ಆ್ಯಪ್ನಗರ

ಕರ್ನಾಟಕಕ್ಕೆ ಪ್ರತ್ಯೇಕ ನಾಡ ಧ್ಚಜ: ಮೊದಲ ಸಭೆಯಲ್ಲಿ ಮೂಡದ ಒಮ್ಮತ.

ಸಭೆ ಬಳಿಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಹೇಳಿಕೆ.

Vijaya Karnataka Web 9 Nov 2017, 8:22 pm
ಬೆಂಗಳೂರು: ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಇರಬೇಕೆಂಬ ರೂಪಿಸುವ ಕುರಿತು ರಚಿಸಲಾದ ಸಮಿತಿ ಇದೇ ಮೊದಲ ಬಾರಿಗೆ ಸಭೆ ಸೇರಿದ್ದು, ಯಾವುದೇ ಒಮ್ಮತ ಮೂಡುವಲ್ಲಿ ವಿಫಲವಾಗಿದೆ.
Vijaya Karnataka Web separate flag for karnataka comiittee first meeting
ಕರ್ನಾಟಕಕ್ಕೆ ಪ್ರತ್ಯೇಕ ನಾಡ ಧ್ಚಜ: ಮೊದಲ ಸಭೆಯಲ್ಲಿ ಮೂಡದ ಒಮ್ಮತ.


ಬೆಂಗಳೂರಿನ ವಿಕಾಸ ಸೌಧದಲ್ಲಿ ಗುರುವಾರ ಸಭೆಯ ನಡೆಯಿತು.

ಸಭೆ ನಂತರ ಸುದ್ದಿಗಾರಿಗೆ ಮಾಹಿತಿ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಸ್‌.ಜಿ. ಸಿದ್ದರಾಮಯ್ಯ, ಗುರುವಾರ ನಡೆದ ಸಭೆ ಅಪೂರ್ಣವಾಗಿದೆ..

ಇದು ಮೊದಲನೇ ಸಭೆಯಾದ ಹಿನ್ನಲೆ ಸಾಧಕ ಬಾಧಕಗಳ ಬಗ್ಗೆ ಮಾತ್ರ ಚರ್ಚೆಯಾಗಿದೆ. ಅಧಿವೇಶನ ಇರೋದ್ರಿಂದ ತರಾತುರಿಯಲ್ಲಿ ತೀರ್ಮಾನ ತೆಗದುಕೊಳ್ಳಲು ಸಾಧ್ಯ ಇಲ್ಲ. ಅಧಿವೇಶನದ ಬಳಿಕ ಮತ್ತೆ ಸಭೆ ಸೇರುತ್ತೇವೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ತೀವಿ. ಎಂದರು.

ನಾಡಧ್ವಜ ವಿನ್ಯಾಸಕ್ಕಾಗಿ ರಚನೆಯಾದ ತಜ್ಞರ ಸಮಿತಿಯ ಸಭೆ ಗುರುವಾರ ನಡೆಯಿತು. ಸಮಿತಿ ರಚನೆಯಾಗಿ 5 ತಿಂಗಳ ಬಳಿಕ ನಡೆಯುತ್ತಿರುವ ಸಭೆ ಇದಾಗಿದೆ. ಜೂನ್ 6 ರಂದು ಸಮಿತಿ ರಚನೆಯಾಗಿತ್ತು. ಧ್ವಜ ವಿನ್ಯಾಸ ಮತ್ತು ಕಾನೂನು ಪರಿಮಿತಿಯ ಕುರಿತು ತಜ್ಞರ ಸಮಿತಿ ವರದಿ ನೀಡಬೇಕಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದ ಸಮಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಚಕ್ರವರ್ತಿ ಮೋಹನ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಎಸ್.ಜಿ ಸಿದ್ದರಾಮಯ್ಯ ಸೇರಿದಂತೆ ಸಮತಿ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

ನಾಡಧ್ವಜ ಆಗಬೇಕು ಅಂತ ಸಭೆಯಲ್ಲಿ ಹಕ್ಕು ಪ್ರತಿಪಾದನೆಯಾಗಿದೆ. ಸಭೆಯಲ್ಲಿ ಅಭಿಪ್ರಾಯ ಸಂಗ್ರಹಣೆಯ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲು ತೀರ್ಮಾನಿಸಲಾಗಿದೆ.

Separate Flag For Karnataka: Comiittee First Meeting

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ