ಆ್ಯಪ್ನಗರ

ಪ್ರಜ್ವಲ್‌ ರೇವಣ್ಣ ಪ್ರಮಾಣ ಪತ್ರದ ದೋಷ: ಹಾಸನ ಡಿಸಿಗೆ ತನಿಖೆ ನಡೆಸಲು ಆಯೋಗ ಸೂಚನೆ

ಪ್ರಮಾಣ ಪತ್ರದಲ್ಲಿ ಪ್ರಜ್ವಲ್‌ ರೇವಣ್ಣ ಸುಳ್ಳು ಮಾಹಿತಿ ನೀಡಿರುವ ದೂರಿಗೆÜ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ...

Vijaya Karnataka 16 May 2019, 5:00 am
Vijaya Karnataka Web prajwal
ಬೆಂಗಳೂರು: ಪ್ರಮಾಣ ಪತ್ರದಲ್ಲಿ ಪ್ರಜ್ವಲ್‌ ರೇವಣ್ಣ ಸುಳ್ಳು ಮಾಹಿತಿ ನೀಡಿರುವ ದೂರಿಗೆÜ ಸಂಬಂಧ ತನಿಖೆ ನಡೆಸಿ ವರದಿ ನೀಡುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಹಾಸನ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ.

ಜಿ.ದೇವರಾಜೇಗೌಡ ಎಂಬುವರು ಏ. 26ರಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಅವರಿಗೆ ಸಲ್ಲಿಸಿದ್ದ ದೂರಿಗೆ ಈಗ ಮತ್ತೆ ಜೀವ ಬಂದಿದೆ. ತನಿಖೆಗೆ ಆದೇಶಿಸಿದ್ದರಿಂದ ಹಾಸನ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರಿಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ.

ಒಂದೊಮ್ಮೆ ದೂರಿನಲ್ಲಿ ಸತ್ಯಾಂಶ ಕಂಡು ಬಂದರೆ ಪ್ರಜ್ವಲ್‌ ಫಲಿತಾಂಶದ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ.

ದೂರಿನಲ್ಲಿ ಏನಿದೆ?

ಚುನಾವಣೆಗೆ ಸ್ಪರ್ಧಿಸುವವರು ಕಡ್ಡಾಯವಾಗಿ 5 ವರ್ಷದ ಆದಾಯ ತೆರಿಗೆ ವಿವರವನ್ನು ಸಲ್ಲಿಸಬೇಕೆಂದು ಫೆ.27ರಂದು ಆಯೋಗ ಎಲ್ಲ ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡಿದ್ದರೂ ಪ್ರಜ್ವಲ್‌ 2018ರ ತೆರಿಗೆ ವಿವರವನ್ನು ಮಾತ್ರ ಪ್ರಮಾಣ ಪತ್ರದಲ್ಲಿ ನಮೂದಿಸಿದ್ದಾರೆ.

-2014-17ರ ವರೆಗಿನ ಆದಾಯ ಲಾಭ- ನಷ್ಟದ ಬಗ್ಗೆ ಕಲಂನಲ್ಲಿ ಭರ್ತಿ ಮಾಡಿಲ್ಲ,

-ಆದಾಯ ಘೋಷಣೆ ಸ್ಥಳದಲ್ಲಿ 'ನಿರಂತರ ' ಎಂದು ಘೋಷಣೆ

-2018ರ ಪೂರ್ವ ವರ್ಷದ ಆದಾಯವನ್ನು ನಮೂದಿಸಿಲ್ಲ.

-ಹಿಂದಿನ ವರ್ಷದ ಆದಾಯ ಪ್ರಮಾಣ ಪತ್ರ ಇಲ್ಲದೆ ಬ್ಯಾಂಕ್‌ ಸಾಲ ಹೇಗೆ ಪಡೆದರೆಂಬುದು ಅನುಮಾನ

- ಎಚ್‌.ಡಿ.ರೇವಣ್ಣ ಅವರಿಂದ ದಾನ ರೂಪದಲ್ಲಿ ಸಿಎನ್‌ಡಿ ಎಂಟರ್‌ಪ್ರೈಸಸ್‌ ಕಂಪನಿಗೆ ಬಂದ ಆಸ್ತಿ ಮಾರುಕಟ್ಟೆ ದರ ನಮೂದಿಸಿಲ್ಲ.

-ಪ್ರಜ್ವಲ್‌ 3.70 ಕೋಟಿ ರೂ. ಸಾಲ ಪಡೆದಿರುವುದು ಬ್ಯಾಂಕ್‌ ಮೂಲಕವೋ? ಇದಕ್ಕೆ ಆದಾಯ ತೆರಿಗೆ ಕಟ್ಟಲಾಗಿತ್ತೇ? ಎಂಬ ವಿವರವಿಲ್ಲ

-ಅಜ್ಜಿ ಚನ್ನಮ್ಮನವರಿಗೆ 23 ಲಕ್ಷ ರೂ., ಅಣ್ಣ ಆರ್‌.ಸೂರಜ್‌ಗೆ 37.20 ಲಕ್ಷ ರೂ. ಹಾಗೂ ಸಂಡ್ರಿ ಲೋನ್ಸ್‌ಗೆ 25 ಲಕ್ಷ ರೂ. ಸಾಲ ನೀಡಿದ್ದು ತಮ್ಮ ಖಾತೆಯಿಂದಲೇ ಎಂಬ ಮಾಹಿತಿ ಇಲ್ಲ.

ತಾತನಿಂದ ಸಾಲ ಪಡೆದಿರುವ ಬಗ್ಗೆ ಉಲ್ಲೇಖವಿಲ್ಲ

ತುಮಕೂರು ಕ್ಷೇತ್ರದ ಅಭ್ಯರ್ಥಿ ಮಾಜಿ ಪ್ರಧಾನಿ ದೇವೇಗೌಡರು, ಪ್ರಜ್ವಲ್‌ ರೇವಣ್ಣಗೆ 23ಲಕ್ಷ ರೂ. ಸಾಲವನ್ನು ಪ್ರಜ್ವಲ್‌ಗೆ ನೀಡಿರುವುದಾಗಿ ಪ್ರಮಾಣ ಪತ್ರದಲ್ಲಿ ನಮೂದಿಸಿದ್ದಾರೆ. ಆದರೆ, ಪ್ರಜ್ವಲ್‌ ಈ ಬಗ್ಗೆ ಉಲ್ಲೇಖವಿಲ್ಲ. ಈ ಬಗ್ಗೂ ತನಿಖೆ ನಡೆಸಲು ಅರ್ಜಿದಾರರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ