ಆ್ಯಪ್ನಗರ

ಅಮಿತ್‌ ಟೀಕಿಸಿದ ಪ್ರಿಯಾಂಕ್‌ಗೆ ತಿರುಗೇಟು

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಾಲೆಳೆಯುವ ಪ್ರಯತ್ನ ನಡೆಸಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಟ್ವೀಟರ್‌ನಲ್ಲಿ ಮೊಟಕಿಸಿಕೊಂಡಿದ್ದಾರೆ.

Vijaya Karnataka 2 Jun 2019, 5:00 am
ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಾಲೆಳೆಯುವ ಪ್ರಯತ್ನ ನಡೆಸಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಟ್ವೀಟರ್‌ನಲ್ಲಿ ಮೊಟಕಿಸಿಕೊಂಡಿದ್ದಾರೆ.
Vijaya Karnataka Web priyank kharge tweet bjp criticize
ಅಮಿತ್‌ ಟೀಕಿಸಿದ ಪ್ರಿಯಾಂಕ್‌ಗೆ ತಿರುಗೇಟು


'ನಾವೀಗ ಹೊಸ ಗೃಹ ಸಚಿವರನ್ನು ಹೊಂದಿದ್ದೇವೆ. ಕೇಂದ್ರ ಗೃಹ ಇಲಾಖೆ ಎಂಬುದರ ಬದಲು ಕೇಂದ್ರ ಕ್ಲೀನ್‌ ಚಿಟ್‌ ಕೊಡುವ ಇಲಾಖೆ ಎಂದು ಮರುನಾಮಕರಣ ಮಾಡುವುದು ಸೂಕ್ತ ' ಎಂದು ಪ್ರಿಯಾಂಕ್‌ ಖರ್ಗೆ ಟ್ವೀಟ್‌ ಮಾಡಿದ್ದರು. ಇದಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಹಲವರು ತಿರುಗೇಟು ನೀಡಿದ್ದಾರೆ. ಜತೆಗೆ ನೆಟ್ಟಿಗರಿಂದ ಪ್ರಿಯಾಂಕ್‌ ಟ್ವೀಟ್‌ಗೆ ವ್ಯಾಪಕ ಟೀಕೆಯೂ ವ್ಯಕ್ತವಾಗಿದೆ.

ಸದಾನಂದ ಗೌಡ ತಿರುಗೇಟು

ಇದಕ್ಕೆ ಟ್ವಿಟರ್‌ನಲ್ಲಿ ತಿರುಗೇಟು ನೀಡಿರುವ ಕೇಂದ್ರ ರಸಗೊಬ್ಬರ ಹಾಗೂ ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ' ಪ್ರಿಯಾಂಕ ಖರ್ಗೆಯವರೆ ಕೈ ತೋರಿಸಿ ಅವಲಕ್ಷಣ ಹೇಳಿಸಿಕೊಳ್ಳಬೇಡಿ. ನಿಮ್ಮ ಪಕ್ಷದ ಚಿಹ್ನೆ 'ಕೈ' ದೇಶದ ಜನ ಅದರ ಅವಲಕ್ಷಣ ಹೇಳಿ 10 ದಿನವೂ ಕಳೆದಿಲ್ಲ. ಆಗಲೇ ಶುರು ಮಾಡಿದಿರಲ್ಲ ಹಿರಿಯ ನಾಯಕರ ಚಾಳಿ. ಮೊದಲು ನಿಮ್ಮ ಮನೆ ಸರಿ ಮಾಡಿಕೊಳ್ಳಿ. ಆಮೇಲೆ ಊರ ಉಸಾಬರಿಗೆ ಬರುವಿರಂತೆ ' ಎಂದು ವ್ಯಂಗ್ಯವಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ