ಆ್ಯಪ್ನಗರ

ಹೆಚ್ಚುವರಿ ವಿದ್ಯುತ್‌ ಮಾರಾಟದಿಂದ ರಾಜ್ಯಕ್ಕೆ 348 ಕೋಟಿ ರೂ. ಆದಾಯ

ಪೀಕ್‌ ಅವರ್‌ ಅಲ್ಲದ ಸಮಯದಲ್ಲಿ ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್ತನ್ನು ಭಾರತೀಯ ವಿದ್ಯುಚ್ಛಕ್ತಿ ವಿನಿಮಯ ಕೇಂದ್ರ(ಐಇಎಕ್ಸ್‌)ದ ಮೂಲಕ ಮಾರಾಟ ...

Vijaya Karnataka 5 Jun 2019, 5:00 am
ಬೆಂಗಳೂರು: ಪೀಕ್‌ ಅವರ್‌ ಅಲ್ಲದ ಸಮಯದಲ್ಲಿ ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್ತನ್ನು ಭಾರತೀಯ ವಿದ್ಯುಚ್ಛಕ್ತಿ ವಿನಿಮಯ ಕೇಂದ್ರ(ಐಇಎಕ್ಸ್‌)ದ ಮೂಲಕ ಮಾರಾಟ ಮಾಡಿ ರಾಜ್ಯವು 2018-19ರಲ್ಲಿ 348 ಕೋಟಿ ರೂ. ಆದಾಯ ಪಡೆದಿದೆ.
Vijaya Karnataka Web escom


ಕಳೆದ ವರ್ಷದ ಜೂ.13ರಿಂದ ಈವರೆಗೆ 827.20 ದಶಲಕ್ಷ ಯೂನಿಟ್‌ನಷ್ಟು ವಿದ್ಯುತ್‌ ಮಾರಾಟ ಮಾಡಲಾಗಿದೆ. ಇದರಲ್ಲಿ ಎಸ್ಕಾಂಗಳಿಗೆ ಹಂಚಿಕೆ ಮಾಡುವ ಬಾಬ್ತಿನಲ್ಲಿ ಬೆಸ್ಕಾಂ 170 ಕೋಟಿ ರೂ. ಪಾಲು ಪಡೆದಿದೆ.

ಸೌರವಿದ್ಯುತ್‌ ಬೆಳಗ್ಗೆಯಿಂದ ಸಂಜೆ ವರೆಗೆ ಉತ್ಪಾದನೆಯಾಗುತ್ತದೆ. ಜತೆಗೆ ಮಳೆಗಾಲದಲ್ಲಿ ಜಲಾಶಯಗಳ ಬಳಿಯಿರುವ ಸ್ಥಾವರಗಳಲ್ಲಿ ಕಡ್ಡಾಯ ಉತ್ಪಾದನೆ ಮಾಡುವ ಘಟಕಗಳಿಂದ ಹೆಚ್ಚು ವಿದ್ಯುತ್‌ ಲಭ್ಯವಾಗುತ್ತದೆ. ಈ ಎರಡೂ ಬಾಬ್ತಿನ ವಿದ್ಯುತ್‌ನ್ನು ಬಳಸಿಕೊಳ್ಳಲು ಸಾಧ್ಯವಾಗದೆ ಅಲ್ಪಾವಧಿ ವಿದ್ಯುತ್‌ ಮಾರಾಟದ ಮೂಲಕ ಅನ್ಯ ಕಂಪನಿಗಳಿಗೆ ಪೂರೈಕೆ ಮಾಡಲಾಗುತ್ತದೆ. ಇದನ್ನು ಐಇಎಕ್ಸ್‌ ಒಪ್ಪಿಗೆ ಪಡೆದಿ ಬಿಡ್‌ ಆಹ್ವಾನಿಸಿ ನಂತರವೇ ನಿರ್ದಿಷ್ಟ ಮೊತ್ತಕ್ಕೆ ಮಾರಾಟ ಮಾಡುವ ಪರಿಪಾಠ ಬೆಳೆದು ಬಂದಿದೆ.

ಪ್ರಸಕ್ತ ಮಳೆಗಾಲದಲ್ಲಿ ಬೆಸ್ಕಾಂ 100 ಮೆ.ವ್ಯಾ.ಗೂ ಅಧಿಕ ಸಾಮರ್ಥ್ಯದ ವಿದ್ಯುತ್‌ನ್ನು ಟಾಟಾ ಪವರ್‌ ಡೆಲ್ಲಿ ಡಿಸ್ಟ್ರುಬ್ಯೂಷನ್‌ ಕಂ. ಲಿ.(ಟಿಪಿಡಿಡಿಎಲ್‌)ಗೆ ಮಾರಾಟ ಮಾಡಲು ಬಿಡ್‌ ಯಶಸ್ವಿ ಕಂಡಿದೆ. ದರ ನಿಗದಿ ಇನ್ನಷ್ಟೇ ಅಂತಿಮಗೊಳಿಸಬೇಕಿದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ