ಆ್ಯಪ್ನಗರ

ಭರ್ಜರಿ ಟ್ರಾನ್ಸ್‌ಫರ್‌ ಮಾಡಿಸಿದ ರೇವಣ್ಣ

ದೋಸ್ತಿ ಸರಕಾರ ಐಸಿಯುದಲ್ಲಿರುವಾಗ ಎಂಜಿನಿಯರ್‌ಗಳ ಬಡ್ತಿ ಸಂಬಂಧ ಸಭೆ ಮಾಡಿಸಿರುವ ಲೋಕೋಪಯೋಗಿ ಸಚಿವ ಎಚ್‌ ಡಿ...

Vijaya Karnataka 10 Jul 2019, 5:00 am
ಬೆಂಗಳೂರು: ದೋಸ್ತಿ ಸರಕಾರ ಐಸಿಯುದಲ್ಲಿರುವಾಗ ಎಂಜಿನಿಯರ್‌ಗಳ ಬಡ್ತಿ ಸಂಬಂಧ ಸಭೆ ಮಾಡಿಸಿರುವ ಲೋಕೋಪಯೋಗಿ ಸಚಿವ ಎಚ್‌. ಡಿ. ರೇವಣ್ಣ 175 ಎಂಜಿನಿಯರ್‌ಗಳ ವರ್ಗಾವಣೆ ಮಾಡಿಸುವುದರಲ್ಲೂ ಯಶಸ್ವಿಯಾಗಿದ್ದಾರೆ.
Vijaya Karnataka Web H D Revanna (JDS) HNP


ರೇವಣ್ಣ ಸೂಚನೆಯಂತೆ 800ಕ್ಕೂ ಹೆಚ್ಚು ಎಂಜಿನಿಯರ್‌ಗಳ ಬಡ್ತಿ ಪ್ರಕ್ರಿಯೆಗೆ ಇಲಾಖಾ ಪದೋನ್ನತಿ ಸಮಿತಿ(ಡಿಪಿಸಿ) ಸಭೆಯನ್ನು ಸೋಮವಾರ ನಡೆಸಲಾಗಿತ್ತು. ಈ ಬಗ್ಗೆ 'ಎಂಜಿನಿಯರ್‌ಗಳ ಬಡ್ತಿಗೆ ತರಾತುರಿ' ಶೀರ್ಷಿಕೆಯಡಿ 'ವಿಕ'ದಲ್ಲಿ ವಿಶೇಷ ವರದಿ ಪ್ರಕಟಿಸಲಾಗಿದೆ.

ಈ ಮಧ್ಯೆ ಲೋಕೋಪಯೋಗಿ ಇಲಾಖೆಗೆ ಸೇರಿದ 34 ಎಇಇ, 2 ಎಸ್‌ಇ, 40 ಇಇ ಹಾಗೂ 99 ಜೆಇ/ಎಇಗಳನ್ನು (ವಿಭಾಗ-2) ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.

ದೋಸ್ತಿ ಸರಕಾರ ಪತನದಂಚಿಗೆ ಬಂದು ನಿಲ್ಲುತ್ತಿದ್ದಂತೆ ಚುರುಕಾದ ರೇವಣ್ಣ, ವರ್ಗಾವಣೆ ಹಾಗೂ ಬಡ್ತಿ ಸಂಬಂಧ ಇಲಾಖೆ ಉನ್ನತಾಧಿಕಾರಿಗಳ ಮೇಲೆ ಒತ್ತಡ ತಂದು ಇಷ್ಟು ಕೆಲಸ ಮಾಡಿಸಿದ್ದಾರೆ. ಸಚಿವರ ಸಾಮೂಹಿಕ ರಾಜೀನಾಮೆ ಪಡೆದುಕೊಳ್ಳಲಾಗಿದ್ದರೂ ರೇವಣ್ಣ ವಿಧಾನಸೌಧದಲ್ಲಿ ಸೋಮವಾರ ಬ್ಯುಸಿಯಾಗಿದ್ದರು. ಇದೇ ಸಂದರ್ಭದಲ್ಲಿ ವರ್ಗಾವಣೆ ಕಡತಕ್ಕೂ ಸಹಿ ಹಾಕಲಾಗಿದೆ. ಆದರೆ, ಹಿಂದಿನ ದಿನಾಂಕಗಳನ್ನು ನಮೂದಿಸಿ ವರ್ಗಾವಣೆ ಆದೇಶ ಹೊರಬೀಳುವಂತೆ ನೋಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ