ಆ್ಯಪ್ನಗರ

ಸಿಎಂ ಬಸವರಾಜ ಬೊಮ್ಮಾಯಿಗೆ ಪಿಎಂ ಮೋದಿ ಶ್ಲಾಘನೆಯ ಶಕ್ತಿ

ದೇಶಕ್ಕೆ ಬಂದೊದಗಿದ್ದ ಕೋವಿಡ್‌ ಸಂಕಷ್ಟವನ್ನು ಮೋದಿಯವರು ಯಶಸ್ವಿಯಾಗಿ ನಿರ್ವಹಿಸಿರುವುದನ್ನು ಇಡೀ ಜಗತ್ತೇ ಕೊಂಡಾಡುತ್ತದೆ. ಆ ವೇಳೆ ಕರ್ನಾಟಕಕ್ಕೆ ಸಾವಿರಾರು ಕೋಟಿ ರೂ. ನೀಡಿದ್ದಾರೆ. ಕೋವಿಡ್‌ ನಿರ್ವಹಣೆ ವೇಳೆ ಕೇಂದ್ರದಿಂದ ನೆರವು ಒದಗಿಸಿರುವುದು ಎಲ್ಲರಿಗೂ ಗೊತ್ತಿದೆ.

Vijaya Karnataka Web 21 Jun 2022, 11:41 pm
ಬೆಂಗಳೂರು: ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸ, ಜನಪರ ಕಾರ್ಯಕ್ರಮಗಳು ಅನುಷ್ಠಾನವಾಗುತ್ತಿರುವ ಬಗ್ಗೆ ಪ್ರಧಾನಿ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ನನಗೆ ಇನ್ನಷ್ಟು ಶಕ್ತಿ ದೊರೆತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
Vijaya Karnataka Web ಮೋದಿ, ಬೊಮ್ಮಾಯಿ
ಮೋದಿ, ಬೊಮ್ಮಾಯಿ


ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ''ಪ್ರಧಾನಿಯವರು ಯಾವಾಗಲು ಸುಶಾಸನ ಹಾಗೂ ಅಭಿವೃದ್ಪರ ಆಡಳಿತವನ್ನು ಮೆಚ್ಚಿಕೊಳ್ಳುವವರು. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿಅಭಿವೃದ್ಧಿ, ಜನಪರ ಕಾರ್ಯಕ್ರಮಗಳು ಜಾರಿಯಾಗುತ್ತಿವೆ. ಕೇಂದ್ರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದ ಯೋಜನೆಗಳ ಅನುಷ್ಠಾನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಮೆಚ್ಚುಗೆ ಇನ್ನಷ್ಟು ಶಕ್ತಿ ಕೊಟ್ಟಿದೆ. ಜತೆಗೆ ಮನ್ನಷ್ಟು ದಕ್ಷತೆ, ಬದ್ಧತೆಯಿಂದ ಕೆಲಸ ಮಾಡಲು ಪುಷ್ಠಿ ನೀಡಿದೆ'' ಎಂದು ತಿಳಿಸಿದರು.

ಪಠ್ಯ ಪರಿಷ್ಕರಣೆ ವಿವಾದ: ದೇವೇಗೌಡರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ - ಬಸವರಾಜ ಬೊಮ್ಮಾಯಿ

ನೆರೆ ಕಾಣಿಸಿಕೊಂಡಾಗ ಭೇಟಿ ನೀಡದ ಪ್ರಧಾನಿಯವರು ಈಗ ಬಂದು ಯೋಗ ಮಾಡುತ್ತಿದ್ದಾರೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್‌ ಆಕ್ಷೇಪಕ್ಕೆ ಪ್ರತಿಕ್ರಿಯಿಸಿ, ''ದೇಶಕ್ಕೆ ಬಂದೊದಗಿದ್ದ ಕೋವಿಡ್‌ ಸಂಕಷ್ಟವನ್ನು ಮೋದಿಯವರು ಯಶಸ್ವಿಯಾಗಿ ನಿರ್ವಹಿಸಿರುವುದನ್ನು ಇಡೀ ಜಗತ್ತೇ ಕೊಂಡಾಡುತ್ತದೆ. ಆ ವೇಳೆ ಕರ್ನಾಟಕಕ್ಕೆ ಸಾವಿರಾರು ಕೋಟಿ ರೂ. ನೀಡಿದ್ದಾರೆ. ಕೋವಿಡ್‌ ನಿರ್ವಹಣೆ, ಔಷಧಿ, ಲಸಿಕೆ, ವೆಂಟಿಲೇಟರ್‌, ಉಪಕರಣ, ಆಕ್ಸಿಜನ್‌ ಉತ್ಪಾದನಾ ಉಪಕರಣಗಳನ್ನು ಕೇಂದ್ರದಿಂದ ಒದಗಿಸಿರುವುದು ಎಲ್ಲರಿಗೂ ಗೊತ್ತಿದೆ. ಆದರೂ ರಾಜಕೀಯವಾಗಿ ಮಾತನಾಡಬೇಕು ಎಂದು ಮಾಡನಾಡಿದರೆ ಅದಕ್ಕೆ ಯಾವುದೇ ಅರ್ಥವಿರುವುದಿಲ್ಲ,'' ಎಂದು ತಿರುಗೇಟು ನೀಡಿದರು.

ಉಪನಗರ ರೈಲು ಯೋಜನೆ ರೂಪಿಸಿದ್ದು ನಾನು, ಮೋದಿ ಪುಕ್ಕಟೆ ಪ್ರಚಾರ ಪಡೆಯುತ್ತಿದ್ದಾರೆ: ಕುಮಾರಸ್ವಾಮಿ

ಪ್ರಧಾನಿ ನೆರವು ಜನರಿಗೆ ನೆನಪಿದೆ ''ಪ್ರಧಾನಿಯವರು ನೆರವಾಗಿರುವ ಬಗ್ಗೆ ಜನರಿಗೆ ಎಲ್ಲವೂ ನೆನಪಿದೆ. ಕೋವಿಡ್‌ ನಿರ್ವಹಣೆಗೆ ಕೈಗೊಂಡ ಕ್ರಮ ಹಾಗೂ ಮೋದಿಯವರು ಕೋವಿಡ್‌ ಸಂದರ್ಭದಲ್ಲಿರಾಜ್ಯಕ್ಕೆ ಮಾಡಿರುವ ಸಹಾಯವೂ ಗೊತ್ತಿದೆ. ಪ್ರಧಾನಿಯವರ ಜನಪ್ರಿಯತೆಯನ್ನು ಕಂಡು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ,'' ಎಂದು ಕಿಡಿ ಕಾರಿದರು. ಮೀಸಲಾತಿ ಸಂಬಂಧ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ''ಸಚಿವ ಸಿ.ಸಿ. ಪಾಟೀಲ್‌ ಅವರು ಸಮುದಾಯದವರು ಹಾಗೂ ಸ್ವಾಮೀಜಿಗಳು ಮಾತನಾಡುವ ಸಾಧ್ಯತೆ ಇದೆ,'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ