ಆ್ಯಪ್ನಗರ

ಸರ್ದಾರ್‌ ಪಟೇಲ್‌ ಪ್ರತಿಮೆ ಅನಾವರಣ ಅ.31 ರಂದು

''ಪ್ರಧಾನಿ ನರೇಂದ್ರ ಮೋದಿ ಅ.31ರಂದು ನರ್ಮದಾ ಜಿಲ್ಲೆಯ ಸರದಾರ್‌ ಸರೋವರ್‌ ಅಣೆಕಟ್ಟೆಯ ಬಳಿ ನಿರ್ಮಿಸಿರುವ 182 ಮೀಟರ್‌ ಎತ್ತರದ ವಿಶ್ವದ ಅತಿದೊಡ್ಡದೆನಿಸಿರುವ ಪಟೇಲ್‌ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

Vijaya Karnataka 17 Oct 2018, 9:31 am
ಬೆಂಗಳೂರು: ದೇಶದ ಪ್ರಥಮ ಗೃಹ ಸಚಿವ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಅವರ ಏಕತಾ ಪ್ರತಿಮೆ ಗುಜರಾತ್‌ನಲ್ಲಿ ಅನಾವರಣಗೊಳ್ಳಲಿದೆ.
Vijaya Karnataka Web pate


''ಪ್ರಧಾನಿ ನರೇಂದ್ರ ಮೋದಿ ಅ.31ರಂದು ನರ್ಮದಾ ಜಿಲ್ಲೆಯ ಸರದಾರ್‌ ಸರೋವರ್‌ ಅಣೆಕಟ್ಟೆಯ ಬಳಿ ನಿರ್ಮಿಸಿರುವ 182 ಮೀಟರ್‌ ಎತ್ತರದ ವಿಶ್ವದ ಅತಿದೊಡ್ಡದೆನಿಸಿರುವ ಪಟೇಲ್‌ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ,'' ಎಂದು ಗುಜರಾತ್‌ನ ಇಂಧನ ಸಚಿವ ಸೌರಭ್‌ಭಾಯಿ ಪಟೇಲ್‌ ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

''ಜನರು ನೀಡಿದ್ದ ಐದು ಸಾವಿರ ಮೆಟ್ರಿಕ್‌ ಟನ್‌ ಕಬ್ಬಿಣ ಬಳಸಿ , ಸುಮಾರು ಮೂರು ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಈ ಪ್ರತಿಮೆ ಭಾರತದ ಇತಿಹಾಸದಲ್ಲೇ ಒಂದು ಮೈಲುಗಲ್ಲು . ಪ್ರತಿಮೆ ಕೆಳಭಾಗದಲ್ಲಿ ಸರ್ದಾರ್‌ ಪಟೇಲ್‌ ಕುರಿತ ದೊಡ್ಡ ಮ್ಯೂಸಿಯಂ ಹಾಗೂ ಬೃಹತ್‌ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಪ್ರತಿ ದಿನ ಕನಿಷ್ಠ 15 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುವ ವಿಶ್ವಾಸವಿದೆ'' ಎಂದರು.

''ರಾಜ್ಯಪಾಲ ವಜೂಬಾಯಿವಾಲಾ, ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ಪ್ರತಿಮೆ ಬಳಿ ಎಲ್ಲಾ ರಾಜ್ಯಗಳಿಂದಲೂ ಭವನ ನಿರ್ಮಾಣ ಮಾಡಿಕೊಳ್ಳಲು ನಿವೇಶನ ಮೀಸಲಿಡಲಾಗಿದೆ. ಕರ್ನಾಟಕದಿಂದಲೂ ಭವನ ನಿರ್ಮಾಣ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ'' ಎಂದು ಅವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ