ಆ್ಯಪ್ನಗರ

ರವಿ ಬೆಳಗೆರೆ ಜಾಮೀನು ಅವಧಿ ವಿಸ್ತರಣೆ

ಪತ್ರಕರ್ತ ಸುನೀಲ್‌ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತರಾಗಿದ್ದ ಹಾಯ್‌ ಬೆಂಗಳೂರು ವಾರಪತ್ರಿಕೆ ಸಂಪಾದಕ, ಪತ್ರಕರ್ತ ರವಿ ಬೆಳಗೆರೆ ಮಧ್ಯಾಂತರ ಜಾಮೀನು ಅವಧಿಯನ್ನು ಡಿ.18ವರೆಗೆ ವಿಸ್ತರಿಸಿ ಸೆಷೆನ್ಸ್‌ ನ್ಯಾಯಾಲಯ ಆದೇಶಿಸಿದೆ.

Vijaya Karnataka 17 Dec 2017, 7:45 am

ಬೆಂಗಳೂರು: ಪತ್ರಕರ್ತ ಸುನೀಲ್‌ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪದಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತರಾಗಿದ್ದ ಹಾಯ್‌ ಬೆಂಗಳೂರು ವಾರಪತ್ರಿಕೆ ಸಂಪಾದಕ, ಪತ್ರಕರ್ತ ರವಿ ಬೆಳಗೆರೆ ಮಧ್ಯಾಂತರ ಜಾಮೀನು ಅವಧಿಯನ್ನು ಡಿ.18ವರೆಗೆ ವಿಸ್ತರಿಸಿ ಸೆಷೆನ್ಸ್‌ ನ್ಯಾಯಾಲಯ ಆದೇಶಿಸಿದೆ.

ಮಧ್ಯಾಂತರ ಜಾಮೀನು ಅಂತ್ಯವಾದ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿ ಬೆಳಗೆರೆ ಅವರು ಶನಿವಾರ ಸೆಷನ್‌ ನ್ಯಾಯಾಲಯಕ್ಕೆ ಹಾಜರಾದರು. ಈ ವೇಳೆ ಅನಾರೋಗ್ಯದ ಕಾರಣ ಜಾಮೀನು ವಿಸ್ತರಿಸುವಂತೆ ಅವರ ಪರ ವಕೀಲರ ಮನವಿ ಮನ್ನಿಸಿದ ನ್ಯಾಯಾಲಯ ಮತ್ತೆ ಮೂರು ದಿನ ಜಾಮೀನು ಅವಿಧಿ ವಿಸ್ತರಿಸಿತು.

ಬೆಳಗೆರೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಸಿಬಿ ಪೊಲೀಸರು ಒಂದು ವಾರ ಕಾಲಾವಕಾಶ ಕೇಳಿದರು. ಕಾಲಾವಕಾಶ ನೀಡಿದ ನ್ಯಾಯಾಲಯ ವಿಚಾರಣೆಯನ್ನು ಡಿ.18ಕ್ಕೆ ಮುಂದೂಡಿತು. ರವಿ ಬೆಳಗೆರೆಯ ಮಾಜಿ ಸಹೋದ್ಯೋಗಿ ಪತ್ರಕರ್ತ ಸುನೀಲ್‌ ಹೆಗ್ಗರವಳ್ಳಿ ತಮ್ಮ ವಕೀಲರ ಜತೆ ನ್ಯಾಯಾಲಯಕ್ಕೆ ಆಗಮಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ