ಆ್ಯಪ್ನಗರ

ಕಚೇರಿ ಪೂಜೆ ನೆಪದಲ್ಲಿ ರಾಜ್ಯ ನಾಯಕರ ಮೀಟಿಂಗ್‌; ಬಿಎಸ್‌ವೈಗೆ ಬ್ರೇಕ್‌ ಹಾಕಲು ಬಿಜೆಪಿಯಲ್ಲೇ ಸೈಲೆಂಟ್‌ ‘ಸ್ಕೆಚ್‌’?

ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಮೀಸಲು ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಸೇರ್ಪಡೆಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಮೇರೆಗೆ ಶುಕ್ರವಾರದ ಸಂಪುಟದ ಅಜೆಂಡಾದಲ್ಲಿ ತಡರಾತ್ರಿ ಸೇರಿಸಿದ್ದು ಹಲವರನ್ನು ಹುಬ್ಬೇರಿಸುವಂತೆ ಮಾಡಿತ್ತು. ಹಲವು ರೀತಿಯ ರಾಜಕೀಯ ವ್ಯಾಖ್ಯಾನಗಳಿಗೂ ಕಾರಣವಾಗಿತ್ತು. ತಕ್ಷಣ ದಿಲ್ಲಿಯಲ್ಲಿದ್ದ ನಾಯಕರಿಂದ ಗುರುವಾರ ತಡರಾತ್ರಿ ರಾಜಕೀಯ ಚಟುವಟಿಕೆ ಬಿರುಸುಗೊಳಿಸಿದರು.

Vijaya Karnataka Web 28 Nov 2020, 6:52 am
ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಚೇರಿ ಪೂಜೆ ನೆಪದಲ್ಲಿ ದಿಲ್ಲಿಗೆ ತೆರಳಿದ್ದ ರಾಜ್ಯದ ಹಲವು ಸಚಿವರು ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಬಿ.ಎಲ್‌.ಸಂತೋಷ್‌ ಸೇರಿದಂತೆ ಹಲವರನ್ನು ಭೇಟಿಯಾಗಿ ರಾಜ್ಯದ ವಿದ್ಯಮಾನಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಸಿಎಂ ಯಡಿಯೂರಪ್ಪ ವಿರುದ್ಧ ರಣತಂತ್ರ ರೂಪಿಸಿದರೇ? ಇಂತಹದೊಂದು ಚರ್ಚೆ ಈಗ ರಾಜಕೀಯ ವಲಯ ಅದರಲ್ಲೂ ಬಿಜೆಪಿ ಪಾಳೆಯದಲ್ಲೇ ದಟ್ಟವಾಗಿ ಹರಿದಾಡುತ್ತಿದೆ.
Vijaya Karnataka Web BSY
ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ


ಗೃಹ ಮಂಡಳಿಯಿಂದ ₹7,275 ಕೋಟಿ ವೆಚ್ಚದಲ್ಲಿ 98 ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧಾರ

ವೀರಶೈವ ಲಿಂಗಾಯತ ಸಮುದಾಯವನ್ನು ಕೇಂದ್ರ ಸರಕಾರದ ಹಿಂದುಳಿದ ವರ್ಗಗಳ ಮೀಸಲು ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ಮೇರೆಗೆ ಶುಕ್ರವಾರದ ಸಂಪುಟದ ಅಜೆಂಡಾದಲ್ಲಿ ತಡರಾತ್ರಿ ಸೇರಿಸಿದ್ದು ಹಲವರನ್ನು ಹುಬ್ಬೇರಿಸುವಂತೆ ಮಾಡಿತ್ತು. ಹಲವು ರೀತಿಯ ರಾಜಕೀಯ ವ್ಯಾಖ್ಯಾನಗಳಿಗೂ ಕಾರಣವಾಗಿತ್ತು. ತಕ್ಷಣ ದಿಲ್ಲಿಯಲ್ಲಿದ್ದ ನಾಯಕರಿಂದ ಗುರುವಾರ ತಡರಾತ್ರಿ ರಾಜಕೀಯ ಚಟುವಟಿಕೆ ಬಿರುಸುಗೊಳಿಸಿದರು.

ಸಂಪುಟ ಕಸರತ್ತು: ಹೋಟೆಲ್‌ನಲ್ಲಿ ‘ಮುಂಬೈ ಟೀಂ’ ಸಭೆ..! ಆಪರೇಷನ್‌ ಶಾಸಕರ ಮಂತ್ರಿಗಿರಿಗೆ ಒಗ್ಗಟ್ಟಿನ ಸಂದೇಶ

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಯಡಿಯೂರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಉದ್ದೇಶಿತ ಅಜೆಂಡಾ ಕೈಬಿಡುವಂತೆ ಸೂಚನೆ ನೀಡುತ ತನಕ ವಿರಮಿಸಿಲ್ಲ. ಅಷ್ಟರ ಮಟ್ಟಿಗೆ ಯಡಿಯೂರಪ್ಪ ಅವರ ನಡೆಗೆ ಅಡ್ಡಗಾಲು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಸಿ.ಟಿ.ರವಿ ಕಚೇರಿ ಪೂಜೆಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಡಿಸಿಎಂ ಲಕ್ಷ್ಮಣ ಸವದಿ, ಸಚಿವರದ ಆರ್‌.ಅಶೋಕ್‌, ಜಗದೀಶ್‌ ಶೆಟ್ಟರ್‌, ರಮೇಶ್‌ ಜಾರಕಿಹೊಳಿ, ಶಾಸಕ ಅರವಿಂದ ಬೆಲ್ಲದ್‌, ಮೇಲ್ಮನೆ ಸದಸ್ಯ ಸಿ.ಪಿ.ಯೋಗೇಶ್ವರ್‌ ಸೇರಿದಂತೆ ಹಲವರು ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರೆ ಅರುಣ್‌ ಸಿಂಗ್‌ ಅವರನ್ನು ಲಕ್ಷ್ಮಣ ಸವದಿ ಹಾಗೂ ಅಶೋಕ್‌ ಕೂಡ ಭೇಟಿಯಾಗಿ ಚರ್ಚಿಸಿದ್ದಾರೆ.

ಸಿಎಂ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನ: ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು

ಈ ಮಧ್ಯೆ ರಾಜ್ಯದವರೇ ಆದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಸವದಿ ಹಾಗೂ ಅಶೋಕ್‌ ಅವರು ಭೇಟಿಯಾಗಿರುವುದು ಕುತೂಹಲ ಕೆರಳಿಸಿದೆ. ದಿಲ್ಲಿಗೆ ತೆರಳಿದ ಬಳಿಕ ಸವದಿ-ಅಶೋಕ್‌ ಜತೆಯಾಗಿ ಓಡಾಡುತ್ತಿರುವುದು ಎಲ್ಲರ ಗಮನ ಸೆಳೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ