ಆ್ಯಪ್ನಗರ

ವಂದೇ ಮಾತರಂ ಹಾಡಲು ರಾಹುಲ್‌ ಕೈಹಿಡಿದು ಎಬ್ಬಿಸಿದ ಕೆಸಿವಿ

ಬಿ. ಸಿ. ರೋಡ್‌ ಕಾಂಗ್ರೆಸ್‌ ಸಮಾವೇಶದ ವೇಳೆ ವಂದೇ ಮಾತರಂ ಗೀತೆ ಹಾಡುವಾಗ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಕೈಹಿಡಿದು ಎಬ್ಬಿಸಿದ ದೃಶ್ಯದ ವೀಡಿಯೊ ವೈರಲ್‌ ಆಗಿದೆ.

Vijaya Karnataka 28 Apr 2018, 7:20 am
ಬೆಂಗಳೂರು: ಬಿ. ಸಿ. ರೋಡ್‌ ಕಾಂಗ್ರೆಸ್‌ ಸಮಾವೇಶದ ವೇಳೆ ವಂದೇ ಮಾತರಂ ಗೀತೆ ಹಾಡುವಾಗ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಅವರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಕೈಹಿಡಿದು ಎಬ್ಬಿಸಿದ ದೃಶ್ಯದ ವೀಡಿಯೊ ವೈರಲ್‌ ಆಗಿದೆ.
Vijaya Karnataka Web Raga


ವಂದೇ ಮಾತರಂ ಗೀತೆ ಶುರುವಿಗೂ ಮುನ್ನ ರಾಹುಲ್‌ ತಮ್ಮ ಕೈ ಗಡಿಯಾರ ನೋಡಿಕೊಂಡು, ಸಮಯದ ಕೊರತೆಯಿದೆ ಎಂದು ಸಂಘಟಕರಿಗೆ ಸನ್ನೆ ಮಾಡುತ್ತಾರೆ. ಬಳಿಕ ಕೇವಲ ಒಂದೇ ಸಾಲಿನಲ್ಲಿ ಈ ಗೀತೆ ಹಾಡಿ ಮುಗಿಸುವಂತೆ ವೇಣುಗೋಪಾಲ್‌ ಸೂಚನೆಕೊಟ್ಟರು ಎನ್ನಲಾಗಿದೆ. ಗಾಯಕಿ ಗೀತೆಯನ್ನು ಹಾಡಲು ಶುರು ಮಾಡಿದರೂ ರಾಹುಲ್‌ ಕುಳಿತೇ ಇದ್ದರು. ಆಗ ರಾಹುಲ್‌ ಅವರು ಬಲಭುಜ ಹಿಡಿದ ವೇಣುಗೋಪಾಲ್‌ ಎಬ್ಬಿಸಿ ನಿಲ್ಲಿಸುವುದು ದೃಶ್ಯದಲ್ಲಿ ಸೆರೆಯಾಗಿದೆ. ವಂದೇ ಮಾತರಂ ಶುರುವಾಗುತ್ತಿದ್ದಂತೆ ಸಿದ್ದರಾಮಯ್ಯ ವೇದಿಕೆಯಲ್ಲಿ ನಡೆದು ಬರುತ್ತಿರುವುದು ಈ ವೀಡಿಯೊದಲ್ಲಿ ಕಾಣುತ್ತದೆ. ಈ ವೇಳೆ ಡಾ.ಜಿ. ಪರಮೇಶ್ವರ ಸೇರಿದಂತೆ ಪಕ್ಷದ ಪ್ರಮುಖರು ಈ ವೇದಿಕೆಯಲ್ಲಿದ್ದರು.

ಈ ಘಟನೆ ಬಗ್ಗೆ ಆಕ್ಷೇಪ ಎತ್ತಿರುವ ಬಿಜೆಪಿ, ಕಾಂಗ್ರೆಸ್‌ ಪಕ್ಷದಿಂದ ವಂದೇ ಮಾತರಂಗೆ ಅವಮಾನವಾಗಿದೆ ಎಂದು ಟೀಕಿಸಿದೆ. ಕೇಂದ್ರ ಸಚಿವರಾದ ಅನಂತಕುಮಾರ್‌, ಡಿ.ವಿ. ಸದಾನಂದಗೌಡ, ಅನಂತಕುಮಾರ ಹೆಗಡೆ, ಪಕ್ಷದ ಮುಖಂಡರಾದ ಶೋಭಾ ಕರಂದ್ಲಾಜೆ, ಸಿ.ಟಿ. ರವಿ, ಪ್ರತಾಪ್‌ ಸಿಂಹ ಸೇರಿದಂತೆ ಹಲವರು ಟ್ವೀಟ್‌/ ರೀಟ್ವೀಟ್‌ ಮಾಡಿದ್ದಾರೆ. ರಾಜ್ಯ ಬಿಜೆಪಿಯ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಿಂದಲೂ ಟ್ವೀಟ್‌ ಮಾಡಲಾಗಿದೆ. ಜತೆಗೆ #RagaInsultsVandeMataram ಎಂಬ ಹ್ಯಾಷ್‌ಟ್ಯಾಗ್‌ನಡಿ ಹಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕಾಂಗ್ರೆಸ್‌ನ ಈ ನಡವಳಿಕೆಗೆ ವ್ಯಾಪಕ ಖಂಡನೆಯೂ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ