ಆ್ಯಪ್ನಗರ

ರಾಹುಲ್‌ ಗಾಂಧಿ ಬ್ರಾಹ್ಮಣನಾಗುವುದು ಹೇಗೆ?: ಅನಂತಕುಮಾರ್‌ ಹೆಗಡೆ

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಜಾತಿಯನ್ನು ಪ್ರಶ್ನಿಸಿರುವ ಸಂಸದ ಅನಂತಕುಮಾರ ಹೆಗಡೆ ಅಪ್ಪ ಮುಸ್ಲಿಮ್‌, ಅಮ್ಮ ಕ್ರಿಶ್ಚಿಯನ್‌ ಆಗಿರುವಾಗ ಮಗ ಮಾತ್ರ ಹೇಗೆ ಬ್ರಾಹ್ಮಣನಾಗುತ್ತಾನೆ? ಎಂದು ಲೇವಡಿ ಮಾಡಿದ್ದಾರೆ.

Vijaya Karnataka Web 31 Jan 2019, 9:06 am
ಶಿರಸಿ: ಅಪ್ಪ ಮುಸ್ಲಿಮ್‌, ಅಮ್ಮ ಕ್ರಿಶ್ಚಿಯನ್‌ ಆಗಿರುವಾಗ ಮಗ ಮಾತ್ರ ಹೇಗೆ ಬ್ರಾಹ್ಮಣನಾಗುತ್ತಾನೆ? ತಾನೊಬ್ಬ ಬ್ರಾಹ್ಮಣನೆಂದು ರಾಹುಲ್‌ ಗಾಂಧಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪಕ್ಷದ ಕಾರ್ಯಕ್ರಮವೊಂದರಲ್ಲಿ ಗೇಲಿ ಮಾಡಿದ್ದಾರೆ.
Vijaya Karnataka Web Rahul Ananth


'ಜಗತ್ತಿನ ಯಾವುದೇ ಪ್ರಯೋಗಾಲಯದಲ್ಲೂ ಹೀಗೆ ಆಗುವುದಕ್ಕೆ ಸಾಧ್ಯವಿಲ್ಲ. ಕಾಂಗ್ರೆಸ್‌ನ ಲೆಬೊರೇಟರಿಯಲ್ಲಿ ಮಾತ್ರ ಇಂಥ ಹೈಬ್ರಿಡ್‌ ತಳಿಗಳು ತಯಾರಾಗಲು ಸಾಧ್ಯ. ಆದರೆ ದೇಶದ ಜನತೆ ಈಗ ಕಾಂಗ್ರೆಸ್‌ ನಾಯಕರ ಇಂಥ ಸುಳ್ಳುಗಳನ್ನು ನಂಬಲು ಸಿದ್ಧರಿಲ್ಲ' ಎಂದು ಅನಂತಕುಮಾರ್‌ ಹೆಗಡೆ ತಿಳಿಸಿದ್ದಾರೆ.

'ಮಹಾಘಟಬಂಧನ್‌ ಎನ್ನುವುದು ರಾಜಕೀಯ ಆತ್ಮಹತ್ಯಾ ದಳವಾಗಲಿದೆ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೊಲಂಬಿಯಾಕ್ಕೆ ಹೋಗಲಿದ್ದಾರೆ' ಎಂದು ಹೆಗಡೆ ವ್ಯಂಗ್ಯವಾಡಿದ್ದಾರೆ.

ಇತ್ತೀಚೆಗೆ ಅನಂತಕುಮಾರ ಹೆಗಡೆ, ಹಿಂದೂ ಹುಡುಗಿಯ ಮೈಮುಟ್ಟಿದವರ ಕೈ ಇರಬಾರದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ