ಆ್ಯಪ್ನಗರ

PM Modi: ಬಸವೇಶ್ವರ ಪ್ರತಿಮೆ ಅನಾವರಣಗೊಂಡ ಲಂಡನ್‌ನಲ್ಲೇ ಭಾರತದ ಪ್ರಜಾಪ್ರಭುತ್ವಕ್ಕೆ ಅವಮಾನ: ಪ್ರಧಾನಿ ಮೋದಿ

PM Modi In Dharwad: ಮಂಡ್ಯದಲ್ಲಿ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ, ನಂತರ ಧಾರವಾಡದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಐಐಟಿ ಕ್ಯಾಂಪಸ್ ಉದ್ಘಾಟನೆ ಮಾಡಿದರು. ಮಂಡ್ಯದಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೋದಿಗೆ ಸಾಥ್ ನೀಡಿದ್ದರು. ಇನ್ನು ಧಾರವಾಡದಲ್ಲಿ ಪ್ರಧಾನಿ ಮೋದಿ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋ‍ಷಿ ಸಾಥ್ ನೀಡಿದ್ದರೆ, ಸಿಎಂ ಕೂಡಾ ಪ್ರಧಾನಿ ಅವರ ಜೊತೆಗಿದ್ದರು.

Authored byದಿಲೀಪ್ ಡಿ. ಆರ್. | Vijaya Karnataka Web 12 Mar 2023, 5:28 pm

ಹೈಲೈಟ್ಸ್‌:

  • ಧಾರವಾಡ ಪೇಡದ ಸ್ವಾದವನ್ನು ನೆನಪು ಮಾಡಿಕೊಂಡ ಪ್ರಧಾನಿ
  • ಧಾರವಾಡದ ಕಲೆ, ಸಂಸ್ಕೃತಿ ಹಾಗೂ ವಾಣಿಜ್ಯ ಮಹತ್ವ ಬಣ್ಣಿಸಿದ ಮೋದಿ
  • ಧಾರವಾಡ ಐಐಟಿ ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಮಾತು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web modi dharwad
ನಾವು ಶಿಲಾನ್ಯಾಸ ಮಾಡಿ ಮರೆತು ಹೋಗೋದಿಲ್ಲ, ಉದ್ಘಾಟನೆಯನ್ನೂ ಮಾಡ್ತೇವೆ! ಪ್ರಧಾನಿ ಮೋದಿ
ಧಾರವಾಡ: ಪೇಡಾ ನಗರಿ ಹಾಗೂ ರಾಜ್ಯದ ವಾಣಿಜ್ಯ ರಾಜಧಾನಿ ಎಂದೇ ಹೆಸರಾದ ಧಾರವಾಡದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಐಐಟಿ ಕ್ಯಾಂಪಸ್‌ ಅನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಅವರ ಜೊತೆಗಿದ್ದರು. ಐಐಟಿ ಕ್ಯಾಂಪಸ್ ಉದ್ಘಾಟನೆ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಕೈಗೊಂಡ ಹಲವು ಯೋಜನೆಗಳಿಗೆ ಚಾಲನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಜಗದ್ಗುರು ಬಸವೇಶ್ವರರನ್ನು ಸ್ಮರಿಸುತ್ತಾ, ಕನ್ನಡದಲ್ಲಿ ತಮ್ಮ ಭಾಷಣ ಆರಂಭಿಸಿದರು.
PM Modi: ಕಾಂಗ್ರೆಸ್ ಪಕ್ಷ ನನ್ನ ಸಮಾಧಿಗೆ ಗುಂಡಿ ತೋಡುವ ಕನಸು ಕಾಣ್ತಿದೆ: ಪ್ರಧಾನಿ ಮೋದಿ ಗುಡುಗು
ಪ್ರಧಾನಿ ಮೋದಿ ಅವರ ಭಾಷಣದ ಪ್ರಮುಖಾಂಶಗಳು ಇಂತಿವೆ:
  • ಭಗವಾನ್ ಬಸವೇಶ್ವರರ ಅನುಭವ ಮಂಟಪವನ್ನು ಸ್ಮರಿಸಿದ ಪ್ರಧಾನಿ ಮೋದಿ, ಭಾರತ ಪ್ರಜಾಪ್ರಭುತ್ವದ ತಾಯಿ ಎಂದು ಬಣ್ಣಿಸಿದ ಪ್ರಧಾನಿ ಮೋದಿ
  • ಲಂಡನ್‌ನಲ್ಲಿ ಬಸವೇಶ್ವರರ ಪ್ರತಿಮೆ ಅನಾವರಣವನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ
  • ಆದರೆ ಲಂಡನ್‌ನಲ್ಲೇ ಭಾರತದ ಪ್ರಜಾಪ್ರಭುತ್ವವನ್ನು ಪ್ರಶ್ನೆ ಮಾಡಲಾಯ್ತು
  • ಭಾರತದ ಮಹಾನ್ ಪರಂಪರೆ, ಭಾರತದ ಅವಮಾನವನ್ನು ಲಂಡನ್‌ನಲ್ಲಿ ಮಾಡಲಾಗಿದೆ
  • ಕರ್ನಾಟಕದ ಜನತೆ ಇಂಥಾ ಜನರ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು
  • ಪರೋಕ್ಷವಾಗಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಚಾಟಿ ಬೀಸಿದ ಪ್ರಧಾನಿ ಮೋದಿ!
  • ಧಾರವಾಡದಲ್ಲಿ ನಾಲ್ಕೇ ವರ್ಷಗಳಲ್ಲಿ ಐಐಟಿ ಕ್ಯಾಂಪಸ್ ಸಿದ್ಧವಾಗಿದೆ. ಶಿಲಾನ್ಯಾಸ ನಾವೇ ಮಾಡ್ತೇವೆ, ಉದ್ಘಾಟನೆಯನ್ನೂ ಮಾಡ್ತೇವೆ
  • ಶಿಲಾನ್ಯಾಸ ಮಾಡಿ ನಾವು ಮರೆತು ಹೋಗೋದಿಲ್ಲ
  • ಉತ್ತಮ ಶಿಕ್ಷಣ ಸಂಸ್ಥೆಗಳ ವಿಸ್ತರಣೆ ಮಾಡಿದರೆ ಬ್ರಾಂಡ್‌ಗೆ ಹಾನಿಯಾಗುತ್ತೆ ಎಂಬ ಭಾವನೆ ಇತ್ತು
  • ಆದರೆ ಇಂದು ನಾವು ಹಳೆಯ ಈ ಯೋಚನೆಯನ್ನು ಹಿಮ್ಮೆಟ್ಟಿ ನಡೆಯುತ್ತಿದ್ದೇವೆ
  • ಉತ್ತಮ ಶಿಕ್ಷಣ ಕೊಡುವ ಸಂಸ್ಥೆಗಳು ಹೆಚ್ಚಾಗಬೇಕು, ಎಲ್ಲರಿಗೂ ಒಳ್ಳೆಯ ಶಿಕ್ಷಣ ಸಿಗಬೇಕು
  • ಕಳೆದ 9 ವರ್ಷಗಳಲ್ಲಿ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿದೆ
  • ಏಮ್ಸ್‌ಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ
  • ಐಐಎಂ ಹಾಗೂ ಐಐಟಿಗಳ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಿದೆ
  • ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ ಇಡೀ ವಿಶ್ವದ ಅತಿ ದೊಡ್ಡ ಪ್ಲಾಟ್‌ಫಾರ್ಮ್‌
  • ಇದು ನಮ್ಮ ಮೂಲಸೌಕರ್ಯ ಅಭಿವೃದ್ದಿಯ ಚಿಂತನೆಯ ಫಲ
PM Modi In Mandya: ಮಂಡ್ಯ ಈಸ್ ಇಂಡಿಯಾ ಅನ್ನುವ ಹಾಗೆ ಅಭಿವೃದ್ಧಿ ಮಾಡುತ್ತೇವೆ- ಸಿಎಂ ಬೊಮ್ಮಾಯಿ
  • ರೈಲ್ವೆಯಲ್ಲಿ ಡೀಸೆಲ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಸರ್ವ ಕ್ರಮ
  • ಉತ್ತಮ ರಸ್ತೆ, ಆಸ್ಪತ್ರೆಗಳ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರದಿಂದ ಸರ್ವ ಕ್ರಮ
  • ಬೆಂಗಳೂರಿನಿಂದ ಬೆಳಗಾವಿವರೆಗೆ, ಕಲಬುರಗಿಯಿಂದ ಶಿವಮೊಗ್ಗದವರೆಗೆ ಹಲವೆಡೆ ನಾನು ಭೇಟಿ ನೀಡಿದ್ದೇನೆ
  • ನಿಮ್ಮ ಋಣವನ್ನು ತೀರಿಸಲು ನಾನು ಆದಷ್ಟೂ ನಿಮ್ಮ ಸೇವೆ ಮಾಡುತ್ತೇನೆ
  • ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವು ಕರ್ನಾಟಕದ ಪ್ರತಿ ಜಿಲ್ಲೆ, ಪ್ರತಿ ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ
  • ಧಾರವಾಡದಲ್ಲಿ ಇಂದು ಅಭಿವೃದ್ದಿಯ ಧಾರೆ ಹರಿಯುತ್ತಿದೆ
  • ಹುಬ್ಬಳ್ಳಿ - ಧಾರವಾಡ ಮಾತ್ರವಲ್ಲ, ಇಡೀ ಕರ್ನಾಟಕದ ಭವಿಷ್ಯ ಬದಲಿಸಲಿದೆ
  • ಮಲೆನಾಡು, ಬಯಲು ಸೀಮೆ ನಡುವೆ ಧಾರವಾಡ ಹೆಬ್ಬಾಗಿಲಾಗಿ ಕಾರ್ಯ ನಿರ್ವಹಿಸುತ್ತಿದೆ
  • ಧಾರವಾಡ ಕರ್ನಾಟಕ ಹಾಗೂ ಭಾರತದ ಜೀವಂತಿಕೆಯ ಪ್ರತಿರೂಪ: ಪ್ರಧಾನಿ ಮೋದಿ

  • ದರಾ ಬೇಂದ್ರ ಅವರನ್ನು ಸ್ಮರಿಸಿದ ಪ್ರಧಾನಿ ಮೋದಿ
  • ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ಅವರನ್ನು ಸ್ಮರಿಸಿದ ಪ್ರಧಾನಿ ಮೋದಿ
  • ಧಾರವಾಡ ಪೇಡದ ಸ್ವಾದವನ್ನು ಬಣ್ಣಿಸಿದ ಪ್ರಧಾನಿ ಮೋದಿ
  • ಮೈಸೂರು - ಬೆಂಗಳೂರು ಎಕ್ಸ್‌ಪ್ರೆಸ್ ವೇ ಮಹತ್ವ ಬಣ್ಣಿಸಿದ ಪ್ರಧಾನಿ ಮೋದಿ
  • ಶಿವಮೊಗ್ಗದಲ್ಲಿ ಕುವೆಂಪು ಏರ್‌ಪೋರ್ಟ್‌ ಉದ್ಘಾಟನೆಯನ್ನು ನೆನಪಿಸಿಕೊಂಡ ಪ್ರಧಾನಿ
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ