ಆ್ಯಪ್ನಗರ

ಲೈಂಗಿಕ ಹಗರಣ: ಎಸ್‌ಪಿ ಗುಳೇದ್‌ ಎತ್ತಂಗಡಿ

ದಾವಣಗೆರೆಯ ಉದ್ಯಮಿ ಮಹಿಳೆಯೊಬ್ಬರ ಜತೆಗಿನ ಲೈಂಗಿಕ ಹಗರಣದ ಆರೋಪ ಎದುರಿಸುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೀಮಾಶಂಕರ್‌ ಗುಳೇದ್‌ ಅವರನ್ನು ಯಾವುದೇ ಹುದ್ದೆ ನೀಡದೆ ಸರಕಾರ ಸೋಮವಾರ ಎತ್ತಂಗಡಿ ಮಾಡಿದೆ.

Vijaya Karnataka 17 Jul 2018, 9:55 am
ಬೆಂಗಳೂರು: ದಾವಣಗೆರೆಯ ಉದ್ಯಮಿ ಮಹಿಳೆಯೊಬ್ಬರ ಜತೆಗಿನ ಲೈಂಗಿಕ ಹಗರಣದ ಆರೋಪ ಎದುರಿಸುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೀಮಾಶಂಕರ್‌ ಗುಳೇದ್‌ ಅವರನ್ನು ಯಾವುದೇ ಹುದ್ದೆ ನೀಡದೆ ಸರಕಾರ ಸೋಮವಾರ ಎತ್ತಂಗಡಿ ಮಾಡಿದೆ.
Vijaya Karnataka Web bheemashankar guled


ಖಾಸಗಿ ಟಿವಿ ವಾಹಿನಿಯಲ್ಲಿ ಈ ಬಗ್ಗೆ ವರದಿ ಪ್ರಸಾರವಾದ ಹಿನ್ನೆಲೆಯಲ್ಲಿ ಸರಕಾರ ಈ ಬಗ್ಗೆ ವರದಿ ನೀಡುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚನೆ ನೀಡಿತ್ತು. ವರದಿ ಲಭ್ಯವಾಗುತ್ತಿದ್ದಂತೆ, ಯಾವುದೇ ಹುದ್ದೆ ನೀಡದೆ ಗುಳೇದ್‌ ಅವರನ್ನು ವರ್ಗಾಯಿಸಲಾಗಿದೆ. ಅವರ ಜಾಗಕ್ಕೆ ಬೆಂಗಳೂರು ನಗರ ಸಂಚಾರ ಪಶ್ಚಿಮ ವಿಭಾಗದ ಡಿಸಿಪಿ ಟಿ.ಪಿ.ಶಿವಕುಮಾರ್‌ ಅವರನ್ನು ನಿಯೋಜಿಸಲಾಗಿದೆ.

ಈ ನಡುವೆ, ಲೋಕಾಯುಕ್ತ ಎಸ್ಪಿ ಡಾ. ಸುಮನಾ ಡಿ. ಪೇಣ್ಕರ್‌ ಅವರನ್ನು ಮಡಿಕೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸರಕಾರ ನಿಯೋಜಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ