ಆ್ಯಪ್ನಗರ

ಎಸ್‌ಟಿ ಮೀಸಲು: ವಿಚಾರಣೆ ಮುಂದೂಡಿಕೆ

ಉದ್ಯೋಗ ಮತ್ತು ಉನ್ನತ ಶಿಕ್ಷ ಣದಲ್ಲಿ ಪರಿಶಿಷ್ಟ ಪಂಗಡದ(ಎಸ್‌.ಟಿ) ಮೀಸಲು ಪ್ರಮಾಣವನ್ನು ಶೇ 3ರಿಂದ ಶೇ7ಕ್ಕೆ ಹೆಚ್ಚಳ ಮಾಡುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಬುಧವಾರಕ್ಕೆ ಮುಂದೂಡಿದೆ.

Vijaya Karnataka 2 Jul 2019, 5:00 am
ಬೆಂಗಳೂರು: ಉದ್ಯೋಗ ಮತ್ತು ಉನ್ನತ ಶಿಕ್ಷ ಣದಲ್ಲಿ ಪರಿಶಿಷ್ಟ ಪಂಗಡದ(ಎಸ್‌.ಟಿ) ಮೀಸಲು ಪ್ರಮಾಣವನ್ನು ಶೇ 3ರಿಂದ ಶೇ7ಕ್ಕೆ ಹೆಚ್ಚಳ ಮಾಡುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಬುಧವಾರಕ್ಕೆ ಮುಂದೂಡಿದೆ.
Vijaya Karnataka Web st reservation
ಎಸ್‌ಟಿ ಮೀಸಲು: ವಿಚಾರಣೆ ಮುಂದೂಡಿಕೆ


ನಾಯಕ ವಿದ್ಯಾರ್ಥಿ ಓಕ್ಕೂಟದ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಟ್ರಸ್ಟ್‌ ) ಕಾರ್ಯದರ್ಶಿ, ಗೋಕಾಕನ ಲಕ್ಷ ಣರಾವ್‌ ಜಾರಕಿಹೊಳಿ ಸಲ್ಲಿಸಿರುವ ಪಿಐಎಲ್‌ ಅನ್ನು ಸಿಜೆ ಎ.ಎಸ್‌.ಓಕ್‌ ಹಾಗೂ ನ್ಯಾ. ಎಚ್‌.ಟಿ.ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತು.

ಸರಕಾರಿ ವಕೀಲ ಡಿ.ನಾಗರಾಜ್‌, ''ಅರ್ಜಿದಾರರು ಪ್ರಸ್ತಾಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿಯವರ ಜೊತೆ ಇಂದೇ (ಜುಲೈ 1)ಮಾತುಕತೆ ನಿಗದಿಯಾಗಿದೆ. ಆದರೆ ಅವರೊಬ್ಬರೇ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ. ಇದು ಸರಕಾರದ ನೀತಿಗೆ ಸಂಬಂಧಿಸಿದ್ದು ಮತ್ತು ಸಚಿವ ಸಂಪುಟ ಈ ಕುರಿತು ಆಖೈರು ತೀರ್ಮಾನ ಕೈಗೊಳ್ಳಲಿದೆ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ