ಆ್ಯಪ್ನಗರ

ರಾಜೀನಾಮೆ ಅಂಗೀಕಾರ ಪ್ರಕ್ರಿಯೆಗೆ ಚಾಲನೆ ನೀಡದ ಸ್ಪೀಕರ್‌

ಸುಪ್ರೀಂ ಕೋರ್ಟ್‌ ಆದೇಶ ಹಿನ್ನೆಲೆಯಲ್ಲಿ ಶಾಸಕರ ರಾಜೀನಾಮೆ ವಿಚಾರ ಇತ್ಯರ್ಥಗೊಳಿಸುವುದಕ್ಕೆ ಸ್ಪೀಕರ್‌ ಚಾಲನೆ ನೀಡಬಹುದೆಂಬ ನಿರೀಕ್ಷೆ ಬುಧವಾರದ ಮಟ್ಟಿಗೆ ಹುಸಿಯಾಗಿದ್ದು, ಯಾವುದೇ ಪ್ರಕ್ರಿಯೆಗೆ ಅವರು ಚಾಲನೆ ನೀಡಿಲ್ಲ.

Vijaya Karnataka 18 Jul 2019, 5:00 am
ಬೆಂಗಳೂರು : ಸುಪ್ರೀಂ ಕೋರ್ಟ್‌ ಆದೇಶ ಹಿನ್ನೆಲೆಯಲ್ಲಿ ಶಾಸಕರ ರಾಜೀನಾಮೆ ವಿಚಾರ ಇತ್ಯರ್ಥಗೊಳಿಸುವುದಕ್ಕೆ ಸ್ಪೀಕರ್‌ ಚಾಲನೆ ನೀಡಬಹುದೆಂಬ ನಿರೀಕ್ಷೆ ಬುಧವಾರದ ಮಟ್ಟಿಗೆ ಹುಸಿಯಾಗಿದ್ದು, ಯಾವುದೇ ಪ್ರಕ್ರಿಯೆಗೆ ಅವರು ಚಾಲನೆ ನೀಡಿಲ್ಲ.
Vijaya Karnataka Web speaker didnt start process of resignation acceptance
ರಾಜೀನಾಮೆ ಅಂಗೀಕಾರ ಪ್ರಕ್ರಿಯೆಗೆ ಚಾಲನೆ ನೀಡದ ಸ್ಪೀಕರ್‌


ಶ್ರೀನಿವಾಸಪುರದಿಂದ ಮಧ್ಯಾಹ್ನ 1 ಗಂಟೆ ಸುಮಾರಿಗೆ ದೊಮ್ಮಲೂರಿನಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ ಅವರು, ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಧಾನಸೌಧಕ್ಕೆ ಬಂದರು. ಮೂರು ಪಕ್ಷ ಗಳ ನಾಯಕರ ಭೇಟಿಗೆ ಆಗಮಿಸಿದ್ದರು. ಇದಾದ ಬಳಿಕ ತಮ್ಮ ಕಚೇರಿಯಿಂದ ತೆರಳಿದ ಅವರು ಕಾನೂನು ತಜ್ಞರ ಜತೆಗೆ ಚರ್ಚಿಸಿದರು. ಈಗಾಗಲೇ ರಾಜೀನಾಮೆ ಸಲ್ಲಿಸಿರುವ ಎಂ.ಟಿ.ಬಿ.ನಾಗರಾಜ್‌, ಸುಧಾಕರ್‌ ಹಾಗೂ ಗೋಪಾಲಯ್ಯ ವಿಚಾರಣೆಗೆ ಬುಧವಾರ ದಿನಾಂಕ ನಿಗದಿಯಾಗಿತ್ತು. ಆದರೆ ಪ್ರತಿಯೊಬ್ಬರು ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಹಲ್ಲು ನೋವಿನ ಹಿನ್ನೆಲೆಯಲ್ಲಿ ಮಾಜಿ ಸಚಿವ ರೋಷÜನ್‌ ಬೇಗ್‌ ಕೂಡಾ ವಿಚಾರಣೆಗೆ ಬಂದಿಲ್ಲ. ಹೀಗಾಗಿ ರಾಜೀನಾಮೆ ವಿಚಾರಣೆ ಪ್ರಕ್ರಿಯೆ ನಡೆದಿಲ್ಲ. ಅದೇ ರೀತಿ ಹೊಸದಾಗಿ ವಿಚಾರಣೆ ನಡೆಸುವುದಕ್ಕೂ ಸ್ಪೀಕರ್‌ ದಿನಾಂಕ ನಿಗದಿ ಮಾಡಿಲ್ಲ.



- ಸ್ಪೀಕರ್‌ ಏನು ಮಾಡಬಹುದು? -

- ರಾಜೀನಾಮೆ ಸಲ್ಲಿಸಿರುವ ಎಲ್ಲಾ ಶಾಸಕರಿಗೂ ವಿಚಾರಣೆಗೆ ಹಾಜರಾಗುವಂತೆ ದಿನಾಂಕ ನಿಗದಿಪಡಿಸಿ ಮತ್ತೊಮ್ಮೆ ನೋಟಿಸ್‌ ಜಾರಿಗೊಳಿಸಬಹುದು.

- ಸುಪ್ರೀಂ ಕೋರ್ಟ್‌ ಕಾಲಮಿತಿ ನಿಗದಿಪಡಿಸದೇ ಇರುವುದರಿಂದ ಹಾಗೂ ಅಧಿವೇಶನ ನಡೆಯುತ್ತಿರುವುದರಿಂದ ಶಾಸಕರ ವಿಚಾರಣೆಗೆ ಮತ್ತಷ್ಟು ವಿಳಂಬ ಮಾಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ