ಆ್ಯಪ್ನಗರ

ಖರ್ಗೆ ಅಂಗಳಕ್ಕೆ ಚೆಂಡೆಸೆದ ಜಾರಕಿಹೊಳಿ

ಮೈತ್ರಿ ಸರಕಾರದ ಬಿಕ್ಕಟ್ಟಿನ ಚೆಂಡನ್ನು ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಂಗಳಕ್ಕೆ ಎಸೆದಿರುವ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಖರ್ಗೆ ಆಣತಿಯಂತೆ ನಡೆದುಕೊಳ್ಳಲಾಗುವುದು ಎಂದಿದ್ದಾರೆ.

Vijaya Karnataka 13 Sep 2018, 9:42 am
ಬೆಂಗಳೂರು: ಮೈತ್ರಿ ಸರಕಾರದ ಬಿಕ್ಕಟ್ಟಿನ ಚೆಂಡನ್ನು ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಂಗಳಕ್ಕೆ ಎಸೆದಿರುವ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಖರ್ಗೆ ಆಣತಿಯಂತೆ ನಡೆದುಕೊಳ್ಳಲಾಗುವುದು ಎಂದಿದ್ದಾರೆ.
Vijaya Karnataka Web ramesh jarkiholi


ಖರ್ಗೆ ಅವರನ್ನು ಬುಧವಾರ ಭೇಟಿಯಾಗಿ ಚರ್ಚಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಖರ್ಗೆಯವರು ನಮ್ಮ ರಾಜಕೀಯ ಗುರುಗಳು. ಜತೆಗೆ ತಂದೆ ಸಮಾನರು. ಅವರ ಆದೇಶ ಪಾಲಿಸಲಾಗುವುದು,'' ಎಂದರು.

''ನಾನು ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕ. ಬೆಳಗಾವಿ, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ದಾವಣಗೆರೆ ಜಿಲ್ಲೆಗಳಲ್ಲಿ ನಮ್ಮ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಮ್ಮ ಸಮುದಾಯಕ್ಕೆ ಹೆಚ್ಚಿನ ಸಚಿವ ಸ್ಥಾನ ನೀಡುವಂತೆ ಪಕ್ಷದ ಹಿರಿಯರಲ್ಲಿ ಕೇಳಿಕೊಳ್ಳಲಾಗಿದೆ. ಪರಮೇಶ್ವರ, ದಿನೇಶ್‌ ಗುಂಡೂರಾವ್‌ ಅವರಿಗೂ ನಮ್ಮ ಅಭಿಪ್ರಾಯ ತಿಳಿಸಲಾಗಿದೆ,'' ಎಂದು ಹೇಳಿದರು.

ಬಿಜೆಪಿ ಹಗಲುಗನಸು: ಖರ್ಗೆ


ಮೈತ್ರಿ ಸರಕಾರ ಪತನದ ಬಗ್ಗೆ ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆಂದು ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಸರಕಾರ ಸುಭದ್ರವಾಗಿದ್ದು ಯಾವುದೇ ಗೊಂದಲವಿಲ್ಲ. ಜಾರಕಿಹೊಳಿ ಸಹೋದರರೊಂದಿಗೂ ಚರ್ಚಿಸಲಾಗುತ್ತಿದೆ. ಜಾರಕಿಹೊಳಿ ಕುಟುಂಬದವರು ಹಲವು ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದು ಪಕ್ಷಕ್ಕೆ ನಿಷ್ಠರಾಗಿದ್ದಾರೆæ. ಏನೇ ಸಮಸ್ಯೆಯಾದರೂ ಬಗೆಹರಿಸಲಾಗುವುದು,'' ಎಂದರು.

ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಅವರಿಗೆ ವಿದಾಯ ಹೇಳಲಾಗುತ್ತದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ''40 ವರ್ಷದಿಂದ ರಾಜಕೀಯದಲ್ಲಿದ್ದೇನೆ. ನರೇಂದ್ರ ಮೋದಿ, ಅಮಿತ್‌ ಶಾ ಅವರಿಗೆ ನನ್ನ ಹಣೆಬರೆಹ ಬರೆಯಲು ಸಾಧ್ಯವಿಲ್ಲ. ಅದನ್ನು ಜನರು ನಿರ್ಧರಿಸುತ್ತಾರೆ,'' ಎಂದು ಟಾಂಗ್‌ ಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ