ಆ್ಯಪ್ನಗರ

ಮಾನಸ ಸರೋವರ ಯಾತ್ರೆ: ಅಪಾಯದಿಂದ ಪಾರಾದ ಕನ್ನಡಿಗರು

ಮಾನಸ ಸರೋವರ ಯಾತ್ರೆಗೆ ತೆರಳಿದ್ದ ರಾಜ್ಯದ ಮಂದಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ್ದರೂ, ಎಲ್ಲರೂ ಸುರಕ್ಷಿತವಾಗಿದ್ದಾರೆ. ಯಾವುದೇ ಅವಘಡ ಸಂಭವಿಸಿಲ್ಲ ಎಂದು ವರದಿಯಾಗಿದೆ.

Vijaya Karnataka Web 3 Jul 2018, 5:38 pm
ಮೈಸೂರು: ಮಾನಸ ಸರೋವರ ಯಾತ್ರೆಗೆ ತೆರಳಿದ್ದ ರಾಜ್ಯದ ಮಂದಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ್ದರೂ, ಎಲ್ಲರೂ ಸುರಕ್ಷಿತವಾಗಿದ್ದಾರೆ. ಯಾವುದೇ ಅವಘಡ ಸಂಭವಿಸಿಲ್ಲ ಎಂದು ವರದಿಯಾಗಿದೆ.
Vijaya Karnataka Web Chikmagalore youth.


ಮೈಸೂರಿನಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಮೈಸೂರಿನ ದಂಪತಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೇ ಕುಟುಂಬದ ಹತ್ತು ಮಂದಿ ಸುರಕ್ಷಿತವಾಗಿದ್ದಾರೆ. ನೇಪಾಳದ ಸಿನಿಕೋಟ್‌ನಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ 250 ಮಂದಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದು, ಅದರಲ್ಲಿ ಮೈಸೂರಿನ ನಂಜೇಗೌಡ ಮತ್ತು ಚಂದ್ರಕಲಾ ದಂಪತಿ ಕೂಡ ಇದ್ದಾರೆ.

ರಾಜ್ಯದ ಯಾತ್ರಿಕರು ಸುರಕ್ಷಿತ

ಅದೇ ಸ್ಥಳದಿಂದ ಮೈಸೂರಿನ ರಾಮಕೃಷ್ಣ ನಗರದ ಸುಧೀರ್ ಪ್ರಭಾಕರ್, ಜಗದೀಶ್ವರಿ ಸುಧೀರ್, ಪ್ರೇಮಾ, ಅಮೃತಾ, ದ್ರಾಕ್ಷಾಯಿಣಿ, ಗಿರೀಶ್, ಚೈತ್ರಾ ಗಿರೀಶ್, ಪೂರ್ಣಿಮಾ, ತೇಜಸ್ವಿನಿ, ಜಯಶ್ರೀ ಸೇರಿದಂತೆ ಹತ್ತು ಮಂದಿ ಯಾತ್ರಾರ್ಥಿಗಳು ಪಾರಾಗಿದ್ದಾರೆ. ಅನಾಹುತ ಸಂಭವಿಸುವ ಎರಡು ದಿನದ ಮುಂಚೆ ಅದೇ ಸ್ಥಳದಲ್ಲಿ ತಂಗಿದ್ದ ಈ ಕುಟುಂಬ ಪಾರಾಗಿದೆ.

ಸಂಪರ್ಕಕ್ಕೆ ಸಿಕ್ಕ ದರ್ಶನ್

ಚಿಕ್ಕಮಗಳೂರು ಮೂಲದ ಯಾತ್ರಾರ್ಥಿ ದರ್ಶನ್ ಬಿ. ಎನ್ ಈಗ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಅವರು ತಂದೆ-ತಾಯಿಗೆ ಕರೆ ಮಾಡಿ ಮಾತನಾಡಿದ್ದಾರೆ.

ನೇಪಾಳದ ಮಿಲಿಟರಿ ಕ್ಯಾಂಪ್‍ನಲ್ಲಿ ಇರೋದಾಗಿ ಮಾಹಿತಿ ನೀಡಿದ್ದಾರೆ. ಮೂರು ದಿನಗಳಿಂದ ದರ್ಶನ್‌ ನಾಪತ್ತೆಯಾಗಿದ್ದು ಭಾರಿ ಆತಂಕಕ್ಕೆ ಕಾರಣವಾಗಿತ್ತು.

ಭಾನುವಾರದಿಂದ ಸಂಪರ್ಕಕ್ಕೆ ಸಿಗದ ದರ್ಶನ್, ಮಂಗಳವಾರ ಕರೆ ಮಾಡಿ ಸುರಕ್ಷಿತವಾಗಿರೋದಾಗಿ ತಿಳಿಸಿದ್ದು, ಸದ್ಯದಲ್ಲೇ ಊರಿಗೆ ಬರುವುದಾಗಿ ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬುಕ್ಕಂಬುದಿಯಲ್ಲಿ ದೇವಾಲಯದ ಪುರೋಹಿತರಾಗಿದ್ದ ದರ್ಶನ್ ಮಾನಸ ಪರ್ವತಕ್ಕೆ ಹೋಗುವುದಾಗಿ ಹೇಳಿ ಬೆಂಗಳೂರಿನಿಂದ ಉತ್ತರ ಭಾರತ ಪ್ರವಾಸಕ್ಕೆ ಜೂನ್ 21ರಂದು ತೆರಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ