ಆ್ಯಪ್ನಗರ

ಕಾಲಹರಣ ಮಾಡೋದು ಸರಿಯಲ್ಲ : ರಮೇಶ್‌ ಕುಮಾರ್‌

ಕಾಲಹರಣ ಮಾಡಬಾರದು ಎಂದು ಸ್ವತಃ ಸ್ಪೀಕರ್‌ ರಮೇಶ್‌ ಕುಮಾರ್‌ ಕಲಾಪದಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ, ಅತೃಪ್ತ ಶಾಸಕರ ರಾಜೀನಾಮೆ ಸನ್ನಿವೇಶದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಇಂತಹ ಪರಿಸ್ಥಿತಿ ಬೇರೆ ಯಾವ ಸ್ಪೀಕರ್‌ಗೂ ಬಂದಿರಲಿಕ್ಕಿಲ್ಲ ಎಂದು ಸ್ಪೀಕರ್ ಹೇಳಿದ್ದಾರೆ.

Vijaya Karnataka Web 22 Jul 2019, 1:22 pm
ಬೆಂಗಳೂರು: ಕಾಲ ಹರಣ ಮಾಡೋದು ಸರಿಯಲ್ಲ. ಇದು ಬಜೆಟ್‌ ಸೆಷನ್‌ ಅಲ್ಲ ಎಂದು ಸ್ಪೀಕರ್ ರಮೇಶ್‌ ಕುಮಾರ್‌ ಹೇಳಿದ್ದಾರೆ.
Vijaya Karnataka Web ramesh


ವಿಶ್ವಾಸಮತ ಯಾಚನೆ ಚರ್ಚೆಯ ವೇಳೆ ಸೋಮವಾರ ಕಲಾಪ ಆರಂಭವಾದಂತೆಯೇ ಮಾತನಾಡಿದ ರಮೇಶ್‌ ಕುಮಾರ್‌, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರ ಕ್ರಿಯಾಲೋಪದ ಮೇಲೆ ರೂಲಿಂಗ್‌ ನೀಡಿದರು. ಅತೃಪ್ತಶಾಸಕರಿಗೂ ವಿಪ್‌ ಜಾರಿಗೊಳಿಸಲು ಅವಕಾಶವಿದೆ ಎಂದು ಉತ್ತರಿಸಿದರು.

Karnataka Crisis: ತಾಜಾ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ


ಸಚಿವ ಕೃಷ್ಣಭೈರೇಗೌಡ ಚರ್ಚೆಯಲ್ಲಿ ಪಾಲ್ಗೊಂಡಿದ್ದು, ಬಿಜೆಪಿ ನಾಯಕರೋರ್ವರು ಅತೃಪ್ತ ಶಾಸಕರೊಂದಿಗೆ ಮಾತನಾಡಿದ ಆಡಿಯೋ ವಿಚಾರಗಳನ್ನು ಪ್ರಸ್ತಾಪಿಸಿದರು. ಇದು ಆಪರೇಷನ್‌ ಕಮಲ ಅಲ್ಲವೇ ಎಂದು ಪ್ರಶ್ನಿಸಿದರು. ಇದೇ ವೇಳೆ ಸದನದಲ್ಲಿ ಹಾಜರಿಲ್ಲ ಶಾಸಕರ ಬಗ್ಗೆ ಆರೋಪ ಮಾಡುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌, ಭೈರೇಗೌಡ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್‌ ರಮೇಶ್‌ ಕುಮಾರ್, ಸದನಕ್ಕೆ ಗೌರವ ಕೊಡುವುದು ನಮ್ಮ ಕರ್ತವ್ಯ. ಅಪವಾದ ಹೊತ್ತಿಕೊಳ್ಳಲು ನಾನು ಸಿದ್ಧನಿಲ್ಲ. ಕಾನೂನಿನಂತೆ ನಡೆಯುತ್ತೇನೆ. ಇದು ಬಜೆಟ್‌ ಅಧಿವೇಶನ ಅಲ್ಲ. ಇದೊಂದು ವಿಚಿತ್ರ ಸನ್ನಿವೇಶ. ವಿಶ್ವಾಸಮತ ಒಂದೇ ವಿಚಾರ ಇಲ್ಲಿರೋದು. ಕಾಲಹರಣ ಮಾಡಬಾರದು ಎಂದರು.

ಸ್ವಾತಂತ್ರ್ಯ ಬಂದ ಬಳಿಕ ಬಹುಶಃ ಯಾವ ಸಭಾಧ್ಯಕ್ಷರಿಗೂ ನನಗೆ ಬಂದ ದಯನೀಯ ಸ್ಥಿತಿ ಬಂದಿಲ್ಲ. ಜನ ಆರಿಸಿ ಕಳಿಸಿದ್ದಾರೆ, ಅವರು ಸದನಕ್ಕೆ ಬರಬೇಕಲ್ಲವೇ? ಬಾರದೇ ಇರುವುದಕ್ಕೆ ನನ್ನಿಂದ ಅನುಮತಿಯನ್ನೂ ಪಡೆದಿಲ್ಲ. ಸಂವಿಧಾನಬದ್ಧವಾಗಿ ಅವರೆಲ್ಲರೂ ಶಾಸಕರಾಗಿ ಆಯ್ಕೆಯಾಗಿ ಬಂದವರು. ಈ ರೀತಿಯ ಪರಿಸ್ಥಿತಿ ನಿರ್ಮಾಣವಾದರೆ ಸದನದ ಗೌರವ ಏನಾಗಬೇಕು ಎಂದು ರಮೇಶ್‌ ಕುಮಾರ್‌ ಕಳವಳ ವ್ಯಕ್ತಪಡಿಸಿದರು.

ಅಲ್ಲ ಭೈರೇಗೌಡರೇ, ಆಡಿಯೋ ಬಗ್ಗೆ ಇಷ್ಟೆಲ್ಲ ಮಾಹಿತಿ ಕಲೆಹಾಕಿ, ದಾಖಲೆ ತಂದಿದ್ದೀರಲ್ಲ. ಸಂಶೋಧನೆ ಮಾಡುವ ಬದಲು, ಅತೃಪ್ತರಲ್ಲೇ ಮಾತನಾಡಿದ್ದರೆ, ನನಗೆ ಈ ರಗಳೇ ಇರುತ್ತಿಲ್ಲವಲ್ಲ
ಸ್ಪೀಕರ್‌ ರಮೇಶ್‌ ಕುಮಾರ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ