ಆ್ಯಪ್ನಗರ

Budget 2019: ಹೇಗಿದೆ ಜೋಷ್, ಪಿಯೂಷ್ ಘೋಷ

ಜನಮನ ಸೂರೆಗೊಂಡ ಹಿಂದಿ ಚಿತ್ರ 'ಉರಿ- ದಿ ಸರ್ಜಿಕಲ್‌ ಸ್ಟೈಕ್‌' ಚಿತ್ರದ, 'ಹೇಗಿದೆ ನಮ್ಮ ಜೋಷ್‌ ?' ಎಂಬ ಆಕರ್ಷಕ ಡೈಲಾಗ್‌ ಕೂಡ ಬಜೆಟ್‌ ಅಧಿವೇಶನದಲ್ಲೂ ಕೇಳಿಬಂತು.

Vijaya Karnataka 2 Feb 2019, 5:00 am
ಜನಮನ ಸೂರೆಗೊಂಡ ಹಿಂದಿ ಚಿತ್ರ 'ಉರಿ- ದಿ ಸರ್ಜಿಕಲ್‌ ಸ್ಟೈಕ್‌' ಚಿತ್ರದ, 'ಹೇಗಿದೆ ನಮ್ಮ ಜೋಷ್‌ ?' ಎಂಬ ಆಕರ್ಷಕ ಡೈಲಾಗ್‌ ಕೂಡ ಬಜೆಟ್‌ ಅಧಿವೇಶನದಲ್ಲೂ ಕೇಳಿಬಂತು.
Vijaya Karnataka Web piyush


ಬಜೆಟ್‌ ಮಂಡಿಸುವ ಸಂದರ್ಭದಲ್ಲಿ ವಿತ್ತ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ ಥಟ್ಟನೇ ಉರಿ ಚಿತ್ರ ನೆನಪಾಯಿತು. ''ನಾನು ಉರಿ ಚಿತ್ರ ನೋಡಿದೆ. ಅದು ಬಹಳ ಇಷ್ಟವಾಯಿತು. ಅದೆಂಥಾ ಸಾಮರ್ಥ್ಯ‌(ಸೇನಾಪಡೆಯದು) ಅಲ್ಲಿದೆ. ಆ ಸಿನಿಮಾ ನನಗೆ ಬಹಳ ಸೊಬಗೆನಿಸಿತು..,'' ಎಂದು ಮನದುಂಬಿ ಹೊಗಳಿದರು.

ಈ ಡೈಲಾಗ್‌ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಸೇರಿದಂತೆ ಇತರೆ ಸದಸ್ಯರಿಗೂ ಪ್ರೇರಣೆ ನೀಡಿದ ಪರಿಣಾಮ, ಎಲ್ಲರೂ, 'ಹೇಗಿದೆ ನಮ್ಮ ಜೋಷ್‌ ?' ಎಂದು ಡೈಲಾಗ್‌ಗೆ ಸದನದಲ್ಲಿ ಮರುಜೀವ ತುಂಬಿದರು.

ಗೋಯಲ್‌ ಅವರು ತಮ್ಮ ಬಜೆಟ್‌ನಲ್ಲಿ ಎರಡು ಬಾರಿ ಈ ಸಂಭಾಷಣೆಯನ್ನು ಪ್ರಸ್ತಾಪಿಸಿದರು.

ಮೂರು ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಉರಿ ಸೇನಾ ಕ್ಯಾಂಪ್‌ ಮೇಲೆ ಪಾಕ್‌ ಪ್ರಚೋಚಿತ ದಾಳಿ ನಡೆದ ಬಳಿಕ, ನಮ್ಮ ಯೋಧರು ಗಡಿಯುದ್ದಕ್ಕೂ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿ ಭಯೋತ್ಪಾದಕರನ್ನು ಸದೆಬಡಿದಿದ್ದರು. ಹಾಗಾಗಿ ಈ ಡೈಲಾಗ್‌ ಬಿಜೆಪಿಯವರಿಗೆ ಪ್ರಿಯವೆನಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರೂ ಇತ್ತೀಚಿನ ತಮ್ಮ ಸಾರ್ವಜನಿಕ ರಾರ‍ಯಲಿಯಲ್ಲಿ ಹೇಗಿದೆ ಜೋಷ್‌ ಎಂಬ ಇದೇ ಡೈಲಾಗ್‌ ಅನ್ನು ಪ್ರಯೋಗಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ