ಆ್ಯಪ್ನಗರ

‘ಜೋರಾಗಿ ಮಾತಾಡ್ತಿದ್ದೀರಲ್ವಾ, ಮಾಸ್ಕ್‌ ಹಾಕೊಳ್ಳೇಬೇಕು ನೀವು’; ಡಿಕೆಶಿಗೆ ಸ್ಪೀಕರ್ ಸೂಚನೆ

ವಿಧಾನಸಭಾ ಅಧಿವೇಶನದ ಎರಡನೇ ದಿನದ ಕಲಾಪ ಇಂದು ನಡೆಯುತ್ತಿದ್ದು, ಸರ್ಕಾರದ ವಿರುದ್ಧ ಕೊರೊನಾ ಅವ್ಯವಸ್ಥೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡುತ್ತಿದ್ದರು. ಈ ವೇಳೆ ಅವರು ಮಾಸ್ಕ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ಸ್ಪೀಕರ್ ಕಾಗೇರಿ, ಜೋರಾಗಿ ಮಾತಾಡ್ತಿದ್ದೀರಲ್ವಾ, ಮಾಸ್ಕ್‌ ಹಾಕೊಳ್ಳೇಬೇಕು ನೀವು ಎಂದು ಸೂಚಿಸಿದರು.

Vijaya Karnataka Web 22 Sep 2020, 1:58 pm
ಬೆಂಗಳೂರು: ವಿಧಾನಸಭಾ ಅಧಿವೇಶನ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬೆಳಗ್ಗೆ ಸಿಎಂ ಬಿಎಸ್‌ವೈ ಹಲವು ವಿಧೇಯಕಗಳನ್ನು ಮಂಡಿಸಿದರು. ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಕೊರೊನಾ ಹಗರಣದ ಕುರಿತು ಸುದೀರ್ಘವಾಗಿ ಮಾತನಾಡಿದರು.
Vijaya Karnataka Web SESSION


ಕೊರೊನಾ ಉಪಕರಣಗಳ ಹಗರಣ ವಿಚಾರವಾಗಿ ಸದನದಲ್ಲಿ ಮತ್ತೆ ಲೆಕ್ಕ ಕೇಳಿದ ಸಿದ್ದರಾಮಯ್ಯ..!

ಸದ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸದನದಲ್ಲಿ ಮಾತನಾಡುತ್ತಿದ್ದು, ಡಿಕೆಶಿ ಮಾತನಾಡುವ ವೇಳೆ ಸದನದಲ್ಲಿ ಮಾಸ್ಕ್‌ ಧರಿಸುವಂತೆ ಸ್ಪೀಕರ್‌ ಸೂಚಿಸಿದ ಘಟನೆ ನಡೆಯಿತು. ಸರ್ಕಾರದ ವಿರುದ್ಧ ಆಕ್ರೋಶಭರಿತವಾಗಿ ಮಾತನಾಡುತ್ತಿದ್ದ ಡಿಕೆ ಶಿವಕುಮಾರ್ ಮಾಸ್ಕ್‌ ಧರಿಸಿರಲಿಲ್ಲ. ಇದನ್ನು ಗಮನಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಸ್ಕ್‌ ಧರಿಸುವಂತೆ ಸೂಚನೆ ನೀಡಿದರು.

ಭೂ ಸುಧಾರಣೆ ತಿದ್ದುಪಡಿ, ಲೋಕಾಯುಕ್ತ ಸೇರಿದಂತೆ ಸದನದಲ್ಲಿ ಹಲವು ವಿಧೇಯಕಗಳ ಮಂಡನೆ

ಕೊರೊನಾ ಭೀತಿಯ ಸಮಯದಲ್ಲಿ ನೀವು ಜೋರಾಗಿ ಮಾತಾಡೋದ್ರಿಂದ ಬೇರೆಯವರಿಗೆ ಸಮಸ್ಯೆ ಆಗುತ್ತೆ. ಹೀಗಾಗಿ ಮಾಸ್ಕ್‌ ಧರಿಸಿ ಮಾತನಾಡಿ ಎಂದು ಸ್ಪೀಕರ್ ಡಿಕೆಶಿಗೆ ಸೂಚಿಸಿದರು. ನಂತರ ಮಾರ್ಷಲ್‌ಗಳಿಂದ ಮಾಸ್ಕ್‌ ತರಿಸಿಕೊಂಡ ಡಿಕೆ ಶಿವಕುಮಾರ್ ಮತ್ತೆ ಆಕ್ರೋಶಭರಿತವಾಗಿ ಸರ್ಕಾರದ ವಿರುದ್ಧ ತಮ್ಮ ಮಾತುಗಳನ್ನು ಮುಂದುವರೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ