಬ್ಬರ ನಡುವೆ ಏನು ನಡೆದಿದೆ ಎಂಬುವುದು ಗೊತ್ತಿಲ್ಲ, ನಾನು ಲಾಂಜ್‌ಗೆ ಹೋಗುತ್ತಿದ್ದಾಗ ಕೂಗಾಡುತ್ತಿದ್ದರು. ಕ್ಷೇತ್ರದ ವಿಚಾರವಾಗಿ, ಅನುದಾನ ವಿಚಾರವಾಗಿ ಗಲಾಟೆ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ, ಯಾರೇ ಆಗಲಿ ಶಾಸಕರು ಸಚಿವರು ಸೌಜನ್ಯದಿಂದ ವರ್ತಿಸಬೇಕು. ನಮ್ಮ ನಡವಳಿಕೆಯನ್ನು ಜನರು ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಶನಿವಾರದವರೆಗೆ ವಿಧಾನಸಭಾ ಅಧಿವೇಶನ ನಡೆಸಲು ಸದನ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಇನ್ನು ಸಾರ್ವಜನಿಕವಾಗಿ ಗಲಾಟೆ ಮಾಡುವುದು ತಪ್ಪು ಎಂದು ಅಭಿಪ್ರಾಯಪಟ್ಟಿರುವ ಸಿದ್ದರಾಮಯ್ಯ, ಶಾಸಕರ ಜೊತೆ ಸಚಿವರು, ಸಚಿವರ ಜೊತೆ ಶಾಸಕರು ಸೌಜನ್ಯದಿಂದ ವರ್ತನೆ ಮಾಡಬೇಕು ವರ್ತನೆ ಮಾಡಬೇಕು ಎಂದು ಹೇಳಿದ್ದಾರೆ. ತೋಟಗಾರಿಕಾ ಸಚಿವ ನಾರಾಯಣ ಗೌಡ ಹಾಗೂ ಕಡೂರು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ನಡುವೆ ಇಂದು ಮಧ್ಯಾಹ್ನ ಜಟಾಪಟಿ ಉಂಟಾಗಿತ್ತು.

‘ಈ ಬಾರಿಯ ಅಧಿವೇಶನದಲ್ಲಿ ಜನವಿರೋಧಿ ಬಿಲ್‌ಗಳು ಹೆಚ್ಚಾಗಿವೆ’; ಸಿದ್ದರಾಮಯ್ಯ

ಇಬ್ಬರೂ ಬಿಜೆಪಿ ನಾಯಕರು ಪರಸ್ಪರ ಏಕವಚನದಲ್ಲಿ ಬೈದುಕೊಂಡು ವಾಗ್ವಾದ ನಡೆಸಿದ್ದರು. ಶಾಸಕರ ಕ್ಯಾಂಟೀನ್‌ನಲ್ಲಿ ಕಿತ್ತಾಟ ನಡೆಸಿದ ವೇಳೆ ಶಾಸಕ ಬೆಳ್ಳಿ ಪ್ರಕಾಶ್ ಅವರು ಯಾವ ಕೆಲಸನೂ ಮಾಡೋ ಯೋಗ್ಯತೆ ಇಲ್ಲ, ಕ್ಷೇತ್ರದ ಕೆಲಸ ಮಾಡದ ನೀನು ಎಂತಹ ಸಚಿವ ಎಂದು ಸಚಿವ ನಾರಾಯಣ್ ಗೌಡ ವಿರುದ್ಧ ಕಿಡಿಕಾರಿದ್ದರು. ಈ ವೇಳೆ ಈ ವೇಳೆ ನೀನು ನನ್ನ ಕಛೇರಿಗೆ ಬಂದು ಮಾತನಾಡು‌ ಎಂದ ನಾರಾಯಣ್ ಗೌಡ ಅವರಿಗೆ ನಾನೇಕೆ ನಿನ್ನ ಕಚೇರಿಗೆ ಬರಲಿ ಎಂದು‌ ಕೆಟ್ಟ ಶಬ್ದದಿಂದಲೇ ಗೌಡರಿಗೆ ಅವಾಜ್ ಹಾಕಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ