ಆ್ಯಪ್ನಗರ

ಬೆಂಗಳೂರು ಸೆಂಟ್ರಲ್‌ನಿಂದ ಸ್ಪರ್ಧೆ: ಪ್ರಕಾಶ್‌ ರೈ

ನಾನು ಹುಟ್ಟಿ ಬೆಳೆದದ್ದು ಇದೇ ಕ್ಷೇತ್ರದಲ್ಲಿ. ಕ್ಷೇತ್ರದ ಬಗ್ಗೆ ನನಗೆ ಅಪಾರ ಅಭಿಮಾನವಿದೆ. ಅಲ್ಲದೆ ಸೆಂಟ್ರಲ್‌ ಕ್ಷೇತ್ರದ ಗಾಂಧಿನಗರದಲ್ಲಿ ಸಿನಿಮಾ ಜಗತ್ತು, ನನ್ನ ಸ್ನೇಹಿತರು, ಕುಟುಂಬಸ್ಥರು ಇದ್ದಾರೆ.

Vijaya Karnataka 18 Jan 2019, 8:42 pm
ಬೆಂಗಳೂರು : ಲೋಕಸಭೆ ಚುನಾವಣೆಗೆ ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ನಟ ಪ್ರಕಾಶ್‌ ರೈ ತಿಳಿಸಿದರು.
Vijaya Karnataka Web ಪ್ರಕಾಶ್‌ ರೈ
ಪ್ರಕಾಶ್‌ ರೈ


''ಈ ದೇಶದಲ್ಲಿ ಎಲ್ಲರೂ ಕಳ್ಳರು. ಐದು ವರ್ಷದಲ್ಲಿ ಪ್ರಜೆಗಳಿಗೆ ಯಾರು, ಏನೂ ಮಾಡಲಿಲ್ಲ. ಜನಪ್ರತಿನಿಧಿಗಳು ಜನರ ಆಶಯಗಳತ್ತ ಗಮನಹರಿಸುತ್ತಿಲ್ಲ. ಈಗ ಅವರ ಬಗ್ಗೆ ಮಾತನಾಡಲು ಸಮಯ ಇಲ್ಲ. ಅವರನ್ನು ಬದಲಾಯಿಸುವುದೊಂದೇ ಪರಿಹಾರ. ಅದಕ್ಕಾಗಿ ನಾನು ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಇನ್ನು ಮೂರು ತಿಂಗಳಲ್ಲಿ ಚುನಾವಣೆ ಇದೆ. ಹಲವು ಹಿರಿಯರೊಂದಿಗೆ ಚರ್ಚಿಸಿ, ಚುನಾವಣೆಗೆ ಬೇಕಾದ ಎಲ್ಲಾ ರೀತಿಯ ತಯಾರಿ ನಡೆಸಲಾಗುವುದು'' ಎಂದು ಪ್ರಕಾಶ್‌ ರೈ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

''ನಾನು ಹುಟ್ಟಿ ಬೆಳೆದದ್ದು ಇದೇ ಕ್ಷೇತ್ರದಲ್ಲಿ. ಕ್ಷೇತ್ರದ ಬಗ್ಗೆ ನನಗೆ ಅಪಾರ ಅಭಿಮಾನವಿದೆ. ಅಲ್ಲದೆ ಸೆಂಟ್ರಲ್‌ ಕ್ಷೇತ್ರದ ಗಾಂಧಿನಗರದಲ್ಲಿ ಸಿನಿಮಾ ಜಗತ್ತು, ನನ್ನ ಸ್ನೇಹಿತರು, ಕುಟುಂಬಸ್ಥರು ಇದ್ದಾರೆ. ಹೀಗಾಗಿ ನಾನು ಈ ಕ್ಷೇತ್ರದಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದೇನೆ'' ಎಂದು ತಿಳಿಸಿದರು.

ಬಿಜೆಪಿಗೆ ನಾಚಿಕೆಯಾಗಬೇಕು

ಆಪರೇಷನ್‌ ಕಮಲದ ಬಗ್ಗೆ ಮಾತನಾಡಿದ ಪ್ರಕಾಶ್‌ ರೈ, ''ಬಿಜೆಪಿಗೆ ನಾಚಿಕೆಯಾಗಬೇಕು. ದೇಶಕ್ಕಾಗಿ ಯಾರೂ, ಏನೂ ಮಾಡುತ್ತಿಲ್ಲ. ಜನರ ಬಗ್ಗೆ ಯಾರಿಗೂ ಯೋಚನೆ ಇಲ್ಲ. ಎಷ್ಟು ದಿನ ನಡೆಯುತ್ತೆ ಈ ರಾಜಕೀಯ ಮೇಲಾಟ ಕಾದು ನೋಡೋಣ. ಆರು ತಿಂಗಳು ಸಿನಿಮಾ ರಂಗದಿಂದ ಬ್ರೇಕ್‌ ತೆಗೆದುಕೊಳ್ಳುತ್ತೇನೆ. ಮುಂದೆ ಏನಾಗುತ್ತೋ ನೋಡೋಣ'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ