ಆ್ಯಪ್ನಗರ

ಪೊಲೀಸರ ಸುರಕ್ಷತೆ ಸರ್ಕಾರದ ಮೊದಲ ಆದ್ಯತೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಪ್ರಾಣಾಪಾಯದ ನಡುವೆಯೂ ಕೊರೊನಾ ವಿರುದ್ಧ ಹೋರಾಡಿದ ಕೀರ್ತಿ ಪೊಲೀಸರಿಗೆ ಸಲ್ಲಲೇಬೇಕು. ಪೊಲೀಸರ ಜೀವನವನ್ನು ಉತ್ತಮಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

Vijaya Karnataka Web 22 Oct 2020, 6:53 pm
ಬೆಂಗಳೂರು: ಪ್ರಾಣಾಪಾಯದ ನಡುವೆಯೂ ಕೊರೊನಾ ವಿರುದ್ಧ ಹೋರಾಡಿದ ಕೀರ್ತಿ ಪೊಲೀಸರಿಗೆ ಸಲ್ಲಲೇಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
Vijaya Karnataka Web basavaraj bommai police


ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಸಂಸ್ಮರಣಾ ದಿನಾಚರಣೆ ಅಂಗವಾಗಿ ಗುರುವಾರ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಹಮ್ಮಿಕೊಳ್ಳಲಾಗಿದ್ದ "ಸ್ಮರಣಾಂಜಲಿ" ಪೊಲೀಸ್ ಅಮರವೀರರ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತಾನಾಡಿದರು. ಪೊಲೀಸ್ ಇಲಾಖೆಗೆ ಪ್ರೋತ್ಸಾಹ ಧನಕ್ಕಿಂತ ಮುಖ್ಯವಾಗಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಬೆಂಬಲದ ಅಗತ್ಯವಿದೆ ಎಂದು ಹೇಳಿದರು.

ಪೊಲೀಸರ ಕಾರ್ಯವ್ಯಾಪ್ತಿ ಹೆಚ್ಚುತ್ತಿದ್ದು, ಅವರಿಗೆ ಹೊಸ ತಂತ್ರಜ್ಞಾನದ ಕಲಿಕೆ ಅವಶ್ಯಕವಾಗಿದೆ. ಅದಕ್ಕಾಗಿ ವಿಶೇಷ ತರಬೇತಿಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಪೊಲೀಸರ ಸುರಕ್ಷತೆ, ಜೀವ ಮತ್ತು ಜೀವನ ಕಟ್ಟಿಕೊಡುವುದು ಸರ್ಕಾರದ ಜವಬ್ಧಾರಿಯಾಗಿದೆ. ಮುಖ್ಯವಾಗಿ ಅವರ ಆರೋಗ್ಯ ಕಾಪಾಡುವುದಕ್ಕಾಗಿ ಹೊಸ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.

'ಸುಕನ್ಯಾ ಸಮೃದ್ಧಿ'ಯಲ್ಲಿ 'ಭಾಗ್ಯಲಕ್ಷ್ಮಿ' ಯೋಜನೆ ವಿಲೀನಕ್ಕೆ ರಾಜ್ಯ ಸಂಪುಟ ಒಪ್ಪಿಗೆ

ಯಾವುದೇ ಪೊಲೀಸರಿಗೆ ತೊಂದರೆಯಾದರೆ, ಇಲಾಖೆಯು ಅವರನ್ನು ಬೆಂಬಲಿಸುವ ಮತ್ತು ಮಾನಸಿಕವಾಗಿ ದೈರ್ಯ ತುಂಬುವ ಕೆಲಸ ಮಾಡುತ್ತಿದೆ. ಇದು ಪೊಲೀಸ್ ಇಲಾಖೆಯ ಹೃದಯ ಶ್ರೀಮಂತಿಕೆಯನ್ನು ತೋರಿಸುತ್ತದೆ.

ಕೊರೊನಾ ನಿಯಂತ್ರಣದಲ್ಲಿ ಪೊಲೀಸ್ ಇಲಾಖೆ ಅತ್ಯಂತ ಮಹತ್ವದ ಜವಬ್ಧಾರಿ ನಿರ್ವಹಿಸಿದೆ. ಧಣಿವರಿಯದೆ ಹಗಲು ರಾತ್ರಿ ಶ್ರಮ ಜೀವಿಗಳಂತೆ ದುಡಿಯುತ್ತಾರೆ ಪೊಲೀಸರು. ಅನೇಕ ವೇಳೆ‌ ಪ್ರಯಾಣ ಮಾಡುವ ಸಂದರ್ಭಗಳಲ್ಲಿ ನಡುರಾತ್ರಿಯಲ್ಲಿ ಸಹ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರನ್ನು ಕಂಡಿದ್ದೇನೆ ಎಂದು ಶ್ಲಾಘೀಸಿದರು. ಅವರ ಜೀವನವನ್ನು ಉತ್ತಮಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಸೆಂಚುರಿ ಹೊಡೆದ ಈರುಳ್ಳಿ ಬೆಲೆ: ದೀಪಾವಳಿ ವೇಳೆಗೆ ₹150 ದಾಟಿದರೂ ಅಚ್ಚರಿಯಿಲ್ಲ!

ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರಾದ ಪ್ರವೀಣ್ ಸೂದ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಕೋವಿಡ್ -19 ಸಮಯದಲ್ಲಿ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ, ಪ್ರತಿ ಪೊಲೀಸರ ಕುಟುಂಬ ಒತ್ತಡ ಹಾಗೂ ಭಯದ ನಡುವೆ ಸಹ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿಯತನಕ 85 ಪೊಲೀಸರು ಕೋವಿಡ್ ಗೆ ಬಲಿಯಾಗಿದ್ದಾರೆ. ಇತರೆ ಕಾರಣಗಳಿಂದ 100 ಒಟ್ಟು 185 ಪೊಲೀಸರು ಪ್ರಾಣತ್ಯಾಗ ಮಾಡಿದ್ದಾರೆ. ಆದರೂ ಸಹ ಭಯ‌ ಪಡದೆ ಉಳಿದವರು ಕಾರ್ಯನಿರ್ವಹಿಸುತ್ತಿರುವುದು ಇಲಾಖೆಗೆ ಹೆಮ್ಮೆ ಮತ್ತು ಗೌರವ ತಂದಿದೆ. ಇಲ್ಲಿಯವರೆಗೆ 9000 ಪೊಲೀಸರು ಕೋವಿಡ್ ಸೋಂಕಿಗೆ ತುತ್ತಾಗಿ ವಾಸಿಯಾಗಿದ್ದಾರೆ. ಅವರ ಈ ದೈರ್ಯಕ್ಕೆ ಅವರಿಗೂ ಮತ್ತು ಅವರ ಸಂಸಾರಕ್ಕೂ ಧನ್ಯವಾದಗಳು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸರ್ಕಾರದ ಅಪರ‌ ಮುಖ್ಯ ಕಾರ್ಯದರ್ಶಿಗಳಾದ ರಜನೀಶ್ ಗೋಯಲ್, ಬೆಂಗಳೂರು ಪೊಲೀಸ್ ಆಯುಕ್ತರಾದ ಕಮಲ್‌ ಪಂತ ಅವರು ಸೇರಿದಂತೆ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಕಳೆದ ವರ್ಷ ವಿವಿಧ ಕಾರಣಗಳಿಂದ ಪ್ರಾಣತ್ಯಾಗ ಮಾಡಿದ ಪೊಲೀಸರಿಗೆ ಎರಡು ನಿಮಿಷದ ಮೌನಾಚರಣೆ ಹಾಗೂ ಸಂಗೀತ ನುಡಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಇದೆ‌ ಸಮಯದಲ್ಲಿ‌ ಪೊಲೀಸ್ ಇಲಾಖೆ ಹೊರತಂದಿರುವ ಸ್ಮರಣ ಸಂಚಿಕೆಯನ್ನು ಬಿಡುಗಡೆ‌ ಮಾಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ