ಆ್ಯಪ್ನಗರ

ವೈದ್ಯರಿಗೆ ವೇತನ ತಾರತಮ್ಯ, ಸರಕಾರಕ್ಕೆ ಹೈಕೋರ್ಟ್‌ನಿಂದ ನೋಟಿಸ್‌

ತಮಗೆ ಸರಕಾರ ಮಾಸಿಕ 55 ಸಾವಿರ ರೂ. ವೇತನ ನೀಡಿದರೆ, ನಮ್ಮ ರೀತಿಯಲ್ಲಿ ಒಂದು ವರ್ಷ ಕಡ್ಡಾಯ ಸೇವೆಗೆ ನಿಯೋಜನೆಗೊಂಡ ಮತ್ತೊಬ್ಬ ಸಹೋದ್ಯೋಗಿಗೆ 80 ಸಾವಿರ ರೂ. ನೀಡಲಾಗುತ್ತಿದೆ. ಈ ವೇತನ ತಾರತಮ್ಯವು ಕಡ್ಡಾಯ ಸೇವೆಗೆ ಮುಂದಾಗುವ ವೈದ್ಯರನ್ನು ನಿರುತ್ಸಾಹಗೊಳಿಸಲಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

Vijaya Karnataka 6 Nov 2020, 11:44 pm
ಬೆಂಗಳೂರು: ಸರಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಒಂದು ವರ್ಷ ಕಡ್ಡಾಯ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ವೇತನ ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿ ಸಲ್ಲಿಸಿರುವ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.
Vijaya Karnataka Web doctor
ಸಾಂದರ್ಭಿಕ ಚಿತ್ರ


ಡಾ.ಸುಹಾಸ್‌ ಮುರಳಿ ಸೇರಿ ಐದು ಮಂದಿ ವೈದ್ಯರು ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಆರ್‌. ದೇವದಾಸ್‌ ಅವರ ಏಕಸದಸ್ಯಪೀಠ ವಿಚಾರಣೆ ನಡೆಸಿತು. ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ನೋಟಿಸ್‌ ನೀಡಿ, ಎರಡು ವಾರದಲ್ಲಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿತು.

ಅರ್ಜಿದಾರರು 2019ರಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ ಪೂರೈಸಿ, ಸರಕಾರದ ನಿಯಮಗಳ ಅನುಸಾರ ಸರಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯ ಒಂದು ವರ್ಷ ಸೇವೆಗೆ ನಿಯೋಜನೆಗೊಂಡಿದ್ದರು.

ಹೈಕೋರ್ಟ್‌ಗೆ ಮೊರೆ ಹೋಗಿರುವ ಅರ್ಜಿದಾರರು, "ತಮಗೆ ಸರಕಾರ ಮಾಸಿಕ 55 ಸಾವಿರ ರೂ. ವೇತನ ನಿಗದಿಪಡಿಸಿದೆ. ನಮ್ಮ ರೀತಿಯಲ್ಲಿ ಒಂದು ವರ್ಷ ಕಡ್ಡಾಯ ಸೇವೆಗೆ ನಿಯೋಜನೆಗೊಂಡ ಮತ್ತೊಬ್ಬ ಸಹೋದ್ಯೋಗಿಗೆ ಮಾಸಿಕ 80 ಸಾವಿರ ರೂ. ವೇತನ ನೀಡುತ್ತಿದೆ. ವೇತನ ತಾರತಮ್ಯವು ಕಡ್ಡಾಯ ಸೇವೆಗೆ ಮುಂದಾಗುವ ವೈದ್ಯರಿಗೆ ನಿರುತ್ಸಾಹಗೊಳಿಸಲಿದೆ. ಹೀಗಾಗಿ ವೈದ್ಯರಿಗೆ ಸಮಾನ ವೇತನ ನೀಡಲು ಸರಕಾರಕ್ಕೆ ನಿರ್ದೇಶಿಸಬೇಕು," ಎಂದು ಕೋರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ