ಆ್ಯಪ್ನಗರ

ಷಡಕ್ಷರಿಸ್ವಾಮಿ ಕೆಪಿಎಸ್ಸಿ ಅಧ್ಯಕ್ಷ

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಷಡಕ್ಷರಿಸ್ವಾಮಿ ಅವರನ್ನು ನೇಮಕ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದೆ.

Vijaya Karnataka 18 Aug 2019, 7:37 am
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಷಡಕ್ಷರಿಸ್ವಾಮಿ ಅವರನ್ನು ನೇಮಕ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದೆ.
Vijaya Karnataka Web KPSC


ಷಡಾಕ್ಷರಿ ಸ್ವಾಮಿ ಆಯೋಗದ ಹಾಲಿ ಸದಸ್ಯರಾಗಿದ್ದರು. ಕಳೆದ 8 ತಿಂಗಳಿಂದ ಆಯೋಗದ ಅಧ್ಯಕ್ಷರಿಲ್ಲದೆ ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತಿರುವ ಬಗ್ಗೆ 'ವಿಜಯ ಕರ್ನಾಟಕ' ವಿಶೇಷ ವರದಿ ಮೂಲಕ ಸರಕಾರದ ಗಮನ ಸೆಳೆದಿತ್ತು.

ಹಿಂದಿನ ಮೈತ್ರಿ ಸರಕಾರದಲ್ಲಿ ಷಡಕ್ಷರಿ ಸ್ವಾಮಿ ಅವರನ್ನು ನೂತನ ಅಧ್ಯಕ್ಷರಾಗಿ ನೇಮಕ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಅನೇಕರು ಪ್ರಯತ್ನ ನಡೆಸಿದ್ದರು. ಮತ್ತೊಂದೆಡೆ, ಡಿ.ಕೆ.ಶಿವಕುಮಾರ್‌ ಅವರು ರಘುನಂದನ್‌ ರಾಮಣ್ಣ ಅವರ ಪರ ಒತ್ತಡ ತಂದರೆ, ದೇವೇಗೌಡರ ಕುಟುಂಬದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ ಅವರ ನೇಮಕಕ್ಕೆ ಒಲವು ವ್ಯಕ್ತವಾಗಿತ್ತು. ಮೈತ್ರಿಯಲ್ಲಿನ ಈ ಗೊಂದಲದಿಂದಾಗಿ ಆಯೋಗದ ಅಧ್ಯಕ್ಷರ ನೇಮಕ ನನೆಗುದಿಗೆ ಬಿದ್ದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ