ಆ್ಯಪ್ನಗರ

ವಜ್ರಮಹೋತ್ಸವ ಭಾಷಣ ಲೋಪ: ದೇವೇಗೌಡರಿಗೆ ಕರೆ ಮಾಡಿದ ರಾಷ್ಟ್ರಪತಿ

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಜತೆ ಮಾತನಾಡಿದರು.

Vijaya Karnataka 25 Oct 2017, 10:02 pm

ಬೆಂಗಳೂರು: ವಿಧಾನಸೌಧ ವಜ್ರಮಹೋತ್ಸವ ಅಂಗವಾಗಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ತಮ್ಮ ಭಾಷಣದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಹೆಸರನ್ನು ಕಣ್ತಪ್ಪಿನಿಂದ ಪ್ರಸ್ತಾಪ ಮಾಡದ ಬಗ್ಗೆ ವಿಷಾದಿಸಿದ್ದಾರೆ.

Vijaya Karnataka Web president call devegowda
ವಜ್ರಮಹೋತ್ಸವ ಭಾಷಣ ಲೋಪ: ದೇವೇಗೌಡರಿಗೆ ಕರೆ ಮಾಡಿದ ರಾಷ್ಟ್ರಪತಿ


ದಿಲ್ಲಿಗೆ ಮರಳಿದ ಬಳಿಕ ಸಂಜೆ 5.30ರ ಸುಮಾರಿಗೆ ದೇವೇಗೌಡರಿಗೆ ದೂರವಾಣಿ ಕರೆ ಮಾಡಿದ ರಾಷ್ಟ್ರಪತಿಗಳು ''ಭಾಷಣದಲ್ಲಿ ಕಣ್ತಪ್ಪಿನಿಂದ ನಿಮ್ಮ ಹೆಸರು ಪ್ರಸ್ತಾಪ ಮಾಡಲಿಲ್ಲ. ಇದರಲ್ಲಿ ಅನ್ಯ ಕಾರಣ ಇಲ್ಲ ,''ಎಂದು ಸೌಜನ್ಯದಿಂದ ಸ್ಪಷ್ಟನೆ ನೀಡಿದ್ದಾರೆ.

ಮೊದಲಿಗೆ ದೇವೇಗೌಡರ ಆರೋಗ್ಯ ವಿಚಾರಿಸಿದ ರಾಷ್ಟ್ರಪತಿಗಳು ಈ ಸ್ಪಷ್ಟನೆ ನೀಡಿದರು. ಪ್ರತಿಯಾಗಿ ದೇವೇಗೌಡರು ''ಇಂತಹ ಸಣ್ಣ ಪ್ರಮಾದಗಳು ಸಾಮಾನ್ಯ. ನಾನು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ'' ಎಂದು ತಿಳಿಸಿದ್ದಾರೆ.

ಮಾತು ಮುಂದುವರಿಸಿದ ರಾಷ್ಟ್ರಪತಿಗಳು ''ವಜ್ರ ಮಹೋತ್ಸವದಲ್ಲಿ ತಮ್ಮನ್ನು ಭೇಟಿ ಮಾಡಲು ಉತ್ಸುಕನಾಗಿದ್ದೆ'' ಎಂದರು. ''ಪೂರ್ವನಿಯೋಜಿತ ಕಾರ್ಯಕ್ರಮಗಳ ಕಾರಣ ಪ್ರವಾಸದಲ್ಲಿದ್ದೆ. ಇದರಿಂದಾಗಿ ನಿಮ್ಮನ್ನೂ ಭೇಟಿ ಮಾಡಲು ಸಾಧ್ಯವಾಗದ ಬಗ್ಗೆ ನನಗೂ ವಿಷಾದವಿದೆ'' ಎಂದು ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.

ಸುಮಾರು 10 ನಿಮಿಷಗಳ ಕಾಲ ಉಭಯ ನಾಯಕರು ಸಂಭಾಷಣೆ ನಡೆಸಿದರು. ದಿಲ್ಲಿಗೆ ಬಂದಾಗ ಭೇಟಿಯಾಗುವಂತೆ ದೇವೇಗೌಡರಿಗೆ ರಾಷ್ಟ್ರಪತಿಗಳು ಆಹ್ವಾನ ನೀಡಿದ್ದಾರೆ.

President Call Devegowda

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ