ಆ್ಯಪ್ನಗರ

ಜಿಎಸ್‌ಟಿ ಇಳಿಕೆ ಲಾಭ ಗ್ರಾಹಕರಿಗೆ ನೀಡದಿದ್ದರೆ ಕೇಸ್‌

ಆಹಾರ - ನಾಗರಿಕ ಪೂರೈಕೆ ಸಚಿವ ಯುಟಿ ಖಾದರ್‌ ಎಚ್ಚರಿಕೆ

Vijaya Karnataka 27 Nov 2017, 11:18 pm

ಮಂಗಳೂರು: ''ಕೇಂದ್ರ ಸರಕಾರವು ಕೆಲವು ವಸ್ತುಗಳ ಮೇಲಿನ ಜಿಎಸ್‌ಟಿ ದರ ಇಳಿಸಿದೆ. ಹಾಗಾಗಿ ವ್ಯಾಪಾರಸ್ಥರು ಆಯಾ ವಸ್ತುಗಳ ಇಳಿದ ದರ ಆಧರಿಸಿಯೇ ಮಾರಬೇಕಾಗುತ್ತದೆ. ಈ ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುತ್ತದೆ,'' ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್‌ ಎಚ್ಚರಿಸಿದ್ದಾರೆ.

Vijaya Karnataka Web reduce the gst rates
ಜಿಎಸ್‌ಟಿ ಇಳಿಕೆ ಲಾಭ ಗ್ರಾಹಕರಿಗೆ ನೀಡದಿದ್ದರೆ ಕೇಸ್‌


ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು ''ಕೆಲವು ವಸ್ತುಗಳ ಮೇಲಿನ ದರ ಇಳಿಕೆ ನ.14ರಿಂದ ಜಾರಿಗೆ ಬಂದಿದೆ. ನ.22ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಕಡಿತಗೊಂಡ ದರ ನಮೂದಿಸುವಂತೆ ಸೂಚಿಸಲಾಗಿದೆ. ಆದೇಶ ಪಾಲಿಸದ ಅಂಗಡಿಗಳು, ಕಂಪನಿಗಳ ಮೇಲೆ ಪ್ರಕರಣ ದಾಖಲಿಸುವ ಕಾರ್ಯ ನಡೆಯುತ್ತಿದೆ. ಮಂಗಳೂರಿನಲ್ಲಿ 22 ಕಡೆ ಪರಿಶೀಲಿಸಿ, ಗ್ರಾಹಕ ಕಾಯಿದೆಯಡಿ ಐದು ಪ್ರಕರಣ ದಾಖಲಿಸಲಾಗಿದೆ,'' ಎಂದರು.

ಜಿಎಸ್‌ಟಿ ಉತ್ತಮ, ಅನುಷ್ಠಾನ ಕಳಪೆ

''ಕೇಂದ್ರ ಸರಕಾರ ಮುಂದಾಲೋಚನೆ ಇಲ್ಲದೆ ಜಿಎಸ್‌ಟಿಯನ್ನು ತರಾತುರಿಯಲ್ಲಿ ಜಾರಿಗೆ ತಂದಿದ್ದರಿಂದ ಸಾರ್ವಜನಿಕರು ತೊಂದರೆಪಡುವಂತಾಯಿತು. ಜಿಎಸ್‌ಟಿ ವ್ಯವಸ್ಥೆ ಉತ್ತಮವಾಗಿದೆ. ಆದರೆ ಅನುಷ್ಠಾನ ಕಳಪೆಯಾಗಿದೆ,'' ಎಂದು ಬಣ್ಣಿಸಿದರು.

''ಕೆಲವು ಕಡೆಗಳಲ್ಲಿ ಕಡಿತಗೊಂಡ ದರಗಳನ್ನು ಅಂಗಡಿ ಅಥವಾ ಕಂಪನಿಯವರು ರಿಯಾಯಿತಿ ಎಂದು ಬಿಂಬಿಸಿದ್ದಾರೆ. ಇದು ತಪ್ಪು. ಕಡಿತಗೊಂಡ ದರವನ್ನು ಅಂಗಡಿ ಮಾಲೀಕರು ಕಡ್ಡಾಯವಾಗಿ ನಮೂದಿಸಬೇಕು. ಜೆಎಸ್‌ಟಿ ದರ ಇಳಿಕೆಯ ಪ್ರಯೋಜನ ಸಾರ್ವಜನಿಕರಿಗೆ ದೊರೆಯುವಂತಾಗಬೇಕು,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ