ಆ್ಯಪ್ನಗರ

ರಫೇಲ್‌ ರಾಜಕೀಯ: ಕಬ್ಬನ್‌ ಪಾರ್ಕಲ್ಲಿ ನಾಳೆ ರಾಹುಲ್ ಸಭೆ

'ದೇಶದ ರಕ್ಷಣಾ ವ್ಯವಸ್ಥೆಗೆ ಎಚ್‌ಎಎಲ್‌ ಕೊಡುಗೆ' ಎಂಬ ಶೀರ್ಷಿಕೆಯಡಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಬೆಂಗಳೂರಿನಲ್ಲಿ ಸಂವಾದ ನಡೆಸಲಿದ್ದಾರೆ. ಆದರೆ, ಎಚ್‌ಎಎಲ್‌ ಸಂಸ್ಥೆ ಆವರಣದಲ್ಲಿ ಇದಕ್ಕೆ ಅನುಮತಿ ದೊರೆಯದ ಕಾರಣ ಕಬ್ಬನ್‌ ಪಾರ್ಕ್‌ನಲ್ಲಿ ಸಂವಾದ ನಡೆಸಲಿದ್ದಾರೆ.

Vijaya Karnataka 12 Oct 2018, 7:24 am
ಬೆಂಗಳೂರು: ಎಚ್‌ಎಎಲ್‌ ಸಂಸ್ಥೆ ಆವರಣದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸಂವಾದ ನಡೆಸಲು ಅನುಮತಿ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕಬ್ಬನ್‌ ಪಾರ್ಕ್‌ನ ಮಿನ್ಕ್ಸ್‌ ಸ್ಕ್ವೇರ್‌ ಬಳಿ ಈ ಸಭೆ ನಡೆಸಲು ತೀರ್ಮಾನಿಸಲಾಗಿದೆ.
Vijaya Karnataka Web rahul gandhi.


'ದೇಶದ ರಕ್ಷಣಾ ವ್ಯವಸ್ಥೆಗೆ ಎಚ್‌ಎಎಲ್‌ ಕೊಡುಗೆ' ಎಂಬ ಶೀರ್ಷಿಕೆಯಡಿ ಈ ಸಂವಾದ ನಡೆಯಲಿದೆ. ಸಂಸ್ಥೆಯ ನಿವೃತ್ತರು ಹಾಗೂ ನೌಕರರು ಸೇರಿ 100 ಮಂದಿಗೆ ಆಹ್ವಾನ ನೀಡಲಾಗಿದೆ. ಆಹ್ವಾನಿತರ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷರ ಕಾರ್ಯಾಲಯವೇ ಸಿದ್ಧಪಡಿಸಿದೆ. ಅದರಂತೆ ಶನಿವಾರ ಮಧ್ಯಾಹ್ನ ಈ ಕಾರ್ಯಕ್ರಮ ನಡೆಯಲಿದೆ.

ರಾಹುಲ್‌ ನೇತೃತ್ವದಲ್ಲಿ ಈ ಸಂವಾದ ಸಭೆ ನಡೆಯುವುದನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಖಚಿತ ಪಡಿಸಿದ್ದಾರೆ. ಆದರೆ, ಎಚ್‌ಎಎಲ್‌ ಸಂಸ್ಥೆ ಆವರಣದಲ್ಲಿ ಈ ಸಭೆ ನಡೆಸಲು ಉದ್ದೇಶಿಸಿರಲಿಲ್ಲ. ಹಾಗಾಗಿ ಅನುಮತಿ ಕೇಳುವ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಈ ಸಭೆ ಆಯೋಜಿಸುವ ಜವಾಬ್ದಾರಿಯನ್ನೂ ಪ್ರದೇಶ ಕಾಂಗ್ರೆಸ್‌ ವಹಿಸಿಕೊಂಡಿಲ್ಲ. ರಾಹುಲ್‌ ಗಾಂಧಿ ಅವರ ಕಚೇರಿಯಿಂದಲೇ ಅಗತ್ಯ ಸಂವಹನ ನಡೆಸಲಾಗಿದೆ. ರಾಹುಲ್‌ ಸಭೆ ಎಷ್ಟು ಹೊತ್ತಿಗೆ ನಡೆಯಲಿದೆ ಎನ್ನುವ ಸ್ಪಷ್ಟ ಮಾಹಿತಿ ಶುಕ್ರವಾರ ಸಿಗಲಿದೆ ಎಂದು ಗುಂಡೂರಾವ್‌ ತಿಳಿಸಿದ್ದಾರೆ.

ಕಾರ್ಯಕರ್ತರ ಸಭೆ ರದ್ದು

ರಾಹುಲ್‌ ಭೇಟಿ ವೇಳೆ ಕಾರ್ಯಕರ್ತರ ಸಮಾವೇಶ ನಡೆಸುವ ಚಿಂತನೆಯಿತ್ತು. ಸಮಯದ ಅಭಾವದಿಂದ ಈ ಸಭೆ ರದ್ದುಗೊಳಿಸಲಾಗಿದೆ.

ರಫೇಲ್‌ ಡೀಲ್‌ ವಿರುದ್ಧ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಈಗಾಗಲೇ ಪ್ರತಿಭಟಿಸಲಾಗಿದೆ. ರಾಹುಲ್‌ ನೇತೃತ್ವದಲ್ಲಿ ಸಮಾವೇಶ ಆಯೋಜಿಸಿ 1 ಲಕ್ಷ ಜನರನ್ನು ಸೇರಿಸಲು ಉದ್ದೇಶಿಸಲಾಗಿತ್ತು. ಬೆಂಗಳೂರಿನಲ್ಲಿ ಧರಣಿ ನಡೆಸಲು ಹೊಸ ದಿನಾಂಕ ಗೊತ್ತು ಪಡಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ