ಆ್ಯಪ್ನಗರ

ಮೋದಿ ಅಪೇಕ್ಷೆಯಂತೆ ಸಂಸತ್ತಿನಲ್ಲಿ ಧಾರವಾಡ ಪೇಡ ಹಂಚಿದ ಜೋಶಿ

ಬುಧವಾರದ ಬಿಜೆಪಿಯ ಸಂಸದೀಯ ಸಭೆಯ ಬಳಿಕ ಎದುರಾದ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಪ್ರಧಾನಿ ಮೋದಿ, "ನಿಮ್ಮ ಪೇಡ ತುಂಬಾ ಪ್ರಸಿದ್ಧಿ, ನಮಗೆ ತಿನ್ನಿಸುವುದಿಲ್ಲವೇ?" ಎಂದು ಕರ್ನಾಟಕದ ಉಪ ಚುನಾವಣೆಯ ಗೆಲುವಿನ ಖುಷಿಯಲ್ಲಿ ಹಾಸ್ಯ ಚಟಾಕಿ ಹಾರಿಸಿದ್ದರು. ಇದನ್ನೀಗ ಜೋಶಿ ನಿಜವಾಗಿಸಿದ್ದಾರೆ.

Vijaya Karnataka 12 Dec 2019, 9:33 pm

ಹೊಸದಿಲ್ಲಿ: ಕರ್ನಾಟಕದಲ್ಲಿನ ಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ್ದಕ್ಕೆ ಪ್ರಧಾನಿ ಮೋದಿ ಅವರ ಅಪೇಕ್ಷೆಯಂತೆ ಸಚಿವ ಪ್ರಹ್ಲಾದ್‌ ಜೋಶಿ ಅವರು ರಾತ್ರೋ ರಾತ್ರಿ ಧಾರವಾಡದಿಂದ ಪೇಡ ತರಿಸಿ, ಗುರುವಾರ ಸಂಸತ್ತಿನಲ್ಲಿ ಸಂಸದರು, ಸಚಿವರು ಮತ್ತು ಸಿಬ್ಬಂದಿಗೆ ಹಂಚಿ ಖುಷಿಪಟ್ಟರು.
Vijaya Karnataka Web Pralhad Joshi


ಸಂಸತ್‌ನಲ್ಲಿ ಬುಧವಾರ ನಡೆದ ಬಿಜೆಪಿಯ ಸಂಸದೀಯ ಸಭೆಯಲ್ಲಿ ಪ್ರಧಾನಿ ಮೋದಿ ಅವರು, ಕರ್ನಾಟಕದ ಉಪ ಚುನಾವಣೆಯಲ್ಲಿ ಗೆಲುವಿಗಾಗಿ ಕರ್ನಾಟಕ ಜನತೆಗೆ ವಂದನೆ ಅರ್ಪಿಸಿದ್ದರು. ಸಭೆಯ ಬಳಿಕ ಎದುರಾದ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ, "ನಿಮ್ಮ ಪೇಡ ತುಂಬಾ ಪ್ರಸಿದ್ಧಿ, ನಮಗೆ ತಿನ್ನಿಸುವುದಿಲ್ಲವೇ?" ಎಂದು ಗೆಲುವಿನ ಖುಷಿಯಲ್ಲಿ ಹಾಸ್ಯ ಚಟಾಕಿ ಹಾರಿಸಿದ್ದರು.

ಮೋದಿ ಅವರು ಹಾಸ್ಯದೊಂದಿಗೆ ಹೇಳಿದ್ದರೂ ಸಚಿವ ಜೋಶಿ ಅವರು ಇದನ್ನು ನಿಜವಾಗಿಸಿದ್ದಾರೆ. ಧಾರವಾಡದಿಂದ ಗುರುವಾರ ಬೆಳಗಿನ ಜಾವ ವಿಮಾನದ ಮೂಲಕ 100 ಕೆ.ಜಿ. ಪೇಡ ತರಿಸಿ, ಸಂಸತ್‌ನಲ್ಲಿ ಹಂಚಿದ್ದಾರೆ.

ಉಪ ಸಮರ ಗೆದ್ದ ಯಡಿಯೂರಪ್ಪ ಸಾಧನೆಗೆ ಎದ್ದು ನಿಂತು ಚಪ್ಪಾಳೆ ಹೊಡೆದ ಮೋದಿ

''ಪ್ರವಾಸದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ದಿಲ್ಲಿಯಲ್ಲಿ ಇಲ್ಲ. ಹಾಗಾಗಿ, ಅವರಿಗೆ ಪೇಡ ನೀಡಲು ಸಾಧ್ಯವಾಗಿಲ್ಲ. ಅವರು ಮರಳಿ ಬಂದ ತಕ್ಷಣ ಪೇಡ ನೀಡಲಾಗುವುದು," ಎಂದು ಜೋಶಿ ಅವರ ಕಚೇರಿಯ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ