ಆ್ಯಪ್ನಗರ

ಸಿದ್ದು 13ನೇ ಬಜೆಟ್‌: ಫೆ 9ಕ್ಕೆ ಮಂಡನೆ ಸಾಧ್ಯತೆ

ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಹೊಡೆತದ ಮಧ್ಯೆಯೇ ತಮ್ಮ 13ನೇ ಬಜೆಟ್‌ಗಾಗಿ ಸಿಎಂ ಸಿದ್ದರಾಮಯ್ಯ ಸಿದಟಛಿತೆ ಆರಂಭಿಸಿದ್ದು, ಫೆ 9ರಂದು ಆಯವ್ಯಯ ಮಂಡನೆಗೆ ಮುಹೂರ್ತ ಆಖೈರುಗೊಳಿಸಿದ್ದಾರೆ.

Vijaya Karnataka 6 Nov 2017, 10:13 am
ಚುನಾವಣೆಗೆ ಮುನ್ನ ‘ಮತಪ್ರಿಯ’ ಆಯವ್ಯಯಕ್ಕೆ ಮುನ್ನುಡಿ
Vijaya Karnataka Web siddaramaiahs 13th budget
ಸಿದ್ದು 13ನೇ ಬಜೆಟ್‌: ಫೆ 9ಕ್ಕೆ ಮಂಡನೆ ಸಾಧ್ಯತೆ


ರಾಘವೇಂದ್ರ ಭಟ್‌,

ಬೆಂಗಳೂರು:
ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಹೊಡೆತದ ಮಧ್ಯೆಯೇ ತಮ್ಮ 13ನೇ ಬಜೆಟ್‌ಗಾಗಿ ಸಿಎಂ ಸಿದ್ದರಾಮಯ್ಯ ಸಿದಟಛಿತೆ ಆರಂಭಿಸಿದ್ದು, ಫೆ 9ರಂದು ಆಯವ್ಯಯ ಮಂಡನೆಗೆ ಮುಹೂರ್ತ ಆಖೈರುಗೊಳಿಸಿದ್ದಾರೆ.

ಏಪ್ರಿಲ್‌ನಲ್ಲಿ ಚುನಾವಣೆ ಎದುರಾಗುವುದರಿಂದ ಮತಬೇಟೆಗಾಗಿ ಜನಪ್ರಿಯ ಬಜೆಟ್‌ಗೆ ಒತ್ತು ನೀಡುವುದು ಒಂದೆಡೆ ಇದೆ. ಇನ್ನೊಂದೆಡೆ ರಾಜ್ಯದ ಹಣಕಾಸು ಸ್ಥಿತಿ ಆಧರಿಸಿ ‘ಧನ - ವಿನಿಯೋಗಕ್ಕೆ’ ‘ಕೈಕಚ್ಚ’ಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಹೀಗಾಗಿ ತಮ್ಮ ಈಗಿನ ಅಧಿಕಾರಾವಧಿ ಕೊನೆ ಬಜೆಟ್‌ನಲ್ಲಿ ‘ಬೇವಿನ ಕಹಿ ನೀಡುವರೋ, ಬೆಲ್ಲದ ಸಿಹಿ ಹಂಚುವರೋ’ ಎಂಬ ಕುತೂಹಲವೂ ಇದೆ.

ಇದರ ಮಧ್ಯೆಯೇ 2018-19ನೇ ಸಾಲಿನ ಬಜೆಟ್‌ ತಯಾರಿಗಾಗಿ ಎಲ್ಲ ಇಲಾಖೆಗಳಿಗೆ ಹಣಕಾಸು ಇಲಾಖೆ ಕಾರ್ಯದರ್ಶಿ ಹೃತ್ವಿಕ್‌ ಪಾಂಡೆ ಸುತ್ತೋಲೆ ಕಳುಹಿಸಿದ್ದು, ಅಂದಾಜು ವರದಿಯನ್ನು ಆದಷ್ಟು ಬೇಗ ಸಲ್ಲಿಸುವಂತೆ ಸೂಚನೆ ನೀಡಿದೆ. ಸುತ್ತೋಲೆಯಲ್ಲಿ ಕೆಲ ಬಿಗಿ ಕ್ರಮಗಳನ್ನು ಅನುಸರಿಸಲು ಸೂಚಿಸಲಾಗಿದೆ. ನಾನಾ ಕಾರ್ಯ ಯೋಜನೆಗಳಿಗೆ ಆರ್ಥಿಕ ವರ್ಷದ ಕೊನೆಯ ಮೂರು ತಿಂಗಳಲ್ಲಿ ಮೇಲೆ ಬಿದ್ದು ಹಣ
ಬಳಸಿಕೊಳ್ಳುವ ಪ್ರಯತ್ನ ನಡೆಸಲಾಗುತ್ತದೆ. ಹೀಗಾಗಿ ಧ್ರುವೀಕರಣ ಹಾಗೂ ವಿಲೀನಿಕರಣ ಪ್ರಕ್ರಿಯೆ ಕೊನೆಯ ಮೂರು ತಿಂಗಳಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತದೆ.

ಆದರೆ ಹಣಕಾಸು ಇಲಾಖೆ ಇದನ್ನು ‘ಅಶಿಸ್ತು ಎಂದು ಪರಿಗಣಿಸಿ, ಈ ಪ್ರಕ್ರಿಯೆಗೆ ಪ್ರಜ್ಞಾಪೂರ್ವಕ ಅಂಕುಶ ಹಾಕಲು ನಿರ್ಧರಿಸಿದೆ. ಹಣಕಾಸು ಇಲಾಖೆಯ ಈ ಸುತ್ತೋಲೆ ಕೆಲ ಸಚಿವರ ಕಣ್ಣು ಕೆಂಪಗಾಗಿಸಿದೆ.

ವೆಚ್ಚ ಕಡಿಮೆ ಸಂಭವ

ಬಜೆಟ್‌ ಸಿದ್ಧತೆಗೆ ನೀಡಿದ ಸುತ್ತೋಲೆಯಲ್ಲಿ ಪೂರಕ ಅಂದಾಜುಗಳಲ್ಲಿ ಹೆಚ್ಚಿನ ಅನುದಾನ ಒದಗಿಸುವುದು ಮತ್ತು ಮರು ವಿನಿಯೋಗ ತಪ್ಪಿಸುವುದಕ್ಕಾಗಿ ಅನುತ್ಪಾದಕ ಉದ್ದೇಶಿತ ಶೀರ್ಷಿಕೆ ಕಡಿಮೆ ಮಾಡುವಂತೆ ಸಲಹೆ ನೀಡಲಾಗಿದ್ದು,ಆಯವ್ಯಯದ ಅಂದಾಜು ವರದಿ ತಯಾರಿಸುವ ಅಧಿಕಾರಿಗಳು ಎಲ್ಲ ಕಾರ್ಯ ಯೋಜನೆಗಳನ್ನು ಪುನರಾವಲೋಕಿಸಿ ಸಮಾನ ಮತ್ತು ಹೊಂದಾಣಿಕೆ ಉದ್ದೇಶದ ಯೋಜನೆಗಳನ್ನು ವಿಲೀನಗೊಳಿಸುವಂತೆ ಸೂಚಿಸಿದೆ. ಹೀಗಾಗಿ ಸಿದ್ದರಾಮಯ್ಯನವರ 13ನೇ ಬಜೆಟ್‌ ವಿತ್ತೀಯ ಶಿಸ್ತಿನ ದೃಷ್ಟಿಯಿಂದ ಕೆಲ ಪ್ರಗತಿದಾಯಕ ಅಂಶಗಳನ್ನು ಹೊಂದುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ