ಆ್ಯಪ್ನಗರ

ಆರ್‌ಸಿಇಪಿಗೆ 'ನೋ' ಎಂದ ಭಾರತ: ವಿಕ ಅಭಿಯಾನಕ್ಕೆ ಮಹಾಜಯ

ಆರ್‌ಸಿಇಪಿ ಒಪ್ಪಂದದ ಎಲ್ಲ ಮಗ್ಗುಲುಗಳನ್ನು ಆಳವಾಗಿ ವಿಮರ್ಶಿಸಿದ ವಿಜಯ ಕರ್ನಾಟಕ ಪರ ಮತ್ತು ವಿರೋಧದ ಧ್ವನಿಗಳೆರಡಕ್ಕೂ ಅವಕಾಶ ನೀಡಿದೆ. ಈ ಒಪ್ಪಂದಕ್ಕೆ ಸೇರಿಕೊಳ್ಳಲು ಇನ್ನು 1 ವರ್ಷ ಅವಕಾಶವಿದ್ದು, ವಿಸ್ತೃತ ಚರ್ಚೆ ನಡೆಯಬೇಕಿದೆ. ಜನಾಭಿಪ್ರಾಯ ಗಟ್ಟಿಗೊಳ್ಳಬೇಕಿದೆ.

Vijaya Karnataka Web 5 Nov 2019, 8:16 am
ಸಮಗ್ರ ಮಾಧ್ಯಮ ಕ್ಷೇತ್ರವನ್ನೇ ತೆಗೆದುಕೊಂಡರೂ ಆರ್‌ಸಿಇಪಿ ವಿರುದ್ಧ ಮೊದಲ ಧ್ವನಿ ಎತ್ತಿದ್ದು ವಿಜಯ ಕರ್ನಾಟಕ. ಕೃಷಿಕರು, ಹೈನುಗಾರರು, ಸಣ್ಣ ಉದ್ಯಮಗಳ ಮೇಲೆ ಆರ್‌ಸಿಇಪಿ ಉಂಟುಮಾಡಲಿರುವ ಮಾರಕ ಪರಿಣಾಮಗಳನ್ನು ಗ್ರಹಿಸಿದ ವಿಕ ಸುಮಾರು 2 ವಾರಗಳ ಕಾಲ ಕಾಳಜಿಪೂರ್ವಕ ಸರಣಿ ವರದಿಗಳನ್ನು ಪ್ರಕಟಿಸಿದೆ. ವಿಕ ವರದಿ ಪ್ರಕಟಗೊಂಡ ಬಳಿಕವೇ ರಾಜ್ಯ ಮತ್ತು ದೇಶದ ಇತರ ಪತ್ರಿಕೆಗಳು ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮಗಳು ಜಾಗೃತವಾಗಿ ಜನಪರ ನಿಲುವು ತಳೆದವು. ರಾಜ್ಯದ ಹೈನುಗಾರರು, ಕೃಷಿಕರು ಬೀದಿಗಿಳಿದು ಪ್ರತಿಭಟನೆ ನಡೆಸುವಲ್ಲಿಯೂ ವಿಕ ಪ್ರೇರಣೆಯಾಯಿತು. ಒಪ್ಪಂದದ ಎಲ್ಲ ಮಗ್ಗುಲುಗಳನ್ನು ಆಳವಾಗಿ ವಿಮರ್ಶಿಸಿದ ವಿಕ ಪರ ಮತ್ತು ವಿರೋಧದ ಧ್ವನಿಗಳೆರಡಕ್ಕೂ ಅವಕಾಶ ನೀಡಿದೆ.
Vijaya Karnataka Web RCEP VK


ಆರ್‌ಸಿಇಪಿ ಒಪ್ಪಂದಕ್ಕೆ ನೋ ಎಂದ ನಂತರ ಭಾರತವನ್ನು ಬಿಟ್ಟು 15 ರಾಷ್ಟ್ರಗಳು ಸೋಮವಾರ ಸಹಿ ಹಾಕಿವೆ. ಒಪ್ಪಂದ ಜಾರಿಯಾಗುವ 2022ರ ಮೊದಲು ಭಾರತಕ್ಕೆ ಸೇರಿಕೊಳ್ಳಲು ಅವಕಾಶವಿದೆ ಎಂದು ತಿಳಿಸಲಾಗಿದೆ. ಒಟ್ಟಾರೆ ಆರ್‌ಸಿಇಪಿ ಒಪ್ಪಂದದ ಬಗ್ಗೆ ವಿಸ್ತೃತ ಚರ್ಚೆಗೆ ಇನ್ನು 1 ವರ್ಷ ಕಾಲಾವಕಾಶವಿದೆ. ಆರ್‌ಸಿಇಪಿ ಪರಿಣಾಮಗಳ ಬಗ್ಗೆ ಆಳವಾದ ಅಧ್ಯಯನ, ಚರ್ಚೆ, ಜನಾಭಿಪ್ರಾಯಗಳನ್ನು ಕಲೆ ಹಾಕಿ ಒಂದು ಉತ್ತಮ ನಿರ್ಧಾರಕ್ಕೆ ಬರಬೇಕಿದೆ.


ವಿಕ ಅಭಿಯಾನಕ್ಕೆ ಶ್ಲಾಘನೆಗಳ ಮಹಾಪೂರ
ಆರ್‌ಸಿಇಪಿ ಆತಂಕ ಸಧ್ಯಕ್ಕೆ ನಿವಾರಣೆಯಾಗಿದ್ದರೂ ಸಹಿ ಹಾಕಿದರೆ ಹೈನೋದ್ಯಮಕ್ಕೆ ದೊಡ್ಡ ಹೊಡೆತ ಬೀಳಲಿದೆ. ಅತ್ಯಂತ ಕಡಿಮೆ ದರದಲ್ಲಿ ಹಾಲು, ಹಾಲು ಉತ್ಪನ್ನಗಳು ಆಮದಾಗಿ. ದುಷ್ಪರಿಣಾಮ ಬೀರಲಿದೆ. ಈ ಬಗ್ಗೆ ಸರಣಿ ವರದಿ ಪ್ರಕಟಿಸಿದ ವಿಜಯ ಕರ್ನಾಟಕದ ಕಾರ್ಯ ಶ್ಲಾಘನೀಯ.
- ಕೆ. ರವಿರಾಜ ಹೆಗ್ಡೆ, ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ

ರಾಷ್ಟ್ರದಾದ್ಯಂತ ಈ ಒಪ್ಪಂದದ ವಿರುದ್ಧ ರೈತರು ಒಗ್ಗಟ್ಟಾಗಿ ಹೋರಾಟ ನಡೆಸುತ್ತಿದ್ದಾರೆ. ಒಪ್ಪಂದದ ದುಷ್ಪರಿಣಾಮದ ಬಗ್ಗೆ ವಿಜಯ ಕರ್ನಾಟಕವು ದೊಡ್ಡ ಮಟ್ಟದಲ್ಲಿ ವರದಿ ಪ್ರಕಟಿಸಿ ದೇಶದ ಬೆನ್ನೆಲುಬು ರೈತರ ಪರವಾಗಿ ನಿಂತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.
- ಎಂ. ಸಿ ನಾಣಯ್ಯ, ಮಾಜಿ ಸಚಿವ

ನಾವು ಪ್ರಕಟಿಸಿದ ಆರ್‌ಸಿಇಪಿ ಒಪ್ಪಂದಕ್ಕೆ ಸಂಬಂಧಿಸಿದ ಪ್ರಮುಖ ವರದಿಗಳು ಇಲ್ಲಿವೆ
1. ಏನಿದು ಆರ್‌ಸಿಇಪಿ ಒಪ್ಪಂದ? ಇದರಿಂದ ಭಾರತದಲ್ಲಿ ಬೃಹತ್‌ ಉದ್ಯೋಗ ನಾಶವಾಗೋದು ಹೇಗೆ?
2. ಆರ್‌ಸಿಇಪಿ ಗುಮ್ಮ ಬರುತ್ತಿದೆ: ಟೂ ಮಿನಿಟ್ಸು ಮ್ಯಾಗಿ ಅಂತೆ. ಅಷ್ಟೇ ಟೂ ಮಿನಿಟ್ಸಲ್ಲಾಗೋ ರಾಗಿ ಗಂಜಿಗೆ ಅಂಥ ಜಾಹೀರಾತು ಕೊಟ್ಟೆವಾ?
3. ಕೃಷಿಗೆ ಕುತ್ತು, ಉದ್ಯಮಕ್ಕೂ ಆಪತ್ತು: ಭಾರತದ ಆರ್ಥಿಕತೆ ಮೇಲೆ ಗದಾಪ್ರಹಾರಕ್ಕೆ ಕಾದು ಕುಳಿತಿದೆ ಆರ್‌ಸಿಇಪಿ ಮುಕ್ತ ಒಪ್ಪಂದ
4. ಅಂದುಕೊಂಡಷ್ಟು ಸುಲಭವಲ್ಲ ಆರ್‌ಸಿಇಪಿ ಒಪ್ಪಂದ!
5. ಆರ್‌ಸಿಇಪಿ ಒಪ್ಪಂದ ಮತ್ತು ಭಾರತದ Production by masses ವ್ಯವಸ್ಥೆ!
6. ಆರ್‌ಸಿಇಪಿ ಒಪ್ಪಂದಕ್ಕೆ ಬ್ರೇಕ್‌: ಭಾರತ ಆಕ್ಷೇಪದಿಂದ ಒಂದು ವರ್ಷ ಮುಂದಕ್ಕೆ
7. ಭಾರತ ಕಳವಳ ಪ್ರತಿಬಿಂಬಿಸಿದ ಮೋದಿ: ಆರ್‌ಸಿಇಪಿ ಆತಂಕ ಒಂದು ವರ್ಷ ಮುಂದಕ್ಕೆ
8. ಆರ್‌ಸಿಇಪಿ ಒಪ್ಪಂದ: ಸೇರಿದರೂ ಸೇರದಿದ್ದರೂ ಸವಾಲು!
9. ಆರ್‌ಸಿಇಪಿಗೆ ಭಾರತ ಸೇರದಿರುವುದರಿಂದ ಪರಿಣಾಮಗಳೇನು?
10. ಆರ್‌ಸಿಇಪಿ ಒಪ್ಪಂದ: ಭಾರತದ ಬೇಡಿಕೆಗಳೇನಿದ್ದವು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ