ಆ್ಯಪ್ನಗರ

ಪೊಲೀಸ್ ಇಲಾಖೆಯಲ್ಲಿ ಫೋನ್‌ ಕದ್ದಾಲಿಕೆ ಸದ್ದು: ತನಿಖೆಗೆ ಆದೇಶ

ದೂರವಾಣಿ ಕದ್ದಾಲಿಕೆ ಪೊಲೀಸ್‌ ಇಲಾಖೆಯಲ್ಲಿ ಮತ್ತೆ ಸದ್ದು ಮಾಡಿದೆ. ರಾಜಕಾರಣಿಗಳ ಫೋನ್‌ ಕದ್ದಾಲಿಕೆ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಪೊಲೀಸ್‌ ಇಲಾಖೆಯಲ್ಲೇ ದೂರವಾಣಿ ಕದ್ದಾಲಿಕೆ ಆಗಿರುವ ಕುರಿತು ತನಿಖೆಗೆ ಆದೇಶಿಸಲಾಗಿದೆ.

Vijaya Karnataka 8 Aug 2019, 9:41 pm
ಬೆಂಗಳೂರು: ಪೊಲೀಸ್‌ ಕಮೀಷನರ್‌ ಹುದ್ದೆಗೇರುವ ಮುನ್ನ ಭಾಸ್ಕರ್‌ ರಾವ್‌ ಅವರ ಫೋನ್‌ ಕದ್ದು ಆಲಿಸಿರುವ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.
Vijaya Karnataka Web ಪೊಲೀಸ್‌ ಇಲಾಖೆ
ಪೊಲೀಸ್ ಇಲಾಖೆ


ತಮ್ಮ ಫೋನ್‌ ಕದ್ದಾಲಿಕೆ ಸಂಬಂಧ ಬುಧವಾರವೇ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕಿ ನೀಲಮಣಿ ಎನ್‌ ರಾಜು ಅವರಿಗೆ ದೂರು ನೀಡಿರುವ ಭಾಸ್ಕರ್‌ ರಾವ್‌ ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ಸಂದೀಪ್‌ ಪಾಟೀಲ್‌ ಅವರಿಗೆ ತನಿಖೆಯ ಹೊಣೆ ವಹಿಸಲಾಗಿದೆ. ಆದಷ್ಟು ಬೇಗ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ.

ವಂಚನೆ ಪ್ರಕರಣವೊಂದರಲ್ಲಿ ಸಿಸಿಬಿ ಪೊಲೀಸರಿಗೆ ಬೇಕಾಗಿದ್ದ ಫರಾಜ್‌ ಎಂಬ ಆರೋಪಿಯ ಫೋನನ್ನು ಟ್ಯಾಪ್‌ ಮಾಡಲಾಗಿತ್ತು. ಆ ವೇಳೆ ಆತ ಹಿಂದಿನ ಕೆಎಸ್‌ಆರ್‌ಪಿ ಎಡಿಜಿಪಿ ಆಗಿದ್ದ ಭಾಸ್ಕರ್‌ ರಾವ್‌ ಅವರಿಗೆ ಕರೆ ಮಾಡಿದ್ದ. ಈ ಫೋನ್‌ ಸಂಭಾಷಣೆಯನ್ನು ಕಾನೂನಿಗೆ ವಿರುದ್ಧವಾಗಿ ಬಹಿರಂಗಪಡಿಸಲಾಗಿದೆ. ಭಾಸ್ಕರ್‌ ರಾವ್‌ ಅವರ ಸಂಭಾಷಣೆಯನ್ನು ನಿಯಮ ಬಾಹಿರವಾಗಿ ಕದ್ದು ಆಲಿಸಿದ್ದಲ್ಲದೆ ಈ ಸಂಭಾಷಣೆಯ ತುಣುಕನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಭಾಸ್ಕರ್‌ ರಾವ್‌ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ