ಆ್ಯಪ್ನಗರ

Rain Alert: ಬೆಂಗಳೂರಲ್ಲಿ ಇನ್ನೆರಡು ದಿನ ಮಳೆ, ಕರಾವಳಿಯಲ್ಲಿ ತುಂತುರು ಮಳೆ ಮುನ್ಸೂಚನೆ

Rain Alert: ಬೆಂಗಳೂರಲ್ಲಿ ಸಂಜೆ ಹಾಗೂ ತಡರಾತ್ರಿ ಗಾಳಿ ಸಹಿತ ಮಳೆಯಾಗಿದೆ. ಇನ್ನೂ ಮೂರು ದಿನ ತುಂತುರು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Edited byಸೌಮ್ಯಶ್ರೀ ಮಾರ್ನಾಡ್ | Vijaya Karnataka Web 17 Mar 2023, 7:24 am

ಹೈಲೈಟ್ಸ್‌:

  • ಬಿಸಿಲಿನಿಂದ ಕಂಗೆಟ್ಟ ನಗರದ ಜನತೆ ಗುರುವಾರ ವರುಣನ ಸಿಂಚನದಿಂದ ಪುಳಕಿತರಾದರು.
  • ನಗರದಲ್ಲಿ ಇನ್ನೂ ಮೂರು ದಿನ ಮಾ.17, 18, 19 ರಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುರುವಾರ ನಗರದಲ್ಲಿಗರಿಷ್ಠ 33 ಡಿ.ಸೆ. ಹಾಗೂ ಕನಿಷ್ಠ 21.7 ಡಿ.ಸೆ. ತಾಪಮಾನ ದಾಖಲಾಗಿದೆ.
  • ಪಶ್ಚಿಮಘಟ್ಟದ ತಳ ಪ್ರದೇಶಗಳಾದ ಆಗುಂಬೆ, ಚಾರ್ಮಾಡಿ, ನಾರಾವಿ, ಬೆಳ್ತಂಗಡಿ, ಸುಳ್ಯ, ಸುಬ್ರಹ್ಮಣ್ಯ ಭಾಗದಲ್ಲಿಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಮುನ್ಸೂಚನಾ ಕೇಂದ್ರ ಮಾಹಿತಿ ನೀಡಿದೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web rain
ಬೆಂಗಳೂರು: ಬಿಸಿಲಿನಿಂದ ಕಂಗೆಟ್ಟ ನಗರದ ಜನತೆ ಗುರುವಾರ ವರುಣನ ಸಿಂಚನದಿಂದ ಪುಳಕಿತರಾದರು.
ನಗರದ ಮಾರುತಿ ಮಂದಿರ, ಗಾಳಿ ಆಂಜನೇಯ ದೇವಸ್ಥಾನ, ಹಂಪಿ ನಗರ, ಕೆಂಗೇರಿ, ದೊರೆಸಾನಿಪಾಳ್ಯ, ಚಾಮರಾಜಪೇಟೆ, ಶ್ರೀನಗರ, ಕತ್ರಿಗುಪ್ಪೆ ಸೇರಿದಂತೆ ಕೆಲವು ಕಡೆ ತುಂತುರು ಮಳೆಯಾಯಿತು.

ತಡರಾತ್ರಿ ಭಾರೀ ಮಳೆ

ತಡರಾತ್ರಿ ಹಲವೆಡೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಲ್ಲಾಳ, ಕೆಂಗೇರಿ, ಆರ್ ಆರ್ ನಗರ, ನಾಗರಭಾವಿ, ಬಿಯು ಕ್ಯಾಂಪಸ್ ಹಾಗೂ ಮೈಸೂರು ರಸ್ತೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಸಲ್ಲದೆ ಐಕಿಯಾ, ಯಶವಂತಪುರ, ರಜಾಜಿನಗರ, ಪೀಣ್ಯ, ಹೆಸರಘಟ್ಟ, ಜೆಪಿ ಪಾರ್ಕ್, ವಿದ್ಯಾರಣ್ಯಪುರದಲ್ಲೂ ಮಳೆಯಾಗಿದೆ.

Summer Rain In Karnataka-ಇಳೆಗೆ ಮೊದಲ ಮಳೆಯ ಸ್ಪರ್ಷ: ಕೋಲಾರದಲ್ಲಿ ಆಲಿಕಲ್ಲು ಮಳೆಗೆ ಬೆಳನಾಶ, ಬೀದರಲ್ಲಿ ಜನಜೀವನ ಅಸ್ತವ್ಯಸ್ತ

ಮಳೆ ಮುನ್ಸೂಚನೆ

ನಗರದಲ್ಲಿ ಇನ್ನೂ ಮೂರು ದಿನ ಮಾ.17, 18, 19 ರಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುರುವಾರ ನಗರದಲ್ಲಿಗರಿಷ್ಠ 33 ಡಿ.ಸೆ. ಹಾಗೂ ಕನಿಷ್ಠ 21.7 ಡಿ.ಸೆ. ತಾಪಮಾನ ದಾಖಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಗರಿಷ್ಠ 33 ಹಾಗೂ ಕನಿಷ್ಠ 21 ಡಿ.ಸೆ., ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಗರಿಷ್ಠ 32.6 ಹಾಗೂ ಕನಿಷ್ಠ 20.5 ಡಿ.ಸೆ. ತಾಪಮಾನ ದಾಖಲಾಗಿದೆ.

ಹವಾಮಾನ ವೈಪರೀತ್ಯದ ಪರಿಣಾಮ ನಗರದಲ್ಲಿ ಮುಂದಿನ ಮೂರು ದಿನ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಸಮುದ್ರ ಮಟ್ಟದಿಂದ 1.5 ಕಿಲೋ ಮೀಟರ್‌ ಎತ್ತರದವರೆಗೆ ಸುಳಿಗಾಳಿ ನಿರ್ಮಾಣವಾಗಿದೆ. ಎಲ್ಲೆಡೆ ಹೆಚ್ಚಾಗಿದ್ದ ತಾಪಮಾನ ತುಸು ಕಡಿಮೆಯಾಗಿದೆ. ಈ ಅಕಾಲಿಕ ಹವಾಮಾನ ಬದಲಾವಣೆಗಳ ಪರಿಣಾಮ ಮಾ. 17 ರಿಂದ ಮೂರು ದಿನ ನಗರದಲ್ಲಿ ಒಂದೆರಡು ಕಡೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಧಿಳಿಧಿಸಿಧಿದೆ.

ಎರಡು ದಿನದಿಂದ ಮಧ್ಯಾಹ್ನ ಹೊರತು ಪಡಿಸಿದರೆ ಉಳಿದ ಸಮಯದಲ್ಲಿ ತಾಪಮಾನ ದಾಖಲಾತಿಯಲ್ಲಿ ಇಳಿಕೆ ಕಂಡು ಬಂದಿದೆ. ಇದು ಮಳೆಯ ಮುನ್ಸೂಚನೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರು ನಗರದಲ್ಲಿ ಗರಿಷ್ಠ 33.6 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ 19.8 ಡಿಗ್ರಿ ಸೆಲ್ಸಿಯಸ್‌, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಗದಲ್ಲಿಗರಿಷ್ಠ 33.1 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 19.8 ಡಿಗ್ರಿ ಸೆಲ್ಸಿಯಸ್‌ ಹಾಗೂ ಬೆಂಗಳೂರು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿಗರಿಷ್ಠ 32.5 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಧಿಲಾಖೆ ವರದಿ ತಿಳಿಸಿದೆ.

Bengaluru Rains: ಬೆಂಗಳೂರಿಗೆ ಬೇಸಿಗೆಯ ಮೊದಲ ಮಳೆ, ನಗರದ ಹಲವು ಕಡೆ ಮಧ್ಯರಾತ್ರಿ ವರ್ಷಧಾರೆ
ಕರಾವಳಿಯಲ್ಲಿ ತುಂತುರು ಮಳೆ ಮುನ್ಸೂಚನೆ
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ, ಕಾಸರಗೋಡು ಭಾಗಗಳಲ್ಲಿ ಗುರುವಾರ ಮೋಡ ಹಾಗೂ ಬಿಸಿಲಿನ ವಾತಾವರಣವಿದ್ದು, ಶುಕ್ರವಾರವೂ ಮುಂದುವರಿಯಲಿದೆ. ಈ ಮಧ್ಯೆ ಪಶ್ಚಿಮಘಟ್ಟದ ತಳ ಪ್ರದೇಶಗಳಾದ ಆಗುಂಬೆ, ಚಾರ್ಮಾಡಿ, ನಾರಾವಿ, ಬೆಳ್ತಂಗಡಿ, ಸುಳ್ಯ, ಸುಬ್ರಹ್ಮಣ್ಯ ಭಾಗದಲ್ಲಿಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಮುನ್ಸೂಚನಾ ಕೇಂದ್ರ ಮಾಹಿತಿ ನೀಡಿದೆ.

ಕರಾವಳಿಯಾಧ್ಯಂತ ಕಳೆದ ವಾರದಿಂದ ಮುಂದುವರಿದಿದ್ದ ಹೀಟ್‌ವೇವ್‌ (ಉಷ್ಣ ಗಾಳಿ) ಸಾಧಾರಣ ಸ್ಥಿತಿಗೆ ಬಂದಿದ್ದು, ಮಂಗಳೂರಿನ ಪಣಂಬೂರಿನಲ್ಲಿ ಗರಿಷ್ಠ ತಾಪಮಾನ ಸರಾಸರಿ 33.7 ಡಿ.ಸೆ., ಕನಿಷ್ಠ ತಾಪಮಾನ 23.4 ಡಿ.ಸೆ. ದಾಖಲಾಗಿದೆ. ದಕ್ಷಿಣ ಕನ್ನಡ ಉಡುಪಿ ಹಾಗು ಉತ್ತರ ಕನ್ನಡದಲ್ಲಿ ಗರಿಷ್ಠ ತಾಪಮಾನದಲ್ಲಿ ಸದ್ಯ 31-35 ಡಿ.ಸೆ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾದೆ. ಗುರುವಾರ ರಾತ್ರಿ ಮೋಡದ ವಾತಾವರಣದವಿದ್ದು, ಬೆಳಗ್ಗೆ ಅಲ್ಲಲ್ಲಿ ಸಾಮಾನ್ಯ ಹನಿ ಮಳೆಯಾಗುವ ಸಾಧ್ಯತೆ ಇದೆ ಎಂದು ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಅಲ್ಲಲ್ಲಿ ಮಳೆ:
ಸಂಪಾಜೆ ಹಾಗೂ ಸುಳ್ಯ ಭಾಗದಲ್ಲಿ ಗುರುವಾರ ಹನಿ ಮಳೆಯಾಗಿದೆ. ಚಾರ್ಮಾಡಿ, ಸೋಮನ ಕಾಡು ಪ್ರದೇಶದ ಹಲವೆಡೆ ಹನಿ ಮಳೆಯಾಗಿದೆ. ಮುಂದಿನ 24 ಗಂಟೆಗಳೊಳಗೆ ದೊಡ್ಡ ಮಳೆಯ ಸಾಧ್ಯತೆ ಕಡಿಮೆ, ನಾಳೆಯಿಂದ ಕರಾವಳಿಗೆ ಮಳೆಯ ಪ್ರಮಾಣ ಕ್ಷೀಣವಾಗಲಿದೆ.
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ