ಆ್ಯಪ್ನಗರ

ಪೇಜಾವರ ಶ್ರೀಗಳೊಂದಿಗೆ ಚರ್ಚೆಗೆ ರೆಡಿ: ಜಾಮದಾರ್‌

ಲಿಂಗಾಯತ ಹಿಂದು ಧರ್ಮದ ಭಾಗವೋ ಅಥವಾ ಅಲ್ಲವೋ ಎಂಬ ಕುರಿತು ಪೇಜಾವರ ಶ್ರೀಗಳೊಂದಿಗೆ ಬಹಿರಂಗ ಚರ್ಚೆಗೆ ಲಿಂಗಾಯತ ಧರ್ಮ ವೇದಿಕೆ ಸಮ್ಮತಿಸಿದೆ.

Vijaya Karnataka 23 Oct 2017, 10:45 pm

ಬೆಂಗಳೂರು: ಲಿಂಗಾಯತ ಹಿಂದು ಧರ್ಮದ ಭಾಗವೋ ಅಥವಾ ಅಲ್ಲವೋ ಎಂಬ ಕುರಿತು ಪೇಜಾವರ ಶ್ರೀಗಳೊಂದಿಗೆ ಬಹಿರಂಗ ಚರ್ಚೆಗೆ ಲಿಂಗಾಯತ ಧರ್ಮ ವೇದಿಕೆ ಸಮ್ಮತಿಸಿದೆ.

''ಈ ಸಂಬಂಧ ಶ್ರೀಗಳು ಸೂಚಿಸಿರುವಂತೆ ಜನವರಿ ತಿಂಗಳ ಕೊನೇ ವಾರದಲ್ಲಿ ಬೆಂಗಳೂರಿನಲ್ಲಿ ಚರ್ಚೆಗೆ ಸಂತೋಷದಿಂದ ಒಪ್ಪಿದ್ದೇವೆ'' ಎಂದು ವೇದಿಕೆ ಕಾರ್ಯದರ್ಶಿ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ.ಜಾಮದಾರ್‌ ಪ್ರಕಟಿಸಿದ್ದಾರೆ.

''ಪೇಜಾವರ ಶ್ರೀಗಳು ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಚರ್ಚಿಸಲು ಒಪ್ಪಿದ್ದಕ್ಕೆ ಧನ್ಯವಾದಗಳು. ಶ್ರೀಗಳೇ ಸೂಚಿಸಿದಂತೆ ಬೆಂಗಳೂರಿನಲ್ಲಿ ಸೂಕ್ತ ಸ್ಥಳದಲ್ಲಿ ಚರ್ಚೆಗೆ ನಾವು ಸಂತೋಷದಿಂದ ಒಪ್ಪಿದ್ದೇವೆ. ಚರ್ಚೆ ವೇಳೆ ಶ್ರೀಗಳು ಕೇಳುವ ಎಲ್ಲ ಪ್ರಶ್ನೆಗಳಿಗೆ ನಮ್ಮ ತಂಡವು ಸೂಕ್ತ ಉತ್ತರ ನೀಡಲು ಸಿದ್ಧವಿದೆ'' ಎಂದು ಜಾಮದಾರ್‌ ಹೇಳಿದ್ದಾರೆ.

ಲಿಂಗಾಯತ ಹಿಂದೂ ಧರ್ಮದ ಭಾಗ. ಈ ವಿಚಾರದಲ್ಲಿ ಚರ್ಚೆಗೆ ಸಿದ್ಧ ಎಂದು ಪೇಜಾವರ ಶ್ರೀಗಳು ಹೇಳಿದ್ದರು. ಆದರೆ, ಲಿಂಗಾಯತ ಹಿಂದೂ ಧರ್ಮದ ಭಾಗವಲ್ಲ. ಈ ವಿಚಾರದಲ್ಲಿ ಶ್ರೀಗಳೊಂದಿಗೆ ಚರ್ಚೆಗೆ ಸಿದ್ಧವಿರುವುದಾಗಿ ಲಿಂಗಾಯತ ಧರ್ಮ ವೇದಿಕೆ ಪ್ರತಿಕ್ರಿಯಿಸಿತ್ತು. ಪ್ರತಿಯಾಗಿ, ಚರ್ಚೆಗೆ ತಾವೂ ಸಿದ್ಧವಿರುವುದಾಗಿ ಶ್ರೀಗಳು ಪ್ರತಿಕ್ರಿಯಿಸಿದ್ದರು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ವೇದಿಕೆಯೂ ಶ್ರೀಗಳೊಂದಿಗೆ ಚರ್ಚೆಗೆ ಒಪ್ಪಿ ಪ್ರಕಟಣೆ ನೀಡಿದೆ.

Vijaya Karnataka Web separate lingayat religion
ಪೇಜಾವರ ಶ್ರೀಗಳೊಂದಿಗೆ ಚರ್ಚೆಗೆ ರೆಡಿ: ಜಾಮದಾರ್‌


Separate Lingayat religion

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ