ಆ್ಯಪ್ನಗರ

44 ಸಾವಿರ ಕೋಟಿ ಸಾಲ ಮನ್ನಾ: ಪ್ರಯೋಜನ ಸಿಕ್ಕಿದ್ದು 800 ರೈತರಿಗೆ ಮಾತ್ರ!

ಸಿಎಂ ಕುಮಾರಸ್ವಾಮಿ ಜುಲೈ 5 ರಂದು ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಆದರೆ, ಇದುವರೆಗೆ ಕೇವಲ 800 ರೈತರು ಮಾತ್ರ ಇದರ ಪ್ರಯೋಜನ ಪಡೆದಿದ್ದಾರೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ. ರಾಜ್ಯ ಸರಕಾರ 43 ಲಕ್ಷ ರೈತರಿಂದ ಅರ್ಜಿಗಾಗಿ ನಿರೀಕ್ಷೆ ಮಾಡುತ್ತಿತ್ತು. ರೈತರು ಹಾಗೂ ಬ್ಯಾಂಕ್‌ಗಳು ಸಲ್ಲಿಸಿರುವ ಎರಡು ಪ್ರತ್ಯೇಕ ಡೇಟಾಬೇಸ್‌ಗಳನ್ನು ಪರಿಶೀಲನೆ ಮಾಡಿ ನಂತರ ಅಂತಿಮ ಪಟ್ಟಿ ತಯಾರು ಮಾಡಬೇಕಿದ್ದರಿಂದ ವಿಳಂಬವಾಗಿದೆ ಎಂದು ಹೇಳಿದ್ದಾರೆ.

TIMESOFINDIA.COM 13 Dec 2018, 1:11 pm
ಬೆಳಗಾವಿ: ಸಿಎಂ ಕುಮಾರಸ್ವಾಮಿ 44 ಸಾವಿರ ಕೋಟಿ ರೂ. ಮೊತ್ತದ ಸಾಲ ಮನ್ನಾ ಯೋಜನೆ ಘೋಷಣೆ ಮಾಡಿ ಹಲವು ತಿಂಗಳುಗಳು ಕಳೆದಿದೆ. ಆದರೆ, ಇದುವರೆಗೆ ಸುಮಾರು 800 ರೈತರಿಗೆ ಮಾತ್ರ ಇದರ ಪ್ರಯೋಜನ ಸಿಕ್ಕಿದೆಯಂತೆ. ಹೀಗಂತ ಸ್ವತ: ರಾಜ್ಯ ಸರಕಾರ ಬೆಳಗಾವಿ ವಿಧಾನಸಭೆಯಲ್ಲಿ ಒಪ್ಪಿಕೊಂಡಿದೆ.
Vijaya Karnataka Web kumaraswamy..


ಸಿಎಂ ಕುಮಾರಸ್ವಾಮಿ ಜುಲೈ 5 ರಂದು ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಆದರೆ, ಇದುವರೆಗೆ ಕೇವಲ 800 ರೈತರು ಮಾತ್ರ ಇದರ ಪ್ರಯೋಜನ ಪಡೆದಿದ್ದಾರೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ.

ಅಲ್ಲದೆ, ಸಾಲ ಮನ್ನಾ ಮಾಡುವಲ್ಲಿ ವಿಳಂಬವನ್ನು ಸಮರ್ಥಿಸಿಕೊಂಡ ಕಾಶೆಂಪುರ್, ರಾಜ್ಯ ಸರಕಾರ 43 ಲಕ್ಷ ರೈತರಿಂದ ಅರ್ಜಿಗಾಗಿ ನಿರೀಕ್ಷೆ ಮಾಡುತ್ತಿತ್ತು. ಈ ಪೈಕಿ, ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಮಾಡಿರುವ 20 ಲಕ್ಷ ರೈತರು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ಇತರೆ ರೈತರು ಅರ್ಜಿ ಸಲ್ಲಿಸಲು ಕಾಯುತ್ತಿತ್ತು ಎಂದು ಸಚಿವ ಬಂಡೆಪ್ಪ ಕಾಶೆಂಪುರ್ ಬೆಳಗಾವಿ ಸುವರ್ಣ ಸೌಧದ ಅಧಿವೇಶನದಲ್ಲಿ ತಿಳಿಸಿದ್ದಾರೆ.

ಇನ್ನು, ವಾಣಿಜ್ಯ ಹಾಗೂ ಡಿಸಿಸಿ ಬ್ಯಾಂಕ್‌ಗಳಿಗೆ ಮಾಹಿತಿ ನೀಡಲು ಮನವಿ ಮಾಡಿದ್ದೇವೆ. ರೈತರು ಹಾಗೂ ಬ್ಯಾಂಕ್‌ಗಳು ಸಲ್ಲಿಸಿರುವ ಎರಡು ಪ್ರತ್ಯೇಕ ಡೇಟಾಬೇಸ್‌ಗಳನ್ನು ಪರಿಶೀಲನೆ ಮಾಡಿ ನಂತರ ಅಂತಿಮ ಪಟ್ಟಿ ತಯಾರು ಮಾಡಬೇಕಿದೆ. ಇದನ್ನು ಹಸಿರು ಪಟ್ಟಿ ಎಂದು ಕರೆಯಲಾಗಿದ್ದು, ಎರಡನೇ ಹಸಿರು ಪಟ್ಟಿ ತಯಾರಿಸುವಲ್ಲಿ ಆದ ವಿಳಂಬದಿಂದ ಯೋಜನೆ ಜಾರಿಗೆ ತರುವಲ್ಲಿ ವಿಳಂಬವಾಗಿದೆ. ಆದರೆ, ಹಲವರು ಆರೋಪಿಸಿದಂತೆ ರೈತರ ಸಾಲ ಮನ್ನಾ ಮಾಡಲು ಸರಕಾರದಲ್ಲಿ ಹಣದ ಕೊರತೆಯಿಂದ ಈ ರೀತಿ ಆಗಿಲ್ಲ ಎಂದು ಸಚಿವ ಬಂಡೆಪ್ಪ ಕಾಶೆಂಪುರ್ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ