ಆ್ಯಪ್ನಗರ

ಅರತಕ್ಷತೆ ಊಟ ಸೇವಿಸಿ 150 ಜನ ಆಸ್ಪತ್ರೆಗೆ

ತಾಲೂಕಿನ ಜಯಂತಿ ನಗರದಲ್ಲಿ ಮದುವೆ ಮನೆಯೊಂದರ ಅರತಕ್ಷ ತೆ ಊಟ ಸೇವಿಸಿದ ಸುಮಾರು 150 ಮಂದಿ ವಾಂತಿ, ಹೊಟೆ ನೋವಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶನಿವಾರ ಜರುಗಿದೆ.

Vijaya Karnataka 29 Apr 2018, 7:32 am
ಚನ್ನಗಿರಿ: ತಾಲೂಕಿನ ಜಯಂತಿ ನಗರದಲ್ಲಿ ಮದುವೆ ಮನೆಯೊಂದರ ಅರತಕ್ಷ ತೆ ಊಟ ಸೇವಿಸಿದ ಸುಮಾರು 150 ಮಂದಿ ವಾಂತಿ, ಹೊಟ್ಟೆ ನೋವಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶನಿವಾರ ಜರುಗಿದೆ.
Vijaya Karnataka Web Doctor


ಕಾರಿಗನೂರು ಗ್ರಾಮದಲ್ಲಿ ಮಂಜಾನಾಯ್ಕನ ಮದುವೆ ಸಂಧ್ಯಾರಾಣಿ ಜತೆ ಶುಕ್ರವಾರ ಜರುಗಿತು. ಶನಿವಾರ ವರನ ಮನೆಯಲ್ಲಿ ಅರತಕ್ಷತೆ ಏರ್ಪಡಿಸಲಾಗಿತ್ತು. ಮಧ್ಯಾಹ್ನ 2 ಗಂಟೆಗೆ ಅರತಕ್ಷ ತೆ ಮುಗಿದಿದ್ದು ಊಟ ಮಾಡಿದ ಬಹುತೇಕ ಜನರು ವಾಂತಿಯಿಂದ ಅಸ್ವಸ್ಥರಾದರು. ತಕ್ಷಣ ಚನ್ನಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದವರನ್ನು ಶಿವಮೊಗ್ಗ ಆಸ್ಪತ್ರೆಗೆ ಕಳುಹಿಸಲಾಗಿದೆ. ಮದುವೆಯ ಮನೆಯ ಅಹಾರದ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗುವುದು ಎಂದು ವೈದ್ಯಾಧಿಕಾರಿ ಡಾ.ಗಿರಿ ತಿಳಿಸಿದ್ದಾರೆ.

ಆಸ್ಪತ್ರೆಗೆ ಬಿಜೆಪಿ ಮುಖಂಡ ಮಾಡಾಳ್‌ ಮಲ್ಲಿಕಾರ್ಜುನ್‌ ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸಿದ್ದಾರೆ.

ಚನ್ನಗಿರಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಂತಿ ನಗರದ ಗ್ರಾಮಸ್ಥರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ