ಆ್ಯಪ್ನಗರ

ಸಿದ್ದರಾಮಯ್ಯ ಸರಕಾರವನ್ನು ಕಾಡಿದ್ದ ಅಧಿಕಾರಿಗಳ ರಾಜೀನಾಮೆ, ಆತ್ಮಹತ್ಯೆ!

ಜನಾನುರಾಗಿ ಐಎಎಸ್‌ ಅಧಿಕಾರಿ ಡಿ ಕೆ ರವಿ ಆತ್ಮಹತ್ಯೆ ಮಾಡಿಕೊಂಡಾಗಲೂ ರಾಜಕೀಯ ತಿರುವು ಪಡೆದುಕೊಂಡಿತ್ತು ಆಗಿನ ಸಿದ್ದರಾಮಯ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು...

Vijaya Karnataka 7 Sep 2019, 7:25 am
ಬೆಂಗಳೂರು: ಜನಾನುರಾಗಿ ಐಎಎಸ್‌ ಅಧಿಕಾರಿ ಡಿ ಕೆ ರವಿ ಆತ್ಮಹತ್ಯೆ ಮಾಡಿಕೊಂಡಾಗಲೂ ರಾಜಕೀಯ ತಿರುವು ಪಡೆದುಕೊಂಡಿತ್ತು. ಆಗಿನ ಸಿದ್ದರಾಮಯ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
Vijaya Karnataka Web Siddaramaiah


ಬಳಿಕ, ಮಂಗಳೂರು ಡಿವೈಎಸ್‌ಪಿ ಆಗಿದ್ದ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳು ಹಾಗೂ ಗೃಹ ಸಚಿವ ಕೆ.ಜೆ.ಜಾರ್ಜ್‌ ಅವರ ಹೆಸರು ಪ್ರಸ್ತಾಪಿಸಿದ್ದರು.

2016ರ ಜುಲೈ 7ರಂದು ಕೊಡಗಿನ ಲಾಡ್ಜ್‌ನಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಗಣಪತಿ ಅವರು ಆತ್ಮಹತ್ಯೆಗೂ ಮೊದಲು ತಮಗೆ ಇಬ್ಬರು ಹಿರಿಯ ಐಪಿಎಸ್‌ ಅಧಿಕಾರಿಗಳಾದ ಪ್ರಣವ್‌ ಮೊಹಂತಿ, ಎ.ಎಂ.ಪ್ರಸಾದ್‌ ಕಿರುಕುಳ ನೀಡಿದ್ದರು. ಈ ಇಬ್ಬರು ಅಧಿಕಾರಿಗಳಿಗೆ ಸಚಿವ ಕೆ.ಜೆ.ಜಾರ್ಜ್‌ ಕುಮ್ಮಕ್ಕು ಇತ್ತು ಎಂದು ಸ್ಥಳೀಯ ಖಾಸಗಿ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನಲ್ಲಿ ಹೇಳಿದ್ದರು. ಪದೇಪದೆ ವರ್ಗಾವಣೆ ಮಾಡಿ ಮೇಲಧಿಕಾರಿಗಳು ಕಿರುಕುಳ ನೀಡಿದರು. ರಜೆ ನೀಡಲು ಸತಾಯಿಸುತ್ತಿದ್ದರು. ನನ್ನ ಸಾವಿಗೆ ಈ ಮೂವರು ಕಾರಣ ಎಂದೂ ಗಣಪತಿ ಆರೋಪಿಸಿದ್ದರು.

ಈ ಪ್ರಕರಣವನ್ನು ಆಗಿನ ಸಿದ್ದರಾಮಯ್ಯ ಸರಕಾರ ಸಿಬಿಐಗೆ ವಹಿಸಿತ್ತು. 2017ರ ಸೆ.5ರಂದು ತನಿಖೆ ಆರಂಭಿಸಿದ ಸಿಬಿಐ, ಇನ್ನೂ ತನಿಖೆ ನಡೆಸುತ್ತಲೇ ಇದೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ.ಜಾರ್ಜ್‌ ರಾಜೀನಾಮೆ ನೀಡಿದ್ದರು.

ಇತ್ತೀಚೆಗೆ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ದಿಢೀರನೆ ರಾಜೀನಾಮೆ ನೀಡಿದ್ದರು. ಆಗ ಭಾರೀ ಊಹಾಪೋಹಗಳು ಸೃಷ್ಟಿಯಾಗಿದ್ದವು. ಆದರೆ ಆ ಬಳಿಕ ಈ ವಿಚಾರ ತಣ್ಣಗಾಗಿತ್ತು. ಅಣ್ಣಾಮಲೈ ಅವರು ತಮಿಳುನಾಡಿನ ಬಿಜೆಪಿ ಘಟಕದ ನೇತೃತ್ವ ವಹಿಸುತ್ತಾರೆ ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ