ಆ್ಯಪ್ನಗರ

ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಗೆ ಜಮೀರ್‌ ಅಹ್ಮದ್‌: ಸಿದ್ದು ನಡೆಗೆ ಮುಸ್ಲಿಂ ಮುಖಂಡರಿಂದಲೇ ವಿರೋಧ!

ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಗೆ ಜಮೀರ್‌ ಅಹ್ಮದ್‌ ಅವರನ್ನು ನೇಮಕ ಮಾಡಲು ಸಿದ್ದರಾಮಯ್ಯ ಅವರು ನಡೆಸಿರುವ ಪ್ರಯತ್ನಕ್ಕೆ ಅಲ್ಪಸಂಖ್ಯಾತ ಮುಖಂಡರೇ ತೀವ್ರ ವಿರೋಧ ವ್ಯಕ್ತ ಪಡಿಸಿದ್ದು, ದಶಕಗಳಿಂದ ದುಡಿಯುತ್ತಿರುವ ಮುಸ್ಲಿಂ ಸಮುದಾಯದ ಬೇರಾವ ನಾಯಕರೂ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

Vijaya Karnataka Web 17 Jan 2020, 10:41 pm
ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಗೆ ಜಮೀರ್‌ ಅಹ್ಮದ್‌ ಅವರನ್ನು ನೇಮಕ ಮಾಡಲು ಸಿದ್ದರಾಮಯ್ಯ ಅವರು ನಡೆಸಿರುವ ಪ್ರಯತ್ನಕ್ಕೆ ಕಾಂಗ್ರೆಸ್‌ ಅಲ್ಪಸಂಖ್ಯಾತ ಮುಖಂಡರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ.
Vijaya Karnataka Web Siddaramaiah


ಕಾಂಗ್ರೆಸ್‌ ಮುಖಂಡ ಎ.ಆರ್‌.ಮುಜ್ಮಿಲ್‌ ಹುಸೈನ್‌ ಈ ಸಂಬಂಧ ಟ್ವೀಟ್‌ ಮಾಡಿದ್ದು, ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ''ಜಮೀರ್‌ ಕಾಂಗ್ರೆಸ್‌ಗೆ ಬಂದು ಒಂದೂವರೆ ವರ್ಷವಷ್ಟೇ ಆಗಿದೆ. ಸಚಿವ ಸ್ಥಾನವನ್ನೂ ಕೊಟ್ಟಾಗಿದೆ. ಜೆಡಿಎಸ್‌ ತೊರೆದುಬಂದ ಈ ವ್ಯಕ್ತಿಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಕೊಡುಗೆ ಏನು? ಸಿದ್ದರಾಮಯ್ಯ ಅವರೇ ದಶಕಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಮುಸ್ಲೀಂ ಸಮುದಾಯದ ಬೇರಾವ ನಾಯಕರೂ ನಿಮಗೆ ಕಾಣುತ್ತಿಲ್ಲವೇ? ಎಂದು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರ ಶಿಫಾರಸಿಗೆ ಮನ್ನಣೆ ನೀಡದೆ ಪಕ್ಷ ನಿಷ್ಠ ಹಾಗೂ ಜಾತ್ಯತೀತ ಮನೋಭಾವದ ನಾಯಕರೊಬ್ಬರಿಗೆ ಈ ಹುದ್ದೆ ನೀಡಬೇಕು ಎಂದು ಅವರು ಎಐಸಿಸಿ ವರಿಷ್ಠರನ್ನು ಆಗ್ರಹಿಸಿದ್ದಾರೆ. ಹುಸೈನ್‌ ಅವರ ಈ ಟ್ವೀಟ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಘೋಷಣೆ ಮೊದಲೇ ಡಿಕೆಶಿ ಟೆಂಪಲ್ ರನ್

ಮಾಜಿ ಸಚಿವ ಡಿಕೆ ಶಿವಕುಮಾರ್‌ಗೆ ವಿರೋಧಗಳ ನಡುವೆಯೂ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ನೀಡುವ ಮಹತ್ವದ ಘೋಷಣೆಯನ್ನು ಕಾಂಗ್ರೆಸ್ ಹೈ ಕಮಾಂಡ್‌ ಕೈಗೊಂಡಿದೆ. ಇದೀಗ ಡಿ ಕೆ ಶಿವಕುಮಾರ್‌ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅಧಿಕೃತ ಘೋಷಣೆಯನ್ನು ಮಾಡಿದ್ದಾರೆ. ಮುಂದೆ ಓದಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ