ಆ್ಯಪ್ನಗರ

ದೇಶ ಒಡೆವ ಕೆಲಸಕ್ಕೆ ವಿರಾಮ ನೀಡಿ, ನೆರೆ ಸಂತ್ರಸ್ತರತ್ತ ಗಮನ ಕೊಡಿ: ಅಮಿತ್‌ ಶಾಗೆ ಸಿದ್ದರಾಮಯ್ಯ ಟ್ಟೀಟ್‌ ಚಾಟಿ

ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ಟಿಟರ್‌ನಲ್ಲಿ ಹರಿಹಾಯ್ದಿದ್ದಾರೆ. ಆನ್ಸರ್‌ ಮಾಡಿ ಶಾ (#AnswerMadiShah) ಹ್ಯಾಶ್‌ ಟ್ಯಾಗ್‌ ಮೂಲಕ ಸರಣಿ ಟ್ಟೀಟ್‌ ಮಾಡಿರುವ ಅವರು ನೆರೆ ಪರಿಹಾರ, ಕಳಸಾ ಬಂಡೂರಿ ಯೋಜನೆ ಬಗ್ಗೆ ಧ್ವನಿ ಎತ್ತಿದ್ದಾರೆ.

Vijaya Karnataka Web 18 Jan 2020, 1:46 pm
ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ಟಿಟರ್‌ನಲ್ಲಿ ಹರಿಹಾಯ್ದಿದ್ದಾರೆ. ಆನ್ಸರ್‌ ಮಾಡಿ ಶಾ (#AnswerMadiShah) ಹ್ಯಾಶ್‌ ಟ್ಯಾಗ್‌ ಮೂಲಕ ಸರಣಿ ಟ್ಟೀಟ್‌ ಮಾಡಿರುವ ಅವರು ನೆರೆ ಪರಿಹಾರ, ಕಳಸಾ ಬಂಡೂರಿ ಯೋಜನೆ ಬಗ್ಗೆ ಧ್ವನಿ ಎತ್ತಿದ್ದಾರೆ.
Vijaya Karnataka Web siddaramaiah asks amit shah to pay attention to flood victims
ದೇಶ ಒಡೆವ ಕೆಲಸಕ್ಕೆ ವಿರಾಮ ನೀಡಿ, ನೆರೆ ಸಂತ್ರಸ್ತರತ್ತ ಗಮನ ಕೊಡಿ: ಅಮಿತ್‌ ಶಾಗೆ ಸಿದ್ದರಾಮಯ್ಯ ಟ್ಟೀಟ್‌ ಚಾಟಿ

​‘ನೆರೆಯಿಂದ ಬೀದಿಗೆ ಬಿದ್ದವರ ಕಡೆ ಗಮನ ಕೊಡಿ’

“ಗೃಹ ಸಚಿವ ಅಮಿತ್‌ ಶಾ ಅವರೇ, ಸಿಎಎ, ಎನ್‌ಆರ್‌ಸಿ ಮೂಲಕ ದೇಶ ಒಡೆಯುವ ಕೆಲಸಕ್ಕೆ ಸ್ವಲ್ಪ ವಿರಾಮ ನೀಡಿ. ನೆರೆ ಹಾವಳಿಯಿಂದ ಬದುಕು ಕಳೆದುಕೊಂಡು ಬೀದಿಗೆ ಬಿದ್ದಿರುವ ಸಂತ್ರಸ್ತರ ಕಡೆ‌ ಗಮನ‌ ಕೊಡಿ. ನೀವು ಯಾಕೆ ಪ್ರವಾಹ ಪೀಡಿತ ಪ್ರದೇಶಕ್ಕೆ ಮತ್ತೊಮ್ಮೆ ಭೇಟಿ ನೀಡಿ ಕೇಂದ್ರ ಸರಕಾರ ನೀಡಿದ ಪರಿಹಾರ ಸಾಲುತ್ತದೆಯೇ ಎಂದು ಪರಿಶೀಲನೆ ಮಾಡಬಾರದು?," ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

​‘ಮೊದಲು ಬಾಕಿ ನೆರೆ‌ ಪರಿಹಾರ, ನಂತರ ಸಿಎಎ, ಎನ್‌ಆರ್‌ಸಿ’

“ನೆರೆ ಹಾವಳಿ ನಷ್ಟಕ್ಕೆ ಪರಿಹಾರ ಕೇಳಿರುವುದು ರೂಪಾಯಿ 35 ಸಾವಿರ ಕೋಟಿ. ಆದರೆ ಕೇಂದ್ರ ಸರಕಾರ ನೀಡಿರುವುದು 1800 ಕೋಟಿ ರೂಪಾಯಿ. ಮೊದಲು ಬಾಕಿ ನೆರೆ‌ ಪರಿಹಾರ ಪಾವತಿ, ನಂತರ ಸಿಎಎ, ಎನ್‌ಆರ್‌ಸಿ,” ಎಂಬುದಾಗಿ ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಾರೆ.

Twitter-ಗೃಹ ಸಚಿವ @AmithShah, ನೆರೆ ಹಾವಳಿ ನಷ್ಟಕ್ಕೆ ಪರಿಹಾರ ...

​ಒಂದೇ ನಾಲಗೆಯಲ್ಲಿ ಸ್ಪಷ್ಟೀಕರಣ ಕೊಟ್ಟು ಬಿಡಿ - ಸಿದ್ದರಾಮಯ್ಯ ಆಗ್ರಹ

“ಗೃಹ ಸಚಿವ ಅಮಿತ್‌ ಶಾ ಅವರೇ, ಕಳಸಾ-ಬಂಡೂರಿ ಯೋಜನೆ‌ ಬಗ್ಗೆ ನಿಮ್ಮ ಪಕ್ಷ ಎರಡು ನಾಲಿಗೆಯಲ್ಲಿ ಯಾಕೆ ಮಾತನಾಡುತ್ತಿದೆ? ಚುನಾವಣೆಯ ಮೊದಲು ನಮ್ಮ ಪರ, ಈಗ ಗೋವಾ ಪರ.

ಹುಬ್ಬಳ್ಳಿ ಸಭೆಯಲ್ಲಿ ಒಂದೇ ನಾಲಗೆಯಲ್ಲಿ ಸ್ಪಷ್ಟೀಕರಣ ಕೊಟ್ಟು ಬಿಡಿ,” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮಂಗಳೂರು ಎನ್‌ಕೌಂಟರ್‌ ಬಗ್ಗೆ ಸಿದ್ದರಾಮಯ್ಯ ಪ್ರಶ್ನೆ

" ಜನರು ಹೇಳುವ ಪ್ರಕಾರ ನಕಲಿ ಎನ್‌ಕೌಂಟರ್‌ಗೆ ಮಂಗಳೂರಿನಲ್ಲಿ ಇಬ್ಬರು ಅಮಾಯಕರು ಸಾವನ್ನಪ್ಪಿದ್ದಾರೆ. ನೀವು ಈ ದೇಶದ ಗೃಹ ಸಚಿವರು. ಘಟನೆ ಬಗ್ಗೆ ಜನರು ಅನುಮಾನ ವ್ಯಕ್ತಪಪಡಿಸುತ್ತಿರುವಾಗ ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ನಿಮಗೆ ಅನಿಸುತ್ತಿಲ್ಲವೇ?" ಎಂಬುದಾಗಿ ಸಿದ್ದರಾಮಯ್ಯ ಪ್ರಶ್ನೆ ಎತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ