ಆ್ಯಪ್ನಗರ

ಯಡಿಯೂರಪ್ಪ ಡೈರಿ: ಮೂಲ ಚೀಟಿ ಒದಗಿಸಲು ವಿಫಲ, ಅದು ಫೋರ್ಜರಿ ಡೈರಿ ಎಂದ ಐಟಿ ಇಲಾಖೆ

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್. ಯಡಿಯೂರಪ್ಪ ಅವರು ಬಿಜೆಪಿ ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಸಲ್ಲಿಸಿದ್ದಾರೆ ಎನ್ನಲಾದ ಡೈರಿ ಸುಳ್ಳು ಎಂದು ಐಟಿ ಇಲಾಖೆಯ ಕರ್ನಾಡಕ ಹಾಗೂ ಗೋವಾ ವಿಭಾಗದ ಡಿಜಿ ಬಾಲಕೃಷ್ಣನ್ ಮಾಹಿತಿ ನೀಡಿದ್ದಾರೆ.

Vijaya Karnataka Web 23 Mar 2019, 9:53 pm
ಬೆಂಗಳೂರು: ಲೋಕಸಭೆ ಚುನಾವಣೆ ಹೊತ್ತಲ್ಲೇ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸೇರಿದ್ದೆನ್ನಲಾದ ಡೈರಿ ದಾಖಲೆಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು ಭಾರೀ ಸಂಚಲನ ಮೂಡಿಸಿದೆ. ಯಡಿಯೂರಪ್ಪ ಸಿಎಂ ಆಗಲು ಬಿಜೆಪಿ ನಾಯಕರಿಗೆ ಕಪ್ಪ ಕಾಣಿಕೆ ನೀಡಿದ್ದಾರೆ ಎಂದು ಬಿಡುಗಡೆಯಾಗಿರುವ ಆ ಡೈರಿಯಲ್ಲಿ ದಾಖಲಾಗಿತ್ತು.
Vijaya Karnataka Web yeddyurappa 1


ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್. ಯಡಿಯೂರಪ್ಪ ಅವರು ಬಿಜೆಪಿ ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಸಲ್ಲಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಆನ್‌ಲೈನ್ ಮ್ಯಾಜಿನ್ ಪ್ರಕಟಿಸಿದ ಸುದ್ದಿಗೆ ಬಳಸಿಕೊಂಡ ದಾಖಲೆ ನಕಲಿ. ಅದು ಫೋರ್ಜರಿ ಮಾಡಲಾದ ಡೈರಿ ಎಂದು ಐಟಿ ಇಲಾಖೆ ಸ್ಪಷ್ಟನೆ ನೀಡಿದೆ. ಈ ಸಂಬಂಧ ಐಟಿ ಇಲಾಖೆಯ ಕರ್ನಾಡಕ ಹಾಗೂ ಗೋವಾ ವಿಭಾಗದ ಡಿಜಿ ಬಾಲಕೃಷ್ಣನ್ ಮಾಹಿತಿ ನೀಡಿದ್ದಾರೆ.

''ಆನ್‌ಲೈನ್‌ ಮ್ಯಾಗಜೀನ್‌ ಒಂದರಲ್ಲಿ ಬಂದಿರುವ ಲೂಸ್ ಶೀಟ್ ಆಧಾರಿತ ಸುದ್ದಿ ಕುರಿತು ಪತ್ರಕರ್ತರು ಕೇಳಿದಾಗ, ''ಐಟಿ ಲಾಖೆ ದಿಲ್ಲಿ ಕಚೇರಿ ಈ ಕುರಿತು ಈಗಾಗಲೇ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಅದರಲ್ಲಿ ಲೂಸ್ ಶೀಟ್ ಕುರಿತು ಸ್ಪಷ್ಟವಾಗಿ ತಿಳಿಸಲಾಗಿದೆ. ಚೀಟಿಯ ನೈಜತೆ ಪರಿಶೀಲನೆಗಾಗಿ ಲ್ಯಾಬ್ಗೆ ಕಳುಹಿಸಿದಾಗ ಅವರು ಮೂಲ ಚೀಟಿ ನೀಡಬೇಕು ಎಂದು ಕೇಳಿದರು. ಆದರೆ, ಆ ಮೂಲ ಚೀಟಿಯನ್ನು ಐಟಿ ಇಲಾಖೆಗೆ ಒದಗಿಸಲು ಸಂಬಂಧಪಟ್ಟವರು ವಿಫಲರಾದರು. ಈ ಮೂಲಕ ಅದೊಂದು ಫೋರ್ಜರಿ ಚೀಟಿ ಎಂದು ತಿಳಿದು ಬರುತ್ತದೆ. ಚೀಟಿ ಅಥವಾ ಡೈರಿಯಲ್ಲಿ ಬರೆಯಲಾಗಿರುವ ವಿಷಯವನ್ನು ಕಾಲ ಕಾಲಕ್ಕೆ (ರೆಗ್ಯೂಲರ್) ಬರೆದಿರುವಂತೆ ಕಾಣುತ್ತಿಲ್ಲ'' ಎಂದು ಬಾಲಕೃಷ್ಣನ್ ತಿಳಿಸಿದರು.

ಇನ್ನೊಂದೆಡೆ, ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಯಡಿಯೂರಪ್ಪ ಡೈರಿ ವಿವರಗಳು 'ಕಪೋಲಕಲ್ಪಿತ' ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕ ಕಾಂಗ್ರೆಸ್‌ನ ಈ ಆಪಾದನೆ ವಿರುದ್ಧ ಕಿಡಿಕಾರಿದೆ. ಇದೊಂದು ಸುಳ್ಳಿನ ಕಂತೆ, ಹತಾಶ ಕಾಂಗ್ರೆಸ್‌ನ ನಕಲಿ ದಾಖಲೆ ಎಂದು ಬಿಜೆಪಿ ತಿರುಗೇಟು ನೀಡಿದೆ. ರಾಜಕೀಯ ದುರುದ್ದೇಶದ ಈ ಸುಳ್ಳು ಆಪಾದನೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಯಡಿಯೂರಪ್ಪ ಸಹ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ