ಆ್ಯಪ್ನಗರ

ಮತ್ತೆ ಸೋನಿಯಾ ಮೂಲ ಕೆದಕಿದ ಬಿಜೆಪಿ

ಬೆಂಗಳೂರು: ಚುನಾವಣಾ ಕಾವು ತೀವ್ರಗೊಂಡಿರುವ ಕರ್ನಾಟಕದಲ್ಲಿ ಮಂಗಳವಾರ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪ್ರಚಾರ ಆರಂಭಗೊಂಡ ಬೆನ್ನಲ್ಲೇ, ಸೋನಿಯಾ ಅವರ ಇಟಲಿ ಮೂಲವನ್ನು ಕೆದಕುವ ಮೂಲಕ ಬಿಜೆಪಿ ಮುಜಗರ ಮೂಡಿಸಿದೆ.

Vijaya Karnataka 9 May 2018, 7:16 am
ಬೆಂಗಳೂರು: ಚುನಾವಣಾ ಕಾವು ತೀವ್ರಗೊಂಡಿರುವ ಕರ್ನಾಟಕದಲ್ಲಿ ಮಂಗಳವಾರ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪ್ರಚಾರ ಆರಂಭಗೊಂಡ ಬೆನ್ನಲ್ಲೇ, ಸೋನಿಯಾ ಅವರ ಇಟಲಿ ಮೂಲವನ್ನು ಕೆದಕುವ ಮೂಲಕ ಬಿಜೆಪಿ ಮುಜಗರ ಮೂಡಿಸಿದೆ.
Vijaya Karnataka Web Sonia Gandhi


ಸೋನಿಯಾ ಅವರನ್ನು ಆ್ಯಂಟೊನಿಯಾ ಮೈನೊ ಎಂಬ ಅವರ ಮೂಲ ಹೆಸರಿನಿಂದ ಕರೆಯುವ ಮೂಲಕ ಬಿಜೆಪಿ ಸ್ಥಳೀಯ ಸೆಂಟಿಮೆಂಟ್‌ ಅನ್ನು ಬಳಸಿಕೊಳ್ಳುವ ಯತ್ನ ಮಾಡಿದೆ.

''ಶ್ರೀಮತಿ ಆ್ಯಂಟೊನಿಯಾ ಮೈನೊ ಅವರು ಉರುಳಿ ಹೋಗುತ್ತಿರುವ ತಮ್ಮ ಕೊನೆಯ ಕೋಟೆಯನ್ನು ಉಳಿಸಿಕೊಳ್ಳಲು ಈಗ ಕರ್ನಾಟಕಕ್ಕೆ ಬಂದಿದ್ದಾರೆ! ಮೇಡಮ್‌ ಮೈನೊ ಅವರೇ, ಭಾರತದ 10 ಅಮೂಲ್ಯ ವರ್ಷಗಳನ್ನು ವೃಥಾ ಮಾಡಿದವರಿಂದ ಕರ್ನಾಟಕದ ಜನತೆ ಕಲಿಯುವಂಥದ್ದು ಏನೂ ಇಲ್ಲ,'' ಎಂದು ರಾಜ್ಯ ಬಿಜೆಪಿಯ ಅಧಿಕೃತ ಖಾತೆಯಲ್ಲಿ ಟ್ವೀಟ್‌ ಮಾಡಲಾಗಿದೆ.

ಇದೇ ವೇಳೆ, ಕಾಂಗ್ರೆಸ್‌ ಪಕ್ಷ ಮಾಡಿದ್ದ 'ಆಮದಿತ ನಾಯಕರು' ಟೀಕೆಗೆ ಬಿಜೆಪಿ ಸೋನಿಯಾ ಅವರ ಉದಾಹರಣೆಯೊಂದಿಗೆ ತಿರುಗೇಟು ನೀಡಿದೆ.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಲ್ಲಿ ಚುನಾವಣಾ ಪ್ರಚಾರ ನಿರತ ಪ್ರಧಾನಿ ಮೋದಿ ಹಾಗೂ ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರನ್ನು 'ಉತ್ತರ ಪ್ರದೇಶದಿಂದ ಆಮದಾದವರು' ಎಂದು ಟೀಕಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ