ಆ್ಯಪ್ನಗರ

ಬೆಂಗಳೂರಿನ ಹಲವೆಡೆ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ

ರಾಜಧಾನಿ ಸುತ್ತಮುತ್ತ ಗುಡುಗು, ಮಿಂಚು

Vijaya Karnataka Web 3 May 2018, 10:35 pm
ಬೆಂಗಳೂರು: ಭಾರಿ ಬಿಸಿಲಿನಿಂದ ಬೆವರು ಹರಿಸಿದ್ದ ಜನರಿಗೆ ವರುಣ ದೇವ ಗುರುವಾರ ಸಂಜೆ ತುಸು ತಂಪು ನೀಡಿದ್ದಾನೆ.
Vijaya Karnataka Web ಬೆಂಗಳೂರಿನಲ್ಲಿ ಮಳೆ
ಬೆಂಗಳೂರಿನಲ್ಲಿ ಮಳೆ


ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮೆಜೆಸ್ಟಿಕ್‌, ಶಾಂತಿನಗರ, ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ, ಯಶವಂತಪುರ, ಹನುಮಂತನಗರ, ವಿದ್ಯಾರಣ್ಯಪುರದಲ್ಲಿ ಭಾರಿ ಮಳೆಯಾಗಿದೆ.

ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ, ಚಿಂತಾಮಣಿ, ಮಡಿಕೇರಿಯಲ್ಲಿ ಮಳೆಯಾಗಿರುವ ವರದಿಯಾಗಿದೆ.

ತುಮಕೂರು ನಗರದಲ್ಲಿ ಭೀಕರ ಗಾಳಿ ಹಾಗೂ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಂಜೆಯ ವರೆಗೆ ಸಣ್ಣಗೆ ಬಂದು ಹೋಗಿದ್ದ ಮಳೆ ರಾತ್ರಿಯಾಗುತ್ತಿದ್ದಂತೆ ತುಸು ಜೋರಾಗಿದೆ. ಮಳೆಗಿಂತಲೂ ಗಾಳಿ ರಭಸವಾಗಿ ಬೀಸುತ್ತಿದ್ದು, ಜನ ತತ್ತರಿಸಿದ್ದಾರೆ. ಅಲ್ಲಲ್ಲಿ ಮರಗಳ ರೆಂಬೆ ಕೊಂಬೆಗಳು ಧರೆಗುರುಳಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ.

ದಾವಣಗೆರೆ ನಗರದಲ್ಲಿ ಗುರುವಾರ ರಾತ್ರಿ ಕೆಲಕಾಲ ಮಳೆ ಹನಿಯಿತು.

ಗುಡುಗು, ಸಿಡಿಲು, ಮಿಂಚು ಜತೆಯಲ್ಲಿ ಸುಮಾರು 9.30 ರ ವೇಳೆಗೆ ಮಳೆ ಆರಂಭವಾಯಿತು. ಜೋರು ಗಾಳಿ ಸಹಿತ ಮಳೆ ಸುರಿಯಿತು. ಜೋರು ಗಾಳಿ ಹಿನ್ನೆಲೆಯಲ್ಲಿ ಇಲ್ಲಿನ ನಿಟುವಳ್ಳಿಯ ಕೆಇಬಿ ಬಡಾವಣೆಯ ಆದರ್ಶ ಶಾಲೆ ಹಿಂಭಾಗ ಜೋತು ಬಿದ್ದ ವಿದ್ದುತ್ ತಂತಿಗಳು ಒಂದಕ್ಕೊಂದು ತಾಕಿ ಶಾರ್ಟ್ ಸರ್ಕಿಟ್ ಆಯಿತು. ಜನತೆ ಬೀತಿಗೆ ಒಳಾಗದರು. ಆದರೆ ಯಾವುದೇ ಅಪಾಯ ಅಗಿಲ್ಲ.

ಉತ್ತರ ಭಾರತದಲ್ಲಿ ಕಾಣಿಸಿಕೊಂಡಿರುವ ಬಿರುಗಾಳಿ ಎಫೆಕ್ಟ್ ಇಲ್ಲಿಯೂ ಕಂಡುಬಂತು. ಅಲ್ಲಿ ಜೋರು ಬಿರುಗಾಳಿಯಿಂದಾಗಿ ಜೀವನ ಅಸ್ತವ್ಯಸ್ತ ಆಗಿದೆ, ಇಲ್ಲಿಯೂ ಗಾಳಿಯ ತೀವ್ರತೆ ಎಂದಿಗಿಂತ ಜೋರಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ