ಆ್ಯಪ್ನಗರ

ಟಿಪ್ಪು ಅಭಿಮಾನದಲ್ಲಿ ಸಿದ್ಧರಾಮಯ್ಯ ಕುರುಡಾಗಿದ್ದಾರೆ: ಆರ್‌. ಅಶೋಕ್‌

“ಟಿಪ್ಪು ಒಬ್ಬ ಮತಾಂಧ. ದೇಶದ್ರೋಹಿ. ಕತ್ತಿಯ‌ ಮೇಲೆ ಹಿಂದುಗಳನ್ನು ಕೊಲ್ಲಿ ಎಂದು ಪರ್ಷಿಯನ್ ಭಾಷೆಯಲ್ಲಿ ಬರೆಸಿಕೊಂಡಿದ್ದಾತ," ಎಂಬುದಾಗಿ ಸಚಿವ ಆರ್‌. ಅಶೋಕ್‌ ಹರಿಹಾಯ್ದಿದ್ದಾರೆ.

Vijaya Karnataka Web 31 Oct 2019, 12:26 pm

ಬೆಂಗಳೂರು: ಟಿಪ್ಪು ಸುಲ್ತಾನ್‌ ಮೇಲಿನ ಅಭಿಮಾನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಡಾಗಿದ್ದಾರೆ ಎಂದು ಸಚಿವ ಆರ್‌. ಅಶೋಕ್‌ ಆರೋಪಿಸಿದ್ದಾರೆ.
Vijaya Karnataka Web RAshoka


ನಗರದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಟಿಪ್ಪು ಒಬ್ಬ ಮತಾಂಧ. ದೇಶದ್ರೋಹಿ. ಕತ್ತಿಯ‌ ಮೇಲೆ ಹಿಂದುಗಳನ್ನು ಕೊಲ್ಲಿ ಎಂದು ಪರ್ಷಿಯನ್ ಭಾಷೆಯಲ್ಲಿ ಬರೆಸಿಕೊಂಡಿದ್ದಾತ. ಇತಿಹಾಸದ ಸತ್ಯವನ್ನು ಮಕ್ಕಳಿಗೆ ತಿರುಚಿ ಹೇಳುವ ಕೆಲಸವನ್ನು ಹಿಂದಿ‌ನ ಕಾಂಗ್ರೆಸ್ ಸರ್ಕಾರ ಮಾಡಿತ್ತು. ಈಗ ಸತ್ಯ ಹೇಳಲು ಬಿಜೆಪಿ ಹೊರಟಿರುವಾಗ ಅದನ್ನು ತಡೆಯುವ ಪ್ರಯತ್ನ ಮಾಡಲಾಗುತ್ತಿದೆ,” ಎಂಬುದಾಗಿ ಕಿಡಿಕಾರಿದರು.

“ಶಾಲಾ ಪುಸ್ತಕದಲ್ಲಿ ಆತನ ಪಠ್ಯವನ್ನು ಇರಲು ಅವಕಾಶ ಕೊಡುವುದಿಲ್ಲ. ಇದಕ್ಕಾಗಿ ಪಠ್ಯ ಸಮಿತಿಯನ್ನು ಸುರೇಶ್ ಕುಮಾರ್ ನೇತೃತ್ವದಲ್ಲಿ ರಚಿಸಲಾಗಿದೆ. ಸಮಿತಿ ಸತ್ಯ ಸಂಗತಿ ಹಾಗೂ ಸಾಕ್ಷ್ಯಾಧಾರಗಳ ಅನ್ವಯ ನಿರ್ಧಾರ ತೆಗೆದುಕೊಳ್ಳಲಿದೆ,” ಎಂಬುದಾಗಿ ಅವರು ವಿವರಿಸಿದರು.

ನ.4ಕ್ಕೆ ಟಿಪ್ಪು ಜಯಂತಿ ರದ್ದು ಪ್ರಶ್ನಿಸಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ

ಇದೇ ಸಂದರ್ಭದಲ್ಲಿ ಚಿಕ್ಕಾಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜ್ ಹಸ್ತಾಂತರ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು, “ಮೊದಲು ಜಿಲ್ಲಾ ಕೇಂದ್ರಗಳಿಗೆ ಮೆಡಿಕಲ್ ಕಾಲೇಜು ಸಿಗಬೇಕು. ನಂತರ ಕನಕಪುರದಂಥ ತಾಲೂಕು ಕೇಂದ್ರಗಳಲ್ಲಿ ಕಾಲೇಜ್ ಸಿಗುವಂತಾಗಬೇಕು. ಆಮೇಲೆ‌ ಹೋಬಳಿಯಲ್ಲೂ ಮಾಡುತ್ತೇವೆ. ಈ ಉದ್ದೇಶವನ್ನು ಸರಕಾರ ಈಡೇರಿಸಿದೆ ಅಷ್ಟೆ. ಡಿಕೆ ಶಿವಕುಮಾರ್‌ ಅವರ ಕ್ಷೇತ್ರದಿಂದ ಕಾಲೇಜನ್ನು ಸ್ಥಳಾಂತರಿಸುವ ಉದ್ದೇಶದ ಹಿಂದೆ ಯಾವುದೇ ರಾಜಕೀಯ ದ್ವೇಷ‌ ಇಲ್ಲ ಎಂಬುದಾಗಿ ಅಶೋಕ್‌ ಸ್ಪಷ್ಟಪಡಿಸಿದರು.

ಇದೇ ವೇಳೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, “ಶ್ರೀರಂಗಪಟ್ಟಣದಲ್ಲಿ ಹಿಂದೂಗಳ ದೇವಸ್ಥಾನ ದ್ವಂಸ ಮಾಡಿದ ಟಿಪ್ಪು ಮತಾಂಧ. ಆತನ ಜಯಂತಿ ಆಚರಣೆ ಸರಿಯಲ್ಲ. ಆತನನ್ನು ಪಠ್ಯದಲ್ಲಿ ಹೀರೋ ರೀತಿ ಬಿಂಬಿಸಲಾಗಿದೆ. ಆದರೆ ಸತ್ಯ ಅದಲ್ಲ. ವಾಸ್ತವ ಏನು ಅನ್ನುವುದನ್ನು ತಿಳಿಸುವ ವಿಚಾರದಲ್ಲಿ ರಾಜಕೀಯ ಮಾಡಬಾರದು," ಎಂದು ಸಮಜಾಯಿಷಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ