ಆ್ಯಪ್ನಗರ

ಶಶಿಕಲಾಗೆ ‘ಎ‘ ಕ್ಲಾಸ್‌ ಸೌಲಭ್ಯ ಸಿಕ್ಕಿದ್ದು ಕೋರ್ಟ್‌ ಸೂಚನೆಯಿಂದ

-ಜೈಲು ಅಕ್ರಮಗಳ ತನಿಖಾ ತಂಡಕ್ಕೆ ಕೋರ್ಟ್‌ ಆದೇಶದ ದಾಖಲೆ ಸಲ್ಲಿಕೆ- ಗಿರೀಶ್‌ ಕೋಟೆ ಬೆಂಗಳೂರು ತಮಿಳುನಾಡಿನ ಎಐಎಡಿಎಂಕೆ ನಾಯಕಿ ಶಶಿಕಲಾಗೆ ಕೇಂದ್ರ ಕಾರಾಗೃಹದಲ್ಲಿ 'ಎ' ...

ವಿಕ ಸುದ್ದಿಲೋಕ 27 Jul 2017, 8:35 am

-ಜೈಲು ಅಕ್ರಮಗಳ ತನಿಖಾ ತಂಡಕ್ಕೆ ಕೋರ್ಟ್‌ ಆದೇಶದ ದಾಖಲೆ ಸಲ್ಲಿಕೆ-

ಗಿರೀಶ್‌ ಕೋಟೆ

Vijaya Karnataka Web sasikala gets royal treatment in jail by court order
ಶಶಿಕಲಾಗೆ ‘ಎ‘ ಕ್ಲಾಸ್‌ ಸೌಲಭ್ಯ ಸಿಕ್ಕಿದ್ದು ಕೋರ್ಟ್‌ ಸೂಚನೆಯಿಂದ


ಬೆಂಗಳೂರು: ತಮಿಳುನಾಡಿನ ಎಐಎಡಿಎಂಕೆ ನಾಯಕಿ ಶಶಿಕಲಾಗೆ ಕೇಂದ್ರ ಕಾರಾಗೃಹದಲ್ಲಿ 'ಎ' ಕ್ಲಾಸ್‌ ಸವಲತ್ತು ನೀಡಲು ಬಂದಿಖಾನೆ ಇಲಾಖೆ ಡಿಜಿಪಿ ಸತ್ಯನಾರಾಯಣ ರಾವ್‌ 2 ಕೋಟಿ ಲಂಚ ಪಡೆದಿದ್ದರು ಎಂದು ಐಪಿಎಸ್‌ ಅಧಿಕಾರಿ ಡಿ. ರೂಪಾ ಆರೋಪಿಸಿದ್ದರು. ಆದರೆ 'ಎ' ಕ್ಲಾಸ್‌ ಸವಲತ್ತು ನೀಡಲು ಫೆಬ್ರವರಿಯಲ್ಲೇ ನ್ಯಾಯಾಲಯ ಒಪ್ಪಿಗೆ ಸೂಚಿಸಿತ್ತು ಎನ್ನುವ ಅಂಶ ಈಗ ಬೆಳಕಿಗೆ ಬಂದಿದೆ.

2017ರ ಫೆ.15ರಂದು 37ನೇ ಸಿಸಿಎಚ್‌ ನ್ಯಾಯಾಲಯ ಶಶಿಕಲಾರನ್ನು 'ಎ' ಕ್ಲಾಸ್‌ ಬಂದಿಯಾಗಿ ಪರಿಗಣಿಸಬಹುದು ಎಂದು ಒಪ್ಪಿಗೆ ಸೂಚಿಸಿತ್ತು. ನ್ಯಾಯಾಲಯದ ಆದೇಶ ಪತ್ರ 'ವಿಜಯ ಕರ್ನಾಟಕ'ಕ್ಕೆ ಲಭ್ಯವಾಗಿದೆ.

ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದ ಪ್ರಕರಣದಲ್ಲಿ ಆರೋಪಿಯಾಗಿರುವ ಶಶಿಕಲಾ, ಇಳವರಸಿ ಹಾಗೂ ಸುಧಾಕರನ್‌ ಆರೋಗ್ಯ ಇತ್ಯಾದಿ ಕಾರಣ ನೀಡಿ ತಮಗೆ 'ಎ' ಕ್ಲಾಸ್‌ ಸವಲತ್ತಿಗೆ ವಿನಂತಿಸಿದ್ದರು. ಜೈಲು ಅಧಿಕಾರಿಗಳು ನಿರಾಕರಿಸಿದಾಗ, ಶಶಿಕಲಾ ಪರ ವಕೀಲರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ 37ನೇ ಸಿಸಿಎಚ್‌ ನ್ಯಾಯಾಲಯ ಶಶಿಕಲಾ ಮತ್ತು ಇಳವರಸಿ ಹಾಗೂ ಸುಧಾಕರನ್‌ಗೆ 'ಎ' ಕ್ಲಾಸ್‌ ಬಂದಿಗಳಾಗಿ ಪರಿಗಣಿಸಿ ಅದಕ್ಕೆ ತಕ್ಕ ಸವಲತ್ತು ಕೊಡಲು ಸೂಚಿಸಿತ್ತು. ಆ ನಂತರ ಜೈಲು ನಿಯಮ ಪ್ರಕಾರ ಶಶಿಕಲಾಗೆ 'ಎ' ಕ್ಲಾಸ್‌ ಸೌಲಭ್ಯ ನೀಡಲಾಗಿತ್ತು ಎನ್ನುತ್ತಾರೆ ಬಂದಿಖಾನೆ ಇಲಾಖೆಯ ಹಿರಿಯ ಅಧಿಕಾರಿಗಳು.

ಅನಿತಾರನ್ನು ನೇಮಿಸಿದ್ದು ಯಾರು?

ಶಶಿಕಲಾ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕಾದ ಕಾರಣ ಕೇಂದ್ರ ಕಚೇರಿಯಿಂದಲೇ ಆದೇಶ ಬಂದು ಅನಿತಾ ಎಂಬುವರನ್ನು ಶಶಿಕಲಾ ಇರುವ ಕೊಠಡಿಯ ಕರ್ತವ್ಯಕ್ಕೆ ನೇಮಿಸಲಾಗಿತ್ತು. ಇತರೆ ಕೈದಿಗಳು ಶಶಿಕಲಾರನ್ನು ಸುಲಭವಾಗಿ ಭೇಟಿಯಾಗಲು ಅವಕಾಶ ಇದ್ದರೆ ಹಲ್ಲೆ ನಡೆಯಬಹುದು ಎಂಬ ಮುನ್ನೆಚ್ಚರಿಕೆಯಿಂದ ಅನಿತಾ ಅವರನ್ನೇ ಶಶಿಕಲಾ ಕೊಠಡಿಗೆ ಕರ್ತವ್ಯಕ್ಕೆ ನೇಮಿಸಿ ಎಂಬ ಸ್ಪಷ್ಟ ಸೂಚನೆ ಕೇಂದ್ರ ಕಚೇರಿಯಿಂದ ಬಂದಿತ್ತು ಎನ್ನುವ ದಾಖಲೆಯೂ ತನಿಖಾ ತಂಡಕ್ಕೆ ಸಲ್ಲಿಸಲಾಗಿದೆ ಎಂದು ಗೊತ್ತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ