ಆ್ಯಪ್ನಗರ

ಶಿರಾ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ; ರಾಜ್ಯಾಧ್ಯಕ್ಷರ ಆಗಮನಕ್ಕೂ ಮುನ್ನವೇ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ ಟಿಕೆಟ್‌ ಆಕಾಂಕ್ಷಿ

ಇನ್ನೇನು ಉಪಚುನಾವಣೆಗೆ ಕೆಲವೇ ವಾರಗಳು ಮಾತ್ರ ಬಾಕಿ ಇರೋವಾಗ ಶಿರಾ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಿದರೆ ನಾವು ಕೆಲಸ ಮಾಡಲ್ಲ ಎಂದು ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ.

Vijaya Karnataka Web 2 Oct 2020, 11:56 am
ತುಮಕೂರು: ಅನೇಕ ಕಾರಣಗಳಿಂದ ತೆರವಾಗಿರುವ ವಿಧಾನಸಭಾ ಉಪಚುನಾವಣೆಗೆ ಅಖಾಡ ಸಜ್ಜಾಗಿದೆ. ಚುನಾವಣೆಗೆ ದಿನವೂ ಘೋಷಣೆಯಾಗಿದೆ. ಶಿರಾ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಈಗಾಗಲೇ ಘೋಷಣೆ ಮಾಡಿದರೆ, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಮಾತ್ರ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಇನ್ನೂ ಅಂತಿಮ ನಿರ್ಧಾರಕ್ಕೆ ಬರಲಾಗದೆ ಒದ್ದಾಡ್ತಿವೆ.
Vijaya Karnataka Web BJP FLAG


ಆರ್‌ಆರ್ ‌ನಗರಕ್ಕೆ ಬಿಜೆಪಿಯಿಂದ ಇಬ್ಬರ ಹೆಸರು, ಶಿರಾಕ್ಕೆ ಮೂವರ ಹೆಸರು ಶಿಫಾರಸು

ಇಂತಹ ಗೊಂದಲಗಳಿರುವಾಗಲೇ ಶಿರಾ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಇನ್ನೇನು ಉಪಚುನಾವಣೆಗೆ ಕೆಲವೇ ವಾರಗಳು ಮಾತ್ರ ಬಾಕಿ ಇರೋವಾಗ ಶಿರಾ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಿದರೆ ನಾವು ಕೆಲಸ ಮಾಡಲ್ಲ ಎಂದು ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ.

ಕಾಲೇಜು ಉಪನ್ಯಾಸಕರ ವರ್ಗಾವಣೆ ನಿಯಮಕ್ಕೆ ಸಂಪುಟ ಒಪ್ಪಿಗೆ

ಜೆಡಿಎಸ್‌ನ ಡಾ. ರಾಜೇಶ್ ಗೌಡರನ್ನ ಪಕ್ಷಕ್ಕೆ ಕರೆತಂದು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆ ಸಾಧ್ಯತೆ ಇರುವ ಹಿನ್ನೆಲೆ ಶಿರಾ ಬೈ ಎಲೆಕ್ಷನ್‌ಗೆ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಬಿಕೆ ಮಂಜುನಾಥ್ ಅಸಮಾಧಾನ ಹೊರ ಹಾಕಿದ್ದು, ಬೇರೆ ಪಕ್ಷದ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ನಮ್ಮ ವಿರೋಧವಿದೆ. ಹೊರಗಿನಿಂದ ಬಂದವರಿಗೆ ಟಿಕೆಟ್ ಕೊಟ್ಟರೆ ನಾವು ಕೆಲಸ ಮಾಡಲ್ಲ. ಒಂದು ವೇಳೆ ಟಿಕೆಟ್‌ ಕೊಟ್ಟಿದ್ದೇ ಆದರೆ ನಾವೆಲ್ಲಾ ಕುಳಿತುಕೊಂಡು ಬೇರೆ ಯೋಚನೆ ಮಾಡ್ತೇವೆ ಎಂದು ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ.

ಕೊಪ್ಪಳದ ಪ್ರಸಿದ್ಧ ಹುಲಿಗೆಮ್ಮ ದೇವಿಯ ದರ್ಶನ ಭಾಗ್ಯ ಮತ್ತೆ 15 ದಿನ ಮುಂದೂಡಿಕೆ

ಒಬಿಸಿ ಪರಿಗಣಿಸಿ ಟಿಕೆಟ್‌ ನೀಡೋದಾದರೆ ನನಗೆ ಕೊಡಿ ಅಥವಾ ಮೇಜರ್ ಕಮ್ಯೂನಿಟಿಗೆ ಕೊಡೋದಾದ್ರೆ ಎಸ್‌ಆರ್‌ ಗೌಡ್ರಿಗೆ ಕೊಡಿ ಎಂದಿರುವ ಬಿಕೆ ಮಂಜುನಾಥ್, ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡ್ತೇವೆ. ಆದ್ರೆ ಹೊರಗಿನವರಿಗೆ ಟಿಕೆಟ್ ಕೊಡುವುದೇ ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದೀಗ ಟಿಕೆಟ್‌ ಘೋಷಣೆಗೂ ಮುನ್ನವೇ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕ್ಷೇತ್ರಕ್ಕೆ ಆಗಮಿಸುವ ಮೊದಲೇ ಭಿನ್ನಮತ ಬಹಿರಂಗವಾಗಿದ್ದು, ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ